Thursday, July 10, 2014

ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಪ್ರಸ್ತಾವನೆ

ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯಪ್ರಸ್ತಾವನೆ


ವಾಗೀಶ್ವರೀ ಪ್ರತಿದಿನಂ ಮಮರಕ್ಷದೇವೀ. ಸರಸ್ವತಿಯ ಸ್ವರೂಪರಾದ ನಿಮಗೆಲ್ಲರಿಗೂ ವಂದನೆಗಳು.
  ನಮ್ಮ್ಮ  ಜೀವನದಲ್ಲಿ ಯಾವುದಾದರೂ ಹೊಸವಿಚಾರವು ಎದುರಾದಾಗ; ಅದನ್ನು ಕುತೂಹಲದಿಂದ; ಆಸಕ್ತಿಯಿಂದ; ತಾಳ್ಮೆಯಿಂದ ವಿವರವಾಗಿ ಪರಿಶೀಲಿಸಿ, ಅದು ಉಪಯುಕ್ತವೋ; ಅನುಪಯುಕ್ತವೋ? ಎಂಬುದನ್ನು ನಿರ್ಧರಿಸುವುದು ವಿವೇಕಿಗಳ ಸ್ವಭಾವ.
  ಹೀಗೆ ಎದುರಾದ ಹೊಸ ವಿಚಾರವನ್ನು ಅರ್ಥಮಾಡಿಕೊಳ್ಳ್ಳುವ ಸಾಮಥ್ರ್ಯ  ತಮಗಿಲ್ಲವೆಂಬ ಕಾರಣದಿಂದ ಅದನ್ನು ದೂರವಿರಿಸುವುದು; ನಿರಾಕರಿಸುವುದು; ನಿರ್ಲಕ್ಷಿಸುವುದು; ಉಪೇಕ್ಷಿಸುವುದು ವಿವೇಕದ ಲಕ್ಪ್ಷಣವಲ್ಲ ಎಂಬುದು ಸರ್ವವಿದಿತ.
  ಜಾಗತೀಕರಣದಿಂದಾಗಿ ಇಂದಿನ ಸಮಾಜದಲ್ಲಿ ಸುಲಭವಾದುದು; ಸರಳವಾದುದು ಸರ್ವಶ್ರೇಷ್ಠ ಎಂಬ ಭ್ರಮೆ ನಮ್ಮ್ಮಲ್ಲಿ ಬಹಳಷ್ಟು ಜÀನಗಳನ್ನು ಆವರಿಸಿದೆ! ಕನ್ನಡಸಾಹಿತ್ಯದ ಪರಿಸರದಲ್ಲಿ  ‘ಪ್ರಾಚೀನವಾದುದು ಮೌಲಿಕವಾದುವೆಂಬ ನೆಲೆಯಲ್ಲಿ‘ ಬಹಳ ಕಠಿಣವಾಗಿದ್ದ ಪಂಪನಕಾವ್ಯವನ್ನು ಹಿಂದಿನ ತಲೆÀಮಾರಿನವರು ಶ್ರಮವಹಿಸಿ ಅಧ್ಯಯನಮಾಡಿ, ತಾವು ಅರ್ಥಮಾಡಿಕೊಂಡು; ಅದನ್ನು ಬೇರೆಯವರಿಗೆ ಸರಳವಾಗಿ ವಿವರಿಸಿದ ಕಾರಣದಿಂದಾಗಿ ಇಂದು ಪಂಪಮಾತ್ರವಲ್ಲ; ರನ್ನ; ಜನ್ನ; ಪೊನ್ನ; ರತ್ನಾಕರವರ್ಣಿ; ಕುಮಾರವ್ಯಾಸ; ರಾಘವಾಂಕ ಮುಂತಾದ ಪ್ರಾಚೀನಕವಿಗಳ ಕಾವ್ಯವು ಜೀವಂತವಾಗಿರಲು ಸಾಧ್ಯಾಗಿದೆ.

  ಇವುಗಳ ಪೈಕಿ ಪಂಪನನ್ನು ಕುರಿತು ಪ್ರಾರಂಭಿಕ ಹಂತದಲ್ಲಿ ಶ್ರಮಿಸಿದವರು ಮುಳಿಯ ತಿವ್ಮ್ಮಪ್ಪಯ್ಯನವರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇವರ ಅಮೂಲ್ಯವಾದ ಪ್ರಯತ್ನದಿಂದಾಗಿ; ಪಂಪನು ಇಂದು ಜನಾನುರಾಗಿಯಾಗಿದ್ದಾನೆ.
  ಆದರೆ, ಪಂಪನಿಗಿಂತಲೂ ಪ್ರಾಚೀನನೂ; ಈ ಜಗತ್ತಿನ ಏಕೈಕ ಸಾಹಿತ್ಯ ಸಾಮ್ರಾಟನೂ ಆದ ಕವಿ ಕುಮುದೇಂದುಮುನಿಯ ‘ಸಿರಿಭೂವಲಯ’ ಎಂಬ ಮಹೋನ್ನತವಾದ ಕೃತಿಗೆ ಇನ್ನೂ ಇಂಥ ಜನಪ್ರಿಯತೆಯ ಯೋಗ ಕೂಡಿಬಂದಿಲ್ಲ ಎಂಬ ಸಂಗತಿಯನ್ನು ನಿಮ್ಮ ಮುಂದಿರಿಸುತ್ತ; ಅದನ್ನು ಕುರಿತು ಕೆÀಲವು ವಿಚಾರಗಳನ್ನು ನಿಮ್ಮ್ಮ  ಮುಂದಿರಿಸಲು ಬಂದಿದ್ದೇನೆ.
*  *  *

  ಯಾವುದೋ ಪೂರ್ವಜನ್ಮದ ಸುಕೃತದಿಂದಾಗಿ ನಾವು ಇಂದು ಜಗತ್ತಿನ ಒಂದು ಅತ್ಯಂತ ಅಚ್ಚರಿಯ ಕಾವ್ಯದ ವಿಚಾರವನ್ನು ತಿಳಿಯುವುದಕ್ಕಾಗಿ ಇಲ್ಲಿ ಸೇರಿದ್ದೇವೆ. ನಮಗೆಲ್ಲರಿಗೂ ಈ ಸದವಕಾಶವನ್ನು ಕಲ್ಪಿಸಿಕೊಟ್ಟ ವ್ಯವಸ್ಥಾಪಕರಿಗೆ ಮೊದಲಿಗೆ ನನ್ನ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.  ನೀವು ಈಗ ತಿಳಿಯಲಿರುವ ಮಾಹಿತಿಗಳೆಲ್ಲವೂ ಖಚಿತವಾದವುಗಳು. ಇಲ್ಲಿ ‘ಅಂತೆÉ-ಕಂತೆ’ ಗಳ ಸಂತೆಯಪುರಾಣ ಯಾವುದೂಯಿಲ್ಲ !

  ಕಳೆದ ಸುಮಾರು 30 ವರ್ಷಗಳ ಅವಧಿಯ ಅಧ್ಯಯನದಿಂದ ಈ ಸಿರಿಭೂವಲಯಗ್ರಂಥಕ್ಕೆ ಸಂಬಂಧಿಸಿದಂತೆ ನನಗೆ ಖಚಿತವೆಂದು ತಿಳಿದ ಸಂಗತಿಗಳನ್ನು ಇಲ್ಲಿ ಸೂಚಿಸಲಿದ್ದೇÀನೆ. ಇವುಗಳ ಪೈಕಿ ಯಾವುದಾದರೂ ಮಾಹಿತಿಯಲ್ಲಿ ವ್ಯತ್ಯಾಸವಿದೆಯೆಂದು ನೀವು ಭಾವಿಸುವುದಾದಲ್ಲಿ ಕೂಡಲೇ ಅದರ ವಿಚಾರವಾಗಿ ವಿವರಣೆ ಕೇಳಬೇಡಿ.  ಈ ವಿಚಾರಮಂಡನೆಯು ಪೂರ್ಣವಾದನಂತರ ಅದನ್ನು ಕುರಿತು ನನ್ನೊಂದಿಗೆ ವಿವರವಾಗಿ ಚರ್ಚಿಸಬಹುದು ಎಂಬುದು ನನ್ನ ಮನವಿ.
         
*  *  *
  ಕನ್ನಡಭಾಷೆಯ ಪ್ರಾಚೀನಕವಿ ಕುಮುದೇಂದುಮುನಿಯು ರಚಿಸಿರುವ ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ ಎಂಬ ಕನ್ನಡ ಅಂಕಕಾವ್ಯವು ಜಗತ್ತಿನ ಹತ್ತನೇಅಚ್ಚರಿಯೆಂಬ ಗೌರವಕ್ಕೆ ಪಾತ್ರವಾಗಿದೆ. ಜಗತ್ತಿನ ಏಕೈಕ ಅಂಕಕಾವ್ಯವಾಗಿರುವ ಇದನ್ನು ಜಗತ್ತಿನ ಮೊಟ್ಟಮೊದಲನೆಯ ‘ವಿಶ್ವಕೋಶ’ ಎಂದು ಪರಿಗಣಿಸಬೇಕಾಗಿದೆ.

  ಸುಮಾರು 16000 ಪುಟಗಳ ವ್ಯಾಪ್ತಿಯ (ಈ ಪುಟಗಳನ್ನು ‘ಚಕ್ರ’ ಎಂದು ಸೂಚಿಸಲಾಗಿದೆ) ಈ ಬೃಹತ್ ಕೃತಿಯನ್ನು 9 ಖಂಡಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳಿರುತ್ತವೆ. ಪೀಠಿಕಾ ರೂಪದ ಪ್ರಥಮ ಖಂಡದಲ್ಲಿ 59 ಅಧ್ಯಾಯಗಳಿದ್ದು, ಅವುಗಳ ಅಕ್ಷರರೂಪಾಂತರವು 1952 ವೇಳೆಗೇ ಸಿದ್ಧವಾಗಿತ್ತು.
  ಇವುಗಳ ಪೈಕಿ 33 ಅಧ್ಯಾಯಗಳುಮಾತ್ರ ಮುದ್ರಣವಾಗಿ, ಉಳಿದವು ಹಸ್ತಪ್ರತಿಯ ರೂಪದಲ್ಲೇ ಉಳಿದಿತ್ತು. ಈಗ 34 ರಿಂದ 59ನೇ  ಅಧ್ಯಾಯದ ವರೆಗಿನ ಮೂಲಸಾಹಿತ್ಯ ಹಾಗೂ ಅಂತರ್ಸಾಹಿತ್ಯದಪರಿಚಯ ಮುದ್ರಣವಾಗಿದೆ.
  ಇಂಥ ಅಚ್ಚರಿಯ ಸಾಹಿತ್ಯಕೃತಿಯು ಜಗತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ; ಭಾರತೀಯ ಸಾಹಿತ್ಯಕ್ಷೇತ್ರದಲ್ಲಷ್ಟೇ ಅಲ್ಲ; ಕನ್ನಡಸಾಹಿತ್ಯ ಕ್ಷೇತ್ರದಲ್ಲೇ ಇದುವರೆವಿಗೂ ಅಜ್ಞಾತವಾಗಿದ್ದಿತು!  ಕನ್ನಡದ ಈ ಅಂಕಕಾವ್ಯವು ಕನ್ನಡ ಅಕ್ಷರಲಿಪಿಯಲ್ಲಿ ಮುದ್ರಣವಾಗಿ ಸುಮಾರು 60 ವರ್ಷಗಳು ಕಳೆದಬಳಿಕ ಈಚೆಗೆ ಈ ಕಾವ್ಯದ ಸರಳಪರಿಚಯವು ಕನ್ನಡಭಾಷೆಯಲ್ಲಿ ಪ್ರಕಟವಾಗಿದೆ!!
  ಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನ ಸಕಲ ಸಾಹಿತ್ಯಕೃತಿಗಳ ಸಾರವನ್ನೂ ಒಂದೆಡೆಯಲ್ಲಿ ಕಟ್ಟಿರಿಸಿರುವ ಈ ಅಚ್ಚರಿಯ ಕಾವ್ಯದ ರಚನಾ ಕ್ರಮವು ಬಹಳ ಸಂಕೀರ್ಣವಾದುದು. ಇಲ್ಲಿನ ಬರಹವು ಮೂಲಾಕ್ಷರಕ್ರಮದಲ್ಲಿದೆ. ಸಂಯುಕ್ತಾಕ್ಷರದ ಬಳಕೆಯಿಲ್ಲ. ಕ್‍ಅನ್‍ನ್‍ಅಡ್‍ಅ ಎಂದು ಬರೆದಿರುವುದನ್ನು ಕನ್ನಡ ಎಂದು ಓದಿಕೊಳ್ಳಬೇಕು!

  ಜಟಿಲವಾದ ಈ ಕಾವ್ಯ ರಚನಾ ಶೈಲಿಯು ಕನ್ನಡಭಾಷೆಯ ಜಾಯಮಾನಕ್ಕೇ ವಿನೂತನವಾದುದು, ಅಪರಿಚಿತÀವಾದುದು, ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದ್ದು, ವೈಶಿಷ್ಟ್ಯಪೂರ್ಣವಾದ ಈ ಪ್ರಾಚೀನ ಕಾವ್ಯವು ಹೆಚ್ಚು ಪ್ರಚಾರಕ್ಕೆ ಬಾರದಿರುವಲ್ಲಿ ಇವು ಕೆಲವು ಪ್ರಮುಖ ಕಾರಣಗಳಾಗಿತ್ತು. ಈಗ ಪರಿಸರ ಬದಲಾಗಿದೆ. ಅದರ ಸರಳಪರಿಚಯವು ಈಗ ನಿಮ್ಮ  ಮುಂದೆ ಬರುತ್ತಿದೆ.
*  *  *
ಕನ್ನಡದ ಆದಿಕವಿ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತ       ಒಂದು ಸಂಕ್ಷಿಪ್ತ ಇತಿಹಾಸ:
  ಜಗತ್ತಿನಲ್ಲಿ ಮಾನವ ಸಂಕುಲವು ‘ಮನು’ಗಳಿಂದ ಪ್ರಾರಂಭವಾಗಿದೆ. ಈ ರೀತಿಯ ಮನುಗಳು 14 ಜನ.  ಇವರಲ್ಲಿ ಮೊದಲನೆಯ ಮನು ‘ಸ್ವಾಯಂಭೂ’ ಇವನ ಮಗ ಅಗ್ನಿಧ್ರ ; ಇವನ ಮಗ ನಾಭಿರಾಜ; ಇವನ ಮಗ ಋಷಭದೇವ. ಇವನೇ ಜೈನಸಂಪ್ರÀದಾಯದ ಮೂಲ ಪುರುಷ. ಜೈನಸಂಪ್ರದಾಯದವರು ತಮ್ಮ 24 ಜನ ತೀರ್ಥಂಕರರನ್ನು ಪರಮಾದರದಿಂದ ಗೌರವಿಸುತ್ತಾರೆ.
   ಈ 24 ಜನ ತೀರ್ಥಂಕರರಲ್ಲಿ ಮೊದಲನೆಯವನು ಋಷಭsÀದೇವ. ಸಮಸ್ತಭೂಮಂಡಲವನ್ನೂಆಳಿ, ವೃದ್ಧಾಪ್ಯದಲ್ಲಿ ವೈರಾಗ್ಯಹೊಂದಿ, ವಾನಪ್ರಸ್ತಕ್ಕೆ ತೆರಳುವಮುನ್ನ ಋಷಭದೇವನು ತನ್ನ ನಾಲ್ವರು ಮಕ್ಕಳಿಗೂ ಲೌಕಿಕಸಂಪತ್ತನ್ನು ಹಂಚಿಕೊಡುತ್ತಾನೆ.
  ಹಿರಿಯಮಗ ಭರತನಿಗೆ ಸಕಲ ಸಾಮ್ರಾಜ್ಯವೂ; ಎರಡನೆಯವನಾದ ಬಾಹುಬಲಿಗೆ ಪೌದನಪುರವೂ; ಇವನಸೋದರಿಯಾದ ಬ್ರಾಹ್ಮಿಗೆ ‘ಅ’ಕಾರಾದಿಯಾದ 64 ಅಕ್ಷರಗಳೂ; ಕಿರಿಯಳಾದ ಸುಂದರಿಗೆ ಸೊನ್ನೆ ಸಹಿತವಾದ 1ರಿಂದ 9 ರವರೆಗಿನ ಅಂಕಿಗಳೂ ದೊರೆಯುತ್ತವೆ.
  ಕನ್ನಡ ಅಂಕಿಗಳೇ ಅಕ್ಷರಗಳು; ಅಕ್ಷರಗಳೇ ಅಂಕಿಗಳು ಎಂಬುದನ್ನೂ ಹಾಗೂ ಇವುಗಳ ಮೂಲ ಸ್ವರೂಪವನ್ನೂ ತನ್ನ ಹೆಣ್ಣು ಮಕ್ಕಳಿಬ್ಬರಿಗೆ ತಿಳಿಸಿಕೊಟ್ಟ ಆದಿತೀರ್ಥಂಕರ ಋಷಭದೇವನಿಗೆ ಉಂಟಾದ ಕೇವಲಜ್ಞಾನದ ಸಾರವೇ ಈ ಸಿರಿಭೂವಲಯ ಗ್ರಂಥದ ಮೂಲ.

   ಈ ಅಕ್ಷರಗಳು ಹಾಗೂ ಅಂಕಿಗಳು ಪರಸ್ಪರ ಸಮವೆಂದೂ; ಇವುಗಳ ಸಹಾಯದಿಂದ ಜಗತ್ತಿನ ಸಕಲ ಶಾಸ್ತ್ರ; ಜ್ಞಾನ-ವಿಜ್ಞಾನ ವಿಚಾರಗಳನ್ನೂ ತಿಳಿದು, ಕೇವಲಜ್ಞಾನವನ್ನು ಪಡೆಯಬಹುದೆಂಬ ರಹಸ್ಯವನ್ನು ಋಷಭದೇವನು ಕಿರಿಯಮಗಳಾದ ಸುಂದರಿಗೆ ತಿಳಿಕೊಡುತ್ತಾನೆ.
  ಋಷಭದೇವನಿಂದ ಪ್ರವಹಿಸಿದ ದೇವವಾಣಿಯನ್ನು ಆದಿಮನ್ಮಥ ಎನಿಸಿದ ಗೊಮ್ಮಟದೇವನು ಅಂಕಬಂಧದಲ್ಲಿ ಕಟ್ಟಿರಿಸಿ, ತನ್ನಣ್ಣ ಭರತನಿಗೆ ಬೋಧಿಸಿದನು.  ಋಷಭದೇವನ ಗಣಧರರÀ ಮೂಲಕ ಈ ದಿವ್ಯವಾಣಿಯು   ಮುಂದಿನ ತೀರ್ಥಂಕರ ಅಜಿತನಿಗೆ ಪ್ರಾಪ್ತವಾಯಿತು.
   ಇದೇ ಕ್ರಮದಲ್ಲಿ ಒಬ್ಬರಾದಮೇಲೆ ಇನ್ನೊಬ್ಬರಂತೆ ಮುಂದಿನ 21 ಜನ ತೀರ್ಥಂಕರರವರೆವಿಗೆ ಇದು ಉಪದೇಶವಾಗಿ ಹರಿದುಬಂದಿತು. ಈ ತೀರ್ಥಂಕರರ ನಡುವಿನ ಕಾಲಾವಧಿಯು ಕೆಲವೊಮ್ಮೆ ಮೂರುಸಾವಿರ ವರ್ಷಗಳಷ್ಟು ದೀರ್ಘಾವಧಿಯದೆಂದು ಜೈನಸಂಪ್ರದಾಯದ ಪ್ರಾಚೀನ ಗ್ರಂಥಗಳ ಹೇಳಿಕೆ. ಪ್ರಾಚೀನ ತೀರ್ಥಂಕರರ ಜೀವನಾವಧಿಯು ಲಕ್ಷಾಂತರ ವರ್ಷಗಳು. ಇವರೆಲ್ಲರೂ ಆಧುನಿಕ ಚರಿತ್ರೆಯ ಲೆಕ್ಕಾಚಾರಗಳ ವ್ಯಾಪ್ತಿಗೆ ಸಿಲುಕದವರು.
  ನೇಮಿಯು 22ನೇ ತೀರ್ಥಂಕರ. ನೇಮಿಯಿಂದ ಈ ದೇವವಾಣಿಯು ದ್ವಾರಕೆಯ ಶ್ರೀಕೃಷ್ಣನಿಗೆ ಉಪದೇಶವಾಯಿತು. ಶ್ರೀಕೃಷ್ಣನಿಂದ ಉಪದೇಶಿತವಾದ ಈ ದೇವವಾಣಿಯನ್ನು ವ್ಯಾಸಮಹರ್ಷಿಯು ತನ್ನ ಜಯಾಖ್ಯಾನದಲ್ಲಿ 163 ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದನು. ಯುದ್ಧವಿಮುಖನಾಗಲಿದ್ದ ಅರ್ಜುನನಿಗೂ ಶ್ರೀಕೃಷ್ಣನು ಈ ಭಗವದ್ಗೀತೆಯನ್ನು ಬೋಧಿಸಿದನು. (ಕ್ತಿ.ಪೂ. 1954)
  23ನೇ ತೀರ್ಥಂಕರನಾದ ಪಾಶ್ರ್ವನಾಥನ ಶಿಷ್ಯನಾಗಿದ್ದ ಕಪಿಲವಸ್ತುವಿನ ಸಿದ್ಧಾರ್ಥನು (ಗೌತಮ) ‘ಬುದ’್ಧನಾಗಿ ಬೌದ್ಧ ಮತವನ್ನು ಸ್ಥಾಪಿಸಿದನು. (ಕ್ರಿ.ಪೂ.450?)
  24ನೇ ತೀರ್ಥಂಕರನಾದ ಮಹಾವೀರನಿಂದ (ಕ್ರಿ.ಪೂ.201?) ಈ ದೇವವಾಣಿಯು ಅವನ ಗಣಧರ ಗೌತಮನಿಗೆ ಉಪದೇಶವಾಯಿತು. ಗೌತಮ ಗಣಧರನು ಈ ಭಗವದ್ವಾಣಿಯನ್ನು ಪೂರ್ವೇಕಾವ್ಯ ಎಂಬ ಹೆಸರಿನಿಂದ ಗ್ರಂಥಸ್ಥಗೊಳಿಸಿದನು. ಇದಕ್ಕೆ ಮಂಗಳಪಾಹುಡ ಎಂದೂ; ಕರಣಸೂತ್ರ ಎಂದೂ ಹೆಸರಾಯಿತು.
  ಗೌತಮನು ಈ ದೇವವಾಣಿಯನ್ನು ಶ್ರೇಣಿಕನೆಂಬ ರಾಜನಿಗೆ ಉಪದೇಶಿಸಿದನು. (ಕ್ರಿ.ಪೂ.130) ಹತ್ತುಜನ ಗುರುಪರಂಪರೆಯಾದನಂತರ ಕ್ರಿ.ಪೂ. 50 ರಲ್ಲಿ ಪ್ರಭಾವಸೇನನೆಂಬ ಗುರುವು ಕನ್ನಡ; ಸಂಸ್ಕøತ; ಪ್ರಾಕೃತ ಪ್ರಧಾನವಾಗಿ ಮಂಗಳಪಾಹುಡವನ್ನು ನಿರೂಪಿಸಿದನು.

  ಇದೇ ಗುರುಪರಂಪರೆಯು ಮುಂದುವರೆದು ಕ್ರಿ.ಶ. 400 ರಲ್ಲಿ ಭುತಬಲಿ ಎಂಬುವವನು ಈ ದೇವವಾಣಿಯನ್ನು ‘ಭೂವಲಯ’ ಎಂಬ ಹೆಸರಿನಿಂದ ನಿರೂಪಿಸಿದನು. ಪುನಃ ಈ ಗುರುಪರಂಪರೆಯು ಮುಂದುವರೆದು ಷಟ್ಖಂಡಾಗಮಗಳ ರೂಪದಲ್ಲಿದ್ದ ಈ ದೇವವಾಣಿಗೆ ವೀರಸೇನಾಚಾರ್ಯನು ವ್ಯಾಖ್ಯಾನ ರಚಿಸಿದನು.(ಕ್ರಿ.ಶ.780)
  ಇದು ಮುಂದೆ ಧವಳಗಳೆಂದು ಪ್ರಸಿದ್ಧವಾದುವು. ವೀರಸೇನನÀ ಶಿಷ್ಯನಾದ ಜಿನಸೇನನು ಬಹಳ ಪ್ರಾಚೀನವಾದ ಮಹಾಪುರಾಣವನ್ನು ಸಂಗ್ರಹಿಸಿದ್ದಾನೆ. 24ನೇ ತೀರ್ಥಂಕರ ಮಹಾವೀರನು ನಿರ್ವಾಣ ಹೊಂದಿದ ಸಾವಿರದ ಒಂದೂವರೆ ವರ್ಷಗಳಿಗೆ ಸರಿಯಾಗಿ ಕುಮುದೇಂದು ಮುನಿಯು ಕ್ರಿ.ಶ. 800 ರರ ಸುಮಾರಿನಲ್ಲಿ ನೂತನ-ಪ್ರಾಕ್ತನ ಎಂಬ ಎರಡು ಕ್ರಮಗಳಲ್ಲಿದ್ದ ಭಗವದ್ವಾಣಿಯನ್ನು ಕನ್ನಡ ಅಂಕಿಗಳಲ್ಲಿ ನವಮಾಂಕಕ್ರಮದಲ್ಲಿ, ಸರ್ವಭಾಷಾಮಯೀ ಕನ್ನಡ ಭಾಷೆಯಲ್ಲಿ ತಾಳೆಯೋಲೆಗಳಲ್ಲಿ ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ ಎಂಬ ಹೆಸರಿನ ಕನ್ನಡ ಅಂಕಕಾವ್ಯವಾಗಿ ನಿರೂಪಿಸಿದನು. ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಹಿಂದಿರಲಿಲ್ಲ; ಮುಂದೆ ನಿರ್ಮಾಣವಾಗಲಾರದು ಎಂಬ ಅತ್ಯದ್ಭುತವಾದ ಗ್ರಂಥವು ಈ ರೀತಿಯಲ್ಲಿ ರಚನೆಯಾಯಿತು.

  ಕುಮುದೇಂದುಮುನಿಯು ಈ ಗ್ರಂಥವನ್ನು ಗಂಗರಸ ಸೈಗೊಟ್ಟ ಸಿವಮಾರನಿಗೂ (ಕ್ರಿ.ಶ. 780-812) ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನಿಗೂ(ಕ್ರಿ.ಶ.814-880) ಉಪದೇಶಿಸಿದ. ಮುಂದೆ ಇದೇ ಸೇನಗಣದಲ್ಲಿ ದಂಡಾಧೀಶನಾಗಿದ್ದ ಸೇನನೆಂಬುವವನ ಧರ್ಮಪತ್ನಿ ಮಲ್ಲಿಕಬ್ಬೆಯು ಈ ಸಿರಿಭೂವಲಯ ಗ್ರಂಥವನ್ನು ಕೋರಿಕಾಗದದಲ್ಲಿ ಪ್ರತಿಮಾಡಿಸಿ, ತನ್ನ ಗುರುವಾಗಿದ್ದ ಮಾWನಂದಿಗೆ (ಮಾಘಣನಂದಿ, ಕ್ರಿ.ಶ. 1200?)ಶಾಸ್ತ್ರದಾನ ಮಾಡಿದಳು.

 ಈ ಪ್ರತಿಗಳ ಪೈಕಿ ಒಂದು ಪ್ರತಿಯು ಬೆಂಗಳೂರು ತುಮಕೂರು ರೈಲ್ವೇ ರಸ್ತೆಯಲ್ಲಿರುವ ದೊಡ್ಡಬೆಲೆ ಎಂಬ ಗ್ರಾಮದಲ್ಲಿ ನೆಲೆಸಿದ್ದ ಸುಪ್ರಸಿದ್ಧ ಆಯುರ್ವೇದ ವೈದ್ಯ ಧರಣೇಂದ್ರ ಪಂಡಿತರಲ್ಲಿ ವಂಶಪಾರಂಪರ್ಯವಾಗಿ ಉಳಿದುಬಂದಿತ್ತು. ಅವರು ತಮ್ಮ ಗೆಳೆಯರಾಗಿದ್ದ ಚಂದಾಪಂಡಿತರೊಂದಿಗೆ ಈ ಸಿರಿಭೂವಲಯ ಗ್ರಂಥವನ್ನು ಅಂಕಲಿಪಿಯಲ್ಲೇ ಓದಿ; ವ್ಯಾಖ್ಯಾನ ಮಾಡುತ್ತಿದ್ದುದು ಒಂದು ಚಾರಿತ್ರಿಕ ಸಂಗತಿ.

  ಸಿರಿಭೂವಲಯದ ಓದಿನಿಂದ ಮಹಾನ್ ಮೇಧಾವಿಗಳಾಗಿದ್ದ ಈ ಪಂಡಿತರು ಆಯುರ್ವೇದ; ಜೋತಿಷ್ಯ; ಪಶುವೈದ್ಯ; ಲೋಹಶಾಸ್ತ್ರ ಮುಂತಾದ ವಿಚಾರಗಳಲ್ಲಿ ವಿಶೇಷವಾದ ಜನಮನ್ನಣೆ ಪಡೆದವರಾಗಿದ್ದರು. ಈ ಧರಣೇಂದ್ರÀ ಪಂಡಿತರು ಕ್ರಿ. ಶ. 1913ರ ಸುಮಾರಿನಲ್ಲಿ ಕಾಲವಶರಾಗಿದ್ದಾರೆ.
  ಮುಂದೆ ಈ ಅಚ್ಚ್ಚರಿಯ ಪ್ರಾಚೀನ ಅಂಕಕಾವ್ಯವನ್ನು ಬೆಂಗಳೂರಿನಲ್ಲಿ ಆಯುರ್ವೇದೀಯ ಔಷಧಿ ಮಾರಾಟದ ಪ್ರತಿನಿಧಿಯಾಗಿದ್ದ ಯಲ್ಲಪ್ಪಶಾಸ್ತ್ರಿ ಎಂಬುವವರು ತಮ್ಮ ಸ್ವಾಧೀನಕ್ಕೆ ಪಡೆದು; ತಮ್ಮ ಖಾಸಗೀ ಗ್ರಂಥಾಲಯದಲ್ಲಿ ಸಂಗ್ರಹಿಸಿದರು.
  ಸರ್ವಭಾಷಾಮಯೀ; ಸರ್ವಶಾಸ್ತ್ರಮಯೀ; ಸರ್ವಜ್ಞಾನಮಯೀ ಎಂದು ಪ್ರಖ್ಯಾತವಾಗಿದ್ದ ಸಿರಿಭೂವಲಯದಲ್ಲಿ ‘ರಸವಿದ್ಯೆ’ ಇದೆ. ಅದನ್ನು ಅಭ್ಯಸಿಸಿ ಚಿನ್ನವನ್ನು ತಯಾರಿಸಿ, ಶ್ರೀಮಂತರಾಗಬಹುದೆಂದು ಕನಸುಕಂಡಿದ್ದ ಪಂಡಿತ ಯಲ್ಲಪ್ಪಶಾಸ್ತ್ರಿಗಳಿಗೆ ಈ ಅಂಕಕಾವ್ಯದ ರಾಶಿಯನ್ನು ಕಂಡು ಭ್ರಮನಿರಸನವಾಯಿತು!

  ಈ ಅಂಕಕಾವ್ಯದ ರಹಸ್ಯವನ್ನು ತೆರೆದುನೋಡುವ ಸಾಮಥ್ರ್ಯ ಅವರಲ್ಲಿರಲಿಲ್ಲ. ನಿರುಪಯೋಗಿಯಾದ ಈ ಅಂಕಕಾವ್ಯವನ್ನು ಅವರು ತಮ್ಮ ಗ್ರಂಥಭಂಡಾರದಿಂದ ಹೊರಹಾಕುವ ಸಿದ್ಧತೆಯಲ್ಲಿದ್ದರು.

  1927ರ ಸುಮಾರಿನಲ್ಲಿ ಸ್ವಾತಂತ್ರ್ಯ ಚಳವಳಿಯ ಕಾರಣದಿಂದ ಬೆಂಗಳೂರು ಸೇರಿದ ಗಾಂಧಿವಾದಿ ಕರ್ಲಮಂಗಲಂ ಶ್ರೀಕಂಠಯ್ಯನವರೆಂಬ ಪ್ರತಿಭಾಶಾಲಿಯು (ಮುಂದೆ ಇವರು ಬಹುಭಾಷಾವಿಶಾರದರಾದವರು) ಯಲ್ಲಪ್ಪಶಾಸ್ತ್ರಿಯವರಿಗೆ ಪರಿಚಯವಾಗಿ, ಈ ಗ್ರಂಥದ ರಹಸ್ಯ ಬಿಡಿಸುವ ಸಂಕಲ್ಪಮಾಡಿ, ಅದನ್ನೇ ತಮ್ಮ ಜೀವಿತದ ಗುರಿಯಾಗಿಸಿಕೊಂಡು ಸಾಧನೆಮಾಡಿದರು.
  ಈ ದಿಸೆಯಲ್ಲಿ ಪಾಣಿನಿ, ವೀರಸೇನ, ಜಿನಸೆನ, ಅಕಳಂಕ, ವಿದ್ಯಾನಂದÀ, ಭಟ್ಟಾಕಳಂಕ ಮೊದಲಾದ ಪ್ರಾಚೀನ ಶಾಸ್ತ್ರಗ್ರಂಥಕರ್ತರ ಶಿಕ್ಷಣ, ಧವಳಟೀಕಾ, ಜಯಧವಳಟೀಕಾ, ರಾಜವಾರ್ತಿಕ, ತತ್ವಾರ್ಥಶ್ಲೋಕ, ವಾರ್ತಿಕಾಲಂಕಾರ, ಶಬ್ದಾನುಶಾಸನ, ಮಹಾಪುರಾಣ, ತಿಲೇಯಪಣ್ಣತ್ತಿ ಮುಂತಾದ ಹಲವಾರು ಗ್ರಂಥಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಸರ್ವಭಾಷಾಮಯೀಭಾಷಾ ಕನ್ನಡಭಾಷೆಯಲ್ಲಿ 64 ಧ್ವನಿ ಸಂಕೇತಗಳ ವರ್ಣಮಾಲೆ ಇದೆಯೆಂಬ ನಿರ್ಧಾರಕ್ಕೆ ಬಂದರು.

  ಅದೇ ದಿಸೆಯಲ್ಲಿ ಶ್ರಮಿಸಿ, ಕನ್ನಡದ 64 ಧ್ವನಿಸಂಕೇತಗಳ ವರ್ಣಮಾಲೆಯನ್ನು ಗುರುತಿಸಿ, ಚಕ್ರಗಳಲ್ಲಿದ್ದ ಅಂಕಿಗಳನ್ನು ಅಕ್ಷರಗಳಿಗೆ ಪರಿವರ್ತಿಸಿ, ಹಗಲಿರುಳೂ ದುಡಿದು ಅಂಕಲಿಪಿಯ ಗ್ರಂಥದಿಂದ ಕನ್ನಡ ಲಿಪಿಯ-ಭಾಷೆಯ-ಸಾಂಗತ್ಯ ರೂಪದಲ್ಲಿ ಅರ್ಥಪೂರ್ಣವಾದ ಪದ್ಯಗಳನ್ನು ಪಡೆಯುವಲ್ಲಿ ಯಶಸ್ಸು ಹೊಂದಿದರು. ಹಾಗೆ ಪಡೆದ ಕಾವ್ಯವನ್ನು ಸುಸಂಬಂದ್ಧವಾಗಿ ಸಂಶೋಧಿಸಿದಾಗ, ಅದರಲ್ಲಿ ದೊರೆಯುವ ಅಂತರ್ಸಾಹಿತ್ಯದ ಪ್ರವಾಹವನ್ನೂ ಗುರುತಿಸುಲ್ಲಿ ಯಶಸ್ಸು ಗಳಿಸಿದರು. ರಾಜ್ಯ; ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಕಾರ್ಯವನ್ನೂ ನಡೆಸಿದ್ದಾಯ್ತು.

  ಕೆ. ಶ್ರೀಕಂಠಯ್ಯನವರ ನಿಕಟವರ್ತಿಗಳಾಗಿದ್ದ ಗೋಕರ್ಣದ ಮಹರ್ಷಿ ದೇವರಾತರ ಪ್ರಯತ್ನದಿಂದಾಗಿ, ರಾಷ್ಟ್ರಪತಿ ಡಾ| ರಾಜೇಂದ್ರಪ್ರಸಾದರ ಸೂಚನೆಯಂತೆ ಭಾರತ ಸರ್ಕಾರದವರು ಕನ್ನಡದ ಈ ಅಪೂರ್ವಗ್ರಂಥದ ಮೈಕ್ರೋಫಿಲಂ ಮಾಡಿಸಿ, ರಾಷ್ಟ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಸಂರಕ್ಷಿಸುವಕಾರ್ಯ ನಡೆಸಿದ್ದೂ ಆಗಿತ್ತು.

  ಸಿರಿಭೂವಲಯವು ಸುಂದರವಾದ ಕನ್ನಡ ಸಾಂಗತ್ಯ ಪದ್ಯಗಳ ರೂಪದಲ್ಲಿ, ಕನ್ನಡ ಅಕ್ಷರಲಿಪಿಯಲ್ಲಿ ಮುದ್ರಣವಾಗಿ ಬೆಂಗಳೂರಿನ ಸರ್ವಾರ್ಥಸಿದ್ಧಿಸಂಘದ ಮೂಲಕ, ಯಲ್ಲಪ್ಪಶಾಸ್ತ್ರಿಯವರು ‘ಸಂಶೋಧಕರು’ ಹಾಗೂ ಕರ್ಲಮಂಗಲಂ ಶ್ರೀಕಂಠಯ್ಯನವರು ‘ಸಂಪಾದಕರು’ ಎಂಬ ವಿವರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 1953ರಲ್ಲಿ ಪುಸ್ತಕರೂಪದಲ್ಲಿ ಮೊದಲನೇ ಭಾಗವು ಪ್ರಕಟವಾಯಿತು. ಇದರ 2ನೇ ಭಾಗವು 1955ರಲ್ಲಿ ಬೆಳಕುಕಂಡಿತು.
  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಇಷ್ಟೆಲ್ಲ ಅಸಾಧಾರಣವಾದ ಚಟುವಟಿಕೆಗಳು ನಡೆದಿದ್ದರೂ ಕನ್ನಡ ಸಾರಸ್ವತಲೋಕದಲ್ಲಿ ಅಂದು ಮಾತ್ರವೇ ಅಲ್ಲ; ಇಂದಿಗೂ ಈ ಕೃತಿಯ ವಿಚಾರದಲ್ಲಿ ಊಹಾತೀತವಾದ ಉಪೇಕ್ಷೆಯೇ ತುಂಬಿದೆ!
  ಸಿರಿಭೂವಲಯ ಗ್ರ್ರಂಥವು ಅಂಕಭೂವಲಯ ಹಾಗೂ ಅಕ್ಷರ ಭೂವಲಯ ಎರಡು ರೂಪಗಳಲ್ಲೂ ಸಮಾನಾಂತರವಾಗಿ ಪ್ರವಹಿಸಿರುವುದು ಸ್ಪಷ್ಟವಿದೆ. ಇಂದಿಗೂ ಸಿರಿಭೂವಲಯ ಗ್ರಂಥವು ಅಕ್ಷರರೂಪದಲ್ಲಿ ರಹಸ್ಯವಾಗಿ ಕತ್ತಲಕೋಣೆಯಲ್ಲಿರುವುದು ಖಚಿತ!
  ಕನ್ನಡದಲ್ಲಿ ಇಂಥ ಅದ್ಭುತವಾದ ಗ್ರಂಥವೊಂದಿದೆ ಎಂಬ ಸಂಗತಿಯೇ ಇಂದಿನ ವಿದ್ಯಾವಂತರ ವಲಯದಲ್ಲೂ ಬಹಳಷ್ಟುಜನಗಳಿಗೆ ತಿಳಿದಿಲ್ಲ! ತಿಳಿದಿರುವವರಲ್ಲೂ ಈ ಗ್ರಂಥಾತಂರ್ಗತವಾದ ವಿಷಯಗಳ ವಿವರಗಳನ್ನರಿತಿರುವವರು ವಿರಳ.
    ಹಿಂದಿನಕಾಲದಲ್ಲಿ ಯಾವುದೇ ಪ್ರಾಚೀನ ಗ್ರಂಥವನ್ನಾದರೂ ಅನ್ಯರ ಆಕ್ರಮಣದಿಂದÀ ರಕ್ಷಿಸುವುದಕ್ಕಾಗಿ ರಹಸ್ಯವಾಗಿ ಮುಚ್ಚಿರಿಸುವ ಅಗತ್ಯವಿತ್ತು. ಈಗ ಕಾಲಬದಲಾಗಿದೆ. ಕೈಬರಹದ ಒಂದೆರಡು ಪ್ರತಿಗಳುಮಾತ್ರವೇ ಇರಬಹುದಾದ ಸಿರಿಭೂವಲಯದಂಥ ಬೃಹತ್ ಗ್ರಂಥದ ಅಮೂಲ್ಯವಾದ ಪ್ರಾಚೀನ ಪ್ರತಿಯನ್ನು ಹೆಚ್ಚುದಿನಗಳಕಾಲ ಸುರಕ್ಷಿತವಾಗಿ ಸಂರಕ್ಷಿಸುವುದು ಸಾಧ್ಯವಿಲ್ಲ. ಈ ಕಾರಣದಿಂದಲಾದರೂ ಅದರ ಮುದ್ರಣಕಾರ್ಯ ಅತ್ಯಗತ್ಯವಾಗಿದೆ.
  ಕ್ಷಣಮಾತ್ರದಲ್ಲಿ ಅದರ ಸಾವಿರಾರು ಪ್ರತಿಗಳನ್ನು ಮದ್ರಿಸುವ ಸೌಲಭ್ಯವಿರುವ ಇಂದಿನ ಪರಿಸರದಲ್ಲಿ ಸಂಬಂಧಿಸಿದವರು ಈ ಕಾರ್ಯಕ್ಕೆ ಮನವಿತ್ತರೆ; ಕೇವಲ ಜೈನಸಂಪ್ರದಾಯದವರಿಗೆ ಮಾತ್ರವಲ್ಲ; ಕನ್ನಡಿಗರಿಗೆ ಮಾತ್ರವಲ್ಲ; ಭಾರತೀಯರಿಗೆ ಮಾತ್ರವಲ್ಲ; ಇಡೀ ಜಗತ್ತಿನ ಮಾನವ ಜನಾಂಗಕ್ಕೇ ಅಮೂಲ್ಯವಾದ ಜ್ಞಾನಸಂಪತ್ತನ್ನು ಸುಲಭವಾಗಿ ಒದಗಿಸಿಕೊಟ್ಟ ಕಾರ್ಯ ನಡೆಸಿದಂತಾಗುತ್ತದೆ. ಈ ಜ್ಞಾನಸಂಪತ್ತು ಶಿಥಿಲವಾಗುವ ಮೊದಲು ಸಂಬಂಧಿಸಿದವರು ಇತ್ತ ಗಮನಹರಿಸುವುದು ಅಗತ್ಯವಾಗಿದೆ.

  ಈಗ ಅಂಕಭೂವಲಯದ ವಿಚಾರವಾಗಿ ತೆಲೆಕೆಡಿಸಿಕೊಳ್ಳ್ಳುವ ಅಗತ್ಯವಿಲ್ಲ. ಒಂಬತ್ತು ಖಂಡಗಳ ಅಕ್ಷರಭೂವಲಯದ ಪ್ರತಿಯನ್ನೇ ರಹಸ್ಯವಾಗಿ ಮುಚ್ಚಿರಿಸಿರುವುದು ಖಚಿತವಿದೆ. ಅದು ಸುಲಭವಾಗಿ ಲಭ್ಯವಾದಲ್ಲಿ; ಅನುಪಲಬ್ಧವಾಗಿರುವ (ನಷ್ಟವಾಗಿರುವ) ಅಂಕಚಕ್ರಗಳ ವಿಚಾರವಾಗಿ ಚಿಂತಿಸುವ ಅಗತ್ಯವಿಲ್ಲ.

  ಅಕ್ಷರಭೂವಲಯದ ಮೂಲ ಪ್ರತಿಯನ್ನ್ನು ಸೂಕ್ತವಾಗಿ ಸಂರಕ್ಷಿಸಿ, ಅದನ್ನ್ನು ಸಮರ್ಪಕವಾಗಿ ಮುದ್ರಿಸಿ; ಅದರಿಂದ ಕ್ರಮಬದ್ಧವಾಗಿ ಅಂತರ್ಸಾಹಿತ್ಯವನ್ನು ತೆಗೆಯುವ ತಾಳ್ಮೆಯ ಕೆಲಸಮಾತ್ರವೇ ಮುಂದೆ ನಡೆಯಬೇಕಿದೆ. ಇದರಲ್ಲಿ ‘ಸಂಶೋಧನೆ’ಯ ವಿಚಾರವೇನೂ ಅಡಗಿಲ್ಲ! ಇಥವಾ ಈ ಕಾರ್ಯವನ್ನೇ ‘ಸಂಶೋಧನೆ’ ಎನ್ನುವುದಾದರೆ, ಬೇರೆÉ ಬೇರೆ ಭಾಷೆಗಳ ಸಾಹಿತ್ಯವನ್ನು ಓದಿ ವಿವರಿಸುವ ಭಾಷಾತಜ್ಞರು ಈ ಕಾರ್ಯವನ್ನು ಮಾಡಬೇಕಾಗುತ್ತದೆ.
  ಸಿರಿಭೂವಲಯದಲ್ಲಿ ಅಡಕವಾಗಿರುವ ವಿಚಾರಗಳು ಯಾವುವು? ಎಂಬ ಪ್ರಶ್ನೆಗೆ ಅದರಲ್ಲಿರದ ವಿಚಾರಗಳು ಯಾವುವೂ ಇಲ್ಲ; ಜಗತ್ತಿನ ಜೀವರಾಶಿಯ ಇಹ-ಪರಗಳಿಗೆ ಸಂಬಂಧಿಸಿದ ಸಮಸ್ತ ವಿಚಾರಗಳೂ ಈ ಗ್ರಂಥದಲ್ಲಿ ಅಡಕವಾಗಿದೆ ಎಂದು ಉತ್ತರಿಸಿದರೆ, ಅದು ಅತಿಶಯೋಕ್ತಿಯಾಗಲಾರದು.

   ಈ ಜಗತ್ತಿಗೆ ಸಂಬಂಧಿಸಿದ ಸಕಲ ಶಾಸ್ತ್ರ; ಜ್ಞಾನ-ವಿಜ್ಞಾನಗಳ ವಿಚಾರಗಳೆಲ್ಲವೂ ಈ ಗ್ರಂಥದಲ್ಲಿ ವಿವರವಾಗಿ ಸೂಚಿಸಲ್ಪಟ್ಟಿವೆ ಎಂಬ ಅಂಶವು ವಾಸ್ತವವಾದುದು. ಸಿರಿಭೂವಲಯವನ್ನು ಕುರಿತು ವಿವರಿಸಲು ಪ್ರಾರಂಭಿಸಿದರೆ, ಅದಕ್ಕೆ ಕೊನೆಮೊದಲೆಂಬುದೇ ಇರುವುದಿಲ್ಲ!

  ಇಂಥ ಅಚ್ಚರಿಯ ಗ್ರಂಥವು ಸುಮಾರು 50 ವರ್ಷಗಳಕಾಲ ಕತ್ತಲಕೋಣೆಯನ್ನು ಸೇರಿ, ಅಪರಿಚಿತವಾಗಿಯೇ ಉಳಿದಿತ್ತು. ಈಗಲೂ ಅದೇ ಪರಿಸರವೇ ಮುಂದುವರೆದಿದೆ!!
  ಸಿರಿಭೂವಲಯಗ್ರಂಥವು ಸಾಮಾನ್ಯ ಜನರ ಕೈಸೇರುವಲ್ಲಿ ಇದು ಜೈನಸಂಪ್ರದಾಯದ ಕೃತಿಯೋ? ಅಥವಾ ವೈದಿಕ ಸಂಪ್ರದಾಯದ ಕೃತಿಯೋ ಎಂಬ ವಿವಾದವು ಪ್ರಮುಖವಾಗಿದೆ! ವೈದಿಕ ಸಂಪ್ರದಾಯವು ಹಿಂಸಾವಾದಿ; ಜೈನಸಂಪ್ರದಾಯವು ಅಹಿಸಾವಾದಿ ಎಂಬ ನಂಬಿಕೆ ಹಲವರಲ್ಲಿ ಬೇರುಬಿಟ್ಟಿದೆ!
  ಯಜ್ಞ ಎಂಬ ಶಬ್ದಕ್ಕೆ ಪ್ರಾಣಿಬಲಿನೀಡುವ ಒಂದು ಧಾರ್ಮಿಕ ಕ್ರಿಯೆ ಎಂಬ ಅರ್ಥ ರೂಢಿಯಲ್ಲಿದೆ. ಈ ಪ್ರಾಣಿಬಲಿಯ ಕಾರಣದಿಂದಾಗಿ ಯಜ್ಞಯಾಗಗಳನ್ನು ಪ್ರತಿಪಾದಿಸುವ ವೇದಗಳು ಜೈನಸಂಪ್ರದಾಯದವರಿಗೆ ಸಮ್ಮತವಲ್ಲ. ಆದರೆ; ಯಜ್ಞದ ಇನ್ನೊಂದು ಸಮಾನಾರ್ಥಕವಾದ ಪ್ರಾಚೀನ ಶಬ್ದ’ಅಧ್ವರ’. ಧ್ವರ ಶಬ್ಧಕ್ಕೆ ಹಿಂಸೆ ಎಂಬ ಅರ್ಥವಿದೆ. ಹಿಂಸೆ ಇಲ್ಲದ್ದು ಅಧ್ವರ. ಅಂದಮೇಲೆ ಜೈನಸಂಪ್ರದಾಯಕ್ಕೆ ಮೊದಲಿನಿಂದಲೂ ಅಹಿಂಸೆಯು ಪ್ರಚಲಿತವಿತ್ತೆಂಬುದು ತಿಳಿಯುತ್ತದೆ.

  ಯಾವುದೋ ಕಾಲಘಟ್ಟದಲ್ಲಿ ಯಜ್ಞದಲ್ಲಿ ಪ್ರಾಣಿಬಲಿನೀಡುವುದು ಸೇರಿಕೊಂಡು ಕೆಲವರ ವಿರೋಧವನ್ನು ಎದುರಿಸುವಂತಾಯಿತು. ಈ ಕಾರಣದಿಂದಾಗಿ ಸನಾತನಧರ್ಮದ  ಆಧಾರಗ್ರಂಥಗಳಾದ ವೇದಗಳ ಪ್ರಾಮಾಣ್ಯವನ್ನು ಸುಮಾರು 1200 ವರ್ಷಗಳ ಹಿಂದೆಯೇ ಖಚಿತವಾಗಿ ಸಮರ್ಥಿಸಿರುವ ಸರ್ವಜ್ಞಸ್ವರೂಪಿ ಜೈನಾಚಾರ್ಯ ಕುಮುದೇಂದು ಮುನಿಯ ಹೇಳಿಕೆಯನ್ನು ವಿರೋಧಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಾಗದೆಂಬ ಸಂಗತಿ ಸಾರ್ವಕಾಲಿಕವಾದುದು.

  2000ದ ನಂತರದ ಕಳೆದೊಂದು ದಶಕದ ಅವಧಿಯಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿದ ಪ್ರಯತ್ನದಿಂದಾಗಿ; ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ| ಟಿ.ವಿ.ವೆಂಕಟಾಚಲಶಾಸ್ತ್ರ್ರಿಯವರ ನೇತೃತ್ವದಲ್ಲಿ ವಿದ್ವಾಂಸರ ತಂಡವೊಂದು ಸುಮಾರು ಒಂದುದಶಕದ ಕಾಲ ಶ್ರಮವಹಿಸಿ ಸಿರಿಭೂವಲಯ ಗ್ರಂಥದ 1953ರರ ಮುದ್ರಣವನ್ನು ತಮ್ಮದೇಆದ ಹಾದಿಯಲ್ಲಿ ‘ಪರಿಷ್ಕರಿಸಿ’ ಅಪೂರ್ಣವಾಗಿ ಮುನರ್ಮುದ್ರಿಸಿರುವುದಿದೆ. ಆದರೆ ಅಲ್ಲಿನ ವಿವರಗಳಿಂದ ಸಿರಿಭೂವಲಯದ  ವಿಚಾರವು ಇನ್ನಷ್ಟು ಗೊಂದಲದ ಗೂಡಾಗಿದೆ.

  ಸಿರಿಭೂವಲಯದ ವಾರಸುದಾರರಾಗಿದ್ದ ಯಲ್ಲಪ್ಪಶಾಸ್ತ್ರಿ ಹಾಗೂ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ನಿಕಟವರ್ತಿಯಾಗಿದ್ದ ಕನ್ನಡದ ಅನನ್ಯ ಸೇವಕ ದಿ| ಕೆ. ಅನಂತಸುಬ್ಬರಾಯರು ತಮ್ಮ ಜೀವಿತಾವಧಿಯ ಪೂರ್ತಿ ಈ ಗ್ರಂಥದ ಪ್ರಚಾರಕರಾಗಿ ಸೇವೆಸಲ್ಲಿಸಿದರು.

  ಕೆ. ಅನಂತಸುಬ್ಬರಾಯರಿಂದÀ ಈ ಸಿರಿಭೂವಲಯದ ದರ್ಶನ; ಸ್ಪರ್ಶನ; ನಿರ್ದೇಶನ, ಖಚಿತ ಇತಿಹಾಸದ ವಿವರ ಪಡೆದು, ಪ್ರಥಮ ಖಂಡದ 33 ಅಧ್ಯಾಯಗಳ ಮೂಲಸಾಹಿತ್ಯದ ಸರಳ ಪರಿಚಯ ಹಾಗೂ ಅದರ ಅಂತರ್ಸಾಹಿತ್ಯವನ್ನು ‘ಸಿರಿಭೂವಲಯಸಾರ’ ಎಂಬ ಹೆಸರಿನ ವಿಸ್ತಾರವಾದ ಪರಿಚಯ ಕೃತಿಯನ್ನು ಹಾಸನದ ಸುಧಾರ್ಥಿಯು ನಿರೂಪಿಸಿದ್ದು, 2010ರಲ್ಲಿ ಅದು ಕನ್ನಡ ಓದುಗರ ಕೈಸೇರಿದೆ. ಇದರಲ್ಲಿ ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಅರುವತ್ತು ವರ್ಷಗಳ ಅವಧಿಯಲ್ಲಿ ನಡೆದಿರುವ; ನಡೆಯಿತೆಂದು ಹೇಳಲಾಗಿರುವ; ನಡೆಯಬೇಕಾಗಿದ್ದ; ಮುಂದೆನಡೆಯಬೇಕಿರುವ ಚಟುವಟಿಕೆಗಳ ವಿವರವಾದ ಚರ್ಚೆನಡೆದಿದೆ.

  ಇದು ‘ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ’ ; ‘ಸಿರಿಭೂವಲಯ ಒಂದು ಮಿಂಚುನೋಟ’ ; ‘ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ’ ‘ಸಿರಿಭೂವಲಯದ ಒಳನೋಟ’ ಎಂಬ ರೂಪಾಂತರ ಹೊಂದಿ ಸಿರಿಭೂವಲಯದ ಪ್ರಚಾರಕಾರ್ಯ ನಿರ್ವಹಿಸಿದೆ.
  ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ ಕಿ ಎಕ್ ಝಾಂಕಿ’ ಎಂಬ ಹೆಸರಿನಲ್ಲಿ ಈ ಪರಿಚಯದ ಹಿಂದಿ ಭಾವಾನುವಾದವೂ ಪ್ರಕಟವಾಗಿದೆ. (ಭಾವಾನುವಾದಕರು: ಹಾಸನದ ಹಿಂದೀವಿದ್ವಾಂಸ ಶ್ರೀ ಎಸ್. ರಾಮಣ್ಣನವರು)
  2013ರಲ್ಲಿ ಸಿರಿಭೂವಲಯದ ಪ್ರಥಮ ಖಂಡದ 34 ರಿಂದ 50ನೇ ಅಧ್ಯಾಯದ ವರೆಗಿನ ಮೂಲ ಸಾಹಿತ್ಯ ಹಾಗೂ ಅದರ ಅಂತರ್ಸಾಹಿತ್ಯವು ‘ಸಿರಿಭೂವಲಯ ಸಾಗರರತ್ನಮಂಜೂಷ’ ಎಂಬ ಹೆಸರಿನಿಂದ ಪ್ರಕಟವಾಗಿದೆ. 51 ರಿಂದ 59ನೇ ಅಧ್ಯಾಯಗಳ ಮೂಲಸಾಹಿತ್ಯ ಅವುಗಳ ಅಂತರ್ಸಾಹಿತ್ಯ; ಹಾಗೂ ಸರಳ ಪರಿಚಯವು ‘ಸಿರಿಭೂವಲಯಸಾಗರರತ್ನಮಂಜೂಷ-2’ ಎಂಬ ಹೆಸರಿಂದ 2014ರಲ್ಲಿ ಪ್ರಕಟವಾಗಿದೆ. ಶಿವಮೊಗ್ಗೆಯ ನಿವಾಸಿ; ಶ್ರೀ ಕವಿ ವೆಂ. ಸುರೇಶ್ ಅವರು ಈ ಎಲ್ಲ ಪರಿಚಯಕೃತಿಗಳ ಸಂಕ್ಷಿಪ್ತ ಭಾವಾನುವಾದವನ್ನು ‘ದಿ ಟೆನ್ತ್ ವಂಡÀರ್ ಆಫ್ ದಿ ವರ್ಲ್‍ಡ್’ ಎಂಬ ಹೆಸರಿನಲ್ಲಿ ಆಂಗ್ಲಾಭಾಷೆಯಲ್ಲಿ ರೂಪಿಸಿದ್ದಾರೆ.
  ಸಿರಿಭೂವಲಯದ ರಚನೆಯಲ್ಲಿ ಬಳಸಿರುವ ಮೂಲಾಕ್ಷರ ಕ್ರಮವು ಇಂದಿನ ವಿದ್ಯಾವಂತರ ಸರಳವಾದ ಓದಿಗೆ ತೊಡಕಾಗಿದೆ ಎಂಬುದು ಆಧುನಿಕ ವಿದ್ವಾಂಸರ ಆಕ್ಷೇಪ!  ಪುಸ್ತಕದ ಹಾಳೆಯನ್ನು ತೆರೆದ ಕೂಡಲೇ ನಮಗೆ ಎಲ್ಲ ಸಾಹಿತ್ಯವೂ ನಾವು ಓದಬಹುದಾದ ಸರಳಭಾಷೆಯಲ್ಲಿ ಪ್ರತ್ಯಕ್ಷವಾಗಬೇಕೆಂದು ಅಪೇಕ್ಷಿಸುವುದು ಯುಕ್ತವಲ್ಲ.

  ಈ ಕಾರಣದಿಂದಾಗಿಯೇ ಕುಮುದೇಂದುಮುನಿಯು ತನ್ನ ಸಿರಿಭೂವಲಯವು ‘ಛಲಗಾರನಿಗೆ ಒಲಿಯುವಕಾವ್ಯ’ ‘ಅವರವರ ಶಕ್ತಿಗೆ ತಕ್ಕವರವಾದ ಕಾವ್ಯ’ ‘ಯಾರೆಷ್ಟು ಜಪಿಸಿದರಷ್ಟು ಸತ್ಫಲವೀವಕಾವ್ಯ’ ‘ವಶವಾಗದೆಲ್ಲರ್‍ಗೀಕಾಲದೊಳಗೆ‘  ‘ಪದದೊಳುಕ್ಷೇತ್ರದಿಜ್ಞಾನದೊಳರಿವುದು ಸದರವಾಗಿಹುದೆಲ್ಲರ್ಗೆ‘ ಎಂದು ಸೂಚಿಸಿರುವುದು.

  ಈ ರೀತಿಯಲ್ಲಿ ನಮ್ಮ ಆಂತರ್ಯದ ಒಳಗಣ್ಣನ್ನು ತೆರೆಯದೇ ‘ಸಿರಿಭೂವಲಯದಲ್ಲಿ ಏನಿದೆ ಮಣ್ಣು?’ ‘ಸಿರಿಭೂವಲಯ ಎಲ್ಲಿದೆ?’ ‘ಕುಮುದೇಂದುಮುನಿಯಾರು?’ ಮುಂತಾದ ಬಾಲಿಶಪ್ರಶ್ನೆಗಳನ್ನು ಕೇಳುತ್ತ, ಈ ಜಗತ್ತಿನ ಅಚ್ಚರಿಯ ಕಾವ್ಯವನ್ನೂ ಕವಿಯನ್ನೂ ನಿರ್ಲಕ್ಷಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆ. ಇದಿಷ್ಟು ಮಾಹಿತಿಗಳು ಸಿರಿಭೂವಲಯ ಎಂಬ ಪ್ರಾಚೀನ ಕನ್ನಡ ಅಂಕಕಾವ್ಯದ ಉಗಮ; ವಿಕಾಸ ಹಾಗೂ ಇತಿಹಾಸವನ್ನು ಕುರಿತ ಒಂದು ಪಕ್ಷಿನೋಟವಾಗಿದೆ.
*  *   *
ಸಿರಿಭೂವಲಯದ ರಚನೆಯ ಸ್ವರೂಪ ಹಾಗೂ ಉಳಿದುಬಂದ ಹಾದಿ
  ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬುದು ಕನ್ನಡದ ಒಂದು ಪ್ರಾಚೀನ ಅಂಕಕಾವ್ಯ. ಅಂದರೆ ಈ ಕಾವ್ಯವನ್ನು ಕನ್ನಡ ಅಂಕಿಗಳಲ್ಲಿ ಬರೆಯಲಾಗಿದೆ. ಕನ್ನಡದ 1ರಿಂದ 64ರವರೆಗಿನ ಅಂಕಿಗಳನ್ನುಮಾತ್ರ ಬಳಸಿ ಈ ಕಾವ್ಯವನ್ನು ರಚಿಸಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ 64 ಅಕ್ಷರಗಳನ್ನು ಈ 64 ಅಂಕಿಗಳು ಪ್ರತಿನಿಧಿಸುತ್ತವೆ. (ಅ,ಆ,ಆÁ, ಇ,ಈ,ಈೀ, ಉ,ಊ,ಊೂ, ಋ,IÀೂ,ಋೂ, ಳ್,ಳು,ಳೂ, ಎ, ಏ,ಏೀ, ಐ,ಐೈ,ಐೈೈ, ಒ,ಓ,ಓೀ, ಔ,ಔೀ,ಔೀೀ,(27 ಸ್ವರಗಳು. ಇವುಗಳಲ್ಲಿ ಹ್ರಸ್ವ; ದೀರ್ಘ; ಪ್ಲುತ ಎಂದು ಮೂರು ಗುಂಪುಗಳು) ಕ್, ಚ್, ಟ್, ತ್, ಪ್ ವರ್ಗಕ್ಕೆ ಸೇರಿದ 25 ವರ್ಗೀಯ ವ್ಯಂಜನಗಳು. ಯï,ರ್,ಲ್,ವ್,ಶ್,ಷ್,ಸ್,ಹ್ (8 ಅವರ್ಗೀಯ ವ್ಯಂಜನಗಳು) ಂ, ಃ, ಂಃ, ಃಃ (ಅಂ,ಅಃ,ಕ್‍ಃ,ಫ್‍ಃ ಎಂಬ ನಾಲ್ಕು ಅಯೋಗವಾಹಗಳು) ಸೇರಿವೆ. ಕ್‍ಃ ಸಂಕೇತವು ಇಂಗ್ಲಿಷ್ ಭಾಷೆಯ ಝಡ್ ಅಕ್ಷರವನ್ನೂ; ಫ್Àಃ ಸಂಕೇತವು ಎಫ್ ಅಕ್ಷರವನ್ನೂ ಪ್ರತಿನಿಧಿಸುತ್ತದೆ.

   ಈ ಕಾವ್ಯದ ಪ್ರತಿಯೊಂದು ಪುಟದಲ್ಲಿಯೂ ಒಂದು ದೊಡ್ಡ ಚೌಕಾಕಾರ ಇರುತ್ತದೆ. ಅದನ್ನು ಮೇಲಿನಿಂದ ಕೆಳಕ್ಕೆ 27 ಸಾಲು ಹಾಗೂ ಎಡದಿಂದ ಬಲಕ್ಕೆ 27 ಸಾಲಿನಂತೆ ಒಟ್ಟು 729 ಸಣ್ಣ ಸಣ್ಣ ಚೌಕಗಳಾಗಿ ವಿಭಾಗ ಮಾಡಲಾಗಿರುತ್ತದೆ. ಈ ಒಂದು ದೊಡ್ಡಚೌಕದ ಪುಟವನ್ನು ‘ಚಕ್ರ’ ಎಂದು ಕರೆಯಲಾಗುತ್ತದೆ.

  ಈ ರೀತಿಯ 16000 ಚಕ್ರಗಳು ಈ ಗ್ರಂಥದ ಒಟ್ಟುವ್ಯಾಪ್ತಿಯಾಗಿತ್ತು. ಅಂಕಿಗಳಿರುವಲ್ಲಿ ಅದಕ್ಕೆ ಅನ್ವಯವಾಗುವ ಅಕ್ಷರವನ್ನು ಅಳವಡಿಸಿಕೊಂಡು; ಶ್ರೇಢಿ, ಸರ್ಪ; ಜೋಡಿನಾಗರ; ಹಂಸ; ಮಯೂರ ಇತ್ಯಾದಿ ಸುಮಾರು 40 ಬೇರೆ ಬೇರೆ ಬಂಧಗಳಲ್ಲಿ ಓದಬೇಕು. ಅದರಲ್ಲಿ ಬೆರೆ ಬೇರೆ ಭಾಷೆಯ ಸಾಹಿತ್ಯವು ದೊರೆಯುತ್ತದೆ. ಈ ರೀತಿಯಲ್ಲಿ ದೊರೆಯುವ ಭಾಷೆಗಳ ಸಂಖ್ಯೆ 718 !

  ಈಗ ಶ್ರೇಢಿ ಬಂಧದಲ್ಲಿ ಅಕ್ಷರ ಚಕ್ರವನ್ನು ಓದಿ ಕನ್ನಡಭಾಷೆಯಲ್ಲಿ ಸಾಂಗತ್ಯ ರೂಪದಲ್ಲಿ ಸಾಹಿತ್ಯವನ್ನು ಗುರುತಿಸಲಾಗಿದೆ. ಇಡೀ ಕಾವ್ಯವನ್ನು ಈ ರೀತಿಯಲ್ಲಿ ಪರಿವರ್ತಿಸಿದರೆ ಅದರಿಂದ ಹೊರಹೊಮ್ಮುವ ಸಾಂಗತ್ಯ ಪದ್ಯಗಳ ಸಂಖ್ಯೆ ಆರುಲಕ್ಷ !

  ಈ ಸಾಂಗತ್ಯ ಪದÀÀ್ಯಗಳನ್ನು ಸೂಚನೆಗನುಗುಣವಾಗಿ ವಿಂಗಡಿಸಿಕೊಂಡು ಓದಿದಾಗ; ಅಕ್ಷರಕ್ಕೆ ಲಕ್ಷದಂತೆ ಜಗತ್ತಿನ 718 ಭಾಷೆಗಳಿಗೆ ಸೇರಿದ, 363 ಮತಧರ್ಮಗಳ ಸಮನ್ವಯ ಹಾಗೂ ಅಂಕಗಣಿತ; ಆಕಾಶಗಮನ; ಆಯುರ್ವೇದ; ಭೌತಶಾಸ್ತ್ರ; ರಸಾಯನಶಾಸ್ತ್ರ; ಜೀವಶಾಸ್ತ್ರ; ಸಂಗೀತಶಾಸ್ತ್ರ; ನೃತ್ಯಶಾಸ್ತ್ರ; ಅಣುವಿಜ್ಞಾನ; ಗಣಕಯಂತ್ರಕ್ರಮ; ವೇದಸಾಹಿತ್ಯ ಇತ್ಯಾದಿಗಳು,  ರಾಮಾಯಣ-ಭಾರತ ಮುತಾದ ಪ್ರಾಚೀನ ಸಾಹಿತ್ಯ ಕೃತಿಗಳುಸೇರಿದಂತೆ ಜಗತ್ತಿನ ಸಕಲ ಜ್ಞಾನ- ವಿಜ್ಞಾನಗಳಿಗೆ ಸಂಬಂಧಿಸಿದ ಪ್ರಾಚೀನ ಸಾಹಿತ್ಯದ ಖಚಿತ ರೂಪವು ನಮಗೆ ದೊರೆಯುತ್ತದೆ! ಇವುಗಳ ಒಟ್ಟುವ್ಯಾಪ್ತಿ ‘ನೂರುಸಾವಿರಲಕ್ಷಕೋಟಿ’ ಶ್ಲೋಕಗಳು!

  ಸಿರಿಭೂವಲಯದ ಪ್ರಥಮಖಂಡದ 59 ಅಧ್ಯಾಯಗಳ ಪೈಕಿ 33 ಅಧ್ಯಾಯಗಳು 1953 ಹಾಗೂ 1955ರಲ್ಲಿ ಎರಡು ಭಾಗಗಳಾಗಿ ಪ್ರಕಟವಾದರೂ, ಅಂದಿನ ಕನ್ನಡ ಸಾರಸ್ವತ ಲೋಕವು ಅದನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಲೇ ಇಲ್ಲ!  ಸುಪ್ರಸಿದ್ಧ ಭಾರತೀಯ ಇತಿಹಾಸ ಪ್ರಾಧ್ಯಾಪಕ ಡಾ| ಎಸ್. ಶ್ರೀಕಂಠಶಾಸ್ತ್ರಿಗಳು ಮಾತ್ರ ಈ ಎರಡೂ ಭಾಗಗಳನ್ನೂ ಆಸಕ್ತಿಯಿಂದ ಸಮಗ್ರವಾಗಿ ಅಧ್ಯಯನಮಾಡುವುರೊಂದಿಗೆ, ಕೆ. ಶ್ರೀಕಂಠಯ್ಯನವರ ಅಗಾಧವಾದ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

  ಹಂಗೆರಿಯ ಕುಮಾರಿ ಎಲಿಜಬೆತ್ ಬರ್‍ನರ್; ಅಮೆರಿಕೆಯ ಫರಲ್; ಜಪಾನಿನ ಸಿರಿಗೆಟನಾಫ್ ಮುಂತಾದ ವಿದೇಶಿ ವಿದ್ವಾಂಸರು ಜಗತ್ತಿನ ಅತ್ಯಂತ ಪ್ರಾಚೀನ ಕನ್ನಡಅಂಕಕಾವ್ಯ ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ವನ್ನು ‘ಜಗತ್ತಿನ ಹತ್ತನೇ ಅಚ್ಚರಿ’ ಎಂಬುದಾಗಿ  ಮುಕ್ತಮನಸ್ಸಿನಿಂದ ಶ್ಲಾಘಿಸಿದ್ದಾರೆ.

  ಇಂಥ ಮಹೋನ್ನತವಾದ ಸಾಹಿತ್ಯಕೃತಿಯನ್ನು ಸಮರ್ಪಕವಾಗಿ ಪರಿಚಯಿಸಿದ ಕೆ. ಶ್ರೀಕಂಠಯ್ಯನವರು ಕಲ್ಕತ್ತೆಯ ಕೋಟ್ಯಾಧೀಶ ಶಾಂತಿಪ್ರಸಾದ್ ಜೈನ್ ಅವರು ನೀಡಬಯಸಿದ್ದ ಕೋಟ್ಯಾಂತರ ರೂಪಾಯಿಗಳ ನೆರವಿನರೂಪದ ಪುರಸ್ಕಾರವನ್ನು ನಿರ್ಮಮಕಾರದಿಂದ ನಿರಾಕರಿದರು.   ಇದರ ಪರಿಣಾಮವಾಗಿಯೇ ಇಂದಿನ ‘ಭಾರತೀಯ ಜ್ಞಾನಪೀಠ’ ಪ್ರಶಸ್ತಿಯು ಸ್ಥಾಪಿತವಾಯಿತು ಎಂಬುದು ಒಂದು ಚಾರಿತ್ರಿಕ ಸಂಗತಿ.

   ಬೆಂಗಳೂರಿನ ಸರ್ವಾರ್ಥಸಿದ್ಧಿಸಂಘದವರು ಪಂಡಿತ ಯಲ್ಲಪ್ಪಶಾಸ್ತ್ತ್ರಿಯವರು ‘ಸಂಶೋಧಕರು’ ಎಂದು ಪ್ರಕಟಿಸಿರುವ ಅಕ್ಷರರೂಪದ ಸಿರಿಭೂವಲಯ ಗ್ರಂಥವನ್ನು ನಿಜವಾಗಿ ಓದುವುದಕ್ಕೂ; ಅರ್ಥಮಾಡಿಕೊಳ್ಳುವುದಕ್ಕೂ; ಬೇರೆಯವರಿಗೆ ಪರಿಚಯಿಸುವುದಕ್ಕೂ ಅಪಾರವಾದ ತಾಳ್ಮೆ; ಆಸಕ್ತಿ; ಕಾಲಾವಕಾಶದ ಅಗತ್ಯವಿರುತ್ತದೆ. ‘ಇದು ಕೇವಲ ಮನರಂಜನೆಗಾಗಿ ಓದುವ ಸಾಹಿತ್ಯಕೃತಿಯಲ್ಲ’ ಎಂಬ ಖಚಿತವಾದ ವಿಚಾರವನ್ನು ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಅರುವತ್ತು ವರ್ಷಗಳಿಗೆ ಮೊದಲೇ ಸ್ಪಷ್ಟಪಡಿಸಿದ್ದಾರೆ!

  ಸುಮಾರು 1200 ವರ್ಷಗಳಷ್ಟು ಹಿಂದೆಯೇ ಈ ಗ್ರಂಥವು ರಚನೆಯಾಗಿದ್ದರೂ, ಈ ಗ್ರಂಥದಲ್ಲಿ ಸಾವಿರಾರು ವರ್ಷಗಳಷ್ಟು ಮುಂದಿನ ಭವಿಷ್ಯದ ಸಂಗತಿಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿರುವ ಉದಾಹರಣೆ ಇದೆ.  ಜ್ಞಾನದ ಅದ್ವಿತೀಯತೆಯನ್ನು ಪ್ರತಿಪಾದಿಸುವ ದಿಸೆಯಲ್ಲಿ ಶಂಕರಾಚಾರ್ಯರು ಪ್ರಮುಖರೆಂಬುದು ಸರ್ವವಿದಿತ. ಇವರನಂತರ ಜ್ಞಾನದ ಮಹತ್ವವನ್ನು ಶಂಕರರಷ್ಟೇ ಸಮರ್ಥವಾಗಿ; ತೀವ್ರವಾಗಿ ಪ್ರತಿಪಾದಿಸಿದ ಇನ್ನೊಬ್ಬ ಮಹಾನ್‍ಜ್ಞಾನಿ ಕುಮುದೇಂದುಮುನಿ. ಇವನು ಇಂದಿಗೂ ಜಗತ್ತಿಗೆ ಅಜ್ಞಾತವ್ಯಕ್ತಿಯಾಗಿಯೇ ಉಳಿದಿದ್ದಾನೆ!

  ಜ್ಞಾನದ ಮಹತ್ವವನ್ನು ಪ್ರತಿಪಾದಿಸುವ ದಿಸೆಯಲ್ಲಿ ಶಂಕರರದು ಒಂದುರೀತಿಯ ಅನನ್ಯವಾದ ಪದ್ಧತಿಯಾದರೆ; ಇದೇ ಕಾರ್ಯವನ್ನು ನಿರ್ವಹಿಸುವ ದಿಸೆಯಲ್ಲಿ ಕವಿ ಕುಮುದೇಂದುಮುನಿಯದೂ ಇನ್ನೊಂದು ರೀತಿಯ ಅನನ್ಯಪದ್ಧತಿಯೇ ಆಗಿದೆ! ‘ಯಲವಭೂರಿಸಿ’ ಎಂದು ಪ್ರಖ್ಯಾತನಾಗಿದ್ದು, ಅಪರೂಪದ ಪ್ರತಿಭೆಯಿಂದ ‘ಸಿರಿಭೂವಲಯ’ ಎಂಬ ಅದ್ವಿತೀಯವಾದ ಗ್ರಂಥರಚನೆ ಮಾಡಿದ ಮಹಾನ್ ಮೇಧಾವಿ ಈ ಕುಮುದೇಂದುಮುನಿ.

  ಕನ್ನಡ ಅಂಕಾಕ್ಷರದಲ್ಲಿ ಬರೆಯಲಾಗಿರುವ ಸಿರಿಭೂವಲಯದಲ್ಲಿ ಜಗತ್ತಿನ 718 ಭಾಷೆಗಳ ದೈವಿಕಸಾಹಿತ್ಯ; ಎಂದೆಂದಿಗೂ ಅವಿನಾಶಿಯಾದ 362 ಮತಧರ್ಮಗಳ ವಿವೇಚನೆ;  ಪಶುಪಾಲನೆಯಿಂದ ಮೊದಲ್ಗೊಂಡು, ಅಣುವಿಜ್ಞಾನ; ಆಕಾಶಗಮನ; ಅಂಕಗಣಿತ; ಗಣಕಯಂತ್ರಕ್ರಮ; ಆಯುರ್ವೇದ; ಜ್ಯೋತಿಷ್ಯ; ಭೌತಶಾಸ್ತ್ರ; ರಸಾಯನಶಾಸ್ತ್ರ; ಸೂಕ್ಷ್ಮಜೀವಶಾಸ್ತ್ರ; ಲೋಹಶಾಸ್ತ್ರ; ಸಂಗೀತಶಾಸ್ತ್ರ; ನಾಟ್ಯಶಾಸ್ತ್ರ; ದಾಂಪತ್ಯವಿಜ್ಞಾನ ಮುಂತಾದ 64 ವಿದ್ಯೆಗಳ ವಿಚಾರವೆಲ್ಲವೂ ವಿವರಿಸಲ್ಪಟ್ಟಿವೆ ಎಂಬುದನ್ನು ಈಗಾಗಲೇ ಸೂಚಿಸಿದ್ದಾಗಿದೆ.

   ಈ ಅಪೂರ್ವ ಗ್ರಂಥದ ಕರ್ತೃವಾದ ಕುಮುದೇಂದುಮುನಿಯು ಯಾಪನೀಯವೆಂಬ ಜೈನಸಂಪ್ರಾದಾಯಕ್ಕೆ ಸೇರಿದವನು. ಯಾಪನೀಯರು ಜಗತ್ತಿನ ಉಳಿದೆಲ್ಲ ಮತ-ತತ್ವ-ಸಿದ್ಧಾಂತಗಳ ವಿಚಾರದಲ್ಲೂ ಬಹಳ ಉದಾರವಾದಿಗಳಾಗಿದ್ದವರು. ಹರಿ; ಹರ; ಬ್ರಹ್ಮಾದಿಗಳನ್ನು ಜಿನನನು ಆರಾಧಿಸುವಷ್ಟೇ ಭಕ್ತಿಯಿಂದ ಆದರಿಸುತ್ತಿದ್ದವರು. ಇವರೆಲ್ಲರೂ ತೀರ್ಥಂಕರರೇ, ಇವರೆಲ್ಲರ ಉಪದೇಶವೂ ತೀರ್ಥವೆಂದೇ ಇವರು ಸರ್ವಸಮತಾವಾದಿಗಳಾಗಿ ವ್ಯವಹರಿಸುವವರಾಗಿದ್ದರು. ಕುಂದಕುಂದ, ಸಮಂತಭದ್ರ, ಪೂಜ್ಯಪಾದ, ವೀರಸೇನ; ಜಿನಸೇನರು ಕುಮುದೇಂದುವಿನ ಗುರುಪರಂಪರೆಗೆ ಸೇರಿದವರು.
*  *  *
  ನಂದಿಬೆಟ್ಟದ ತಪ್ಪಲಿನಲ್ಲಿರುವ ಯಲವಳ್ಳಿ ಎಂಬ ಸ್ಥಳದಲ್ಲಿ ನೆಲೆಸಿ ‘ಯಲವಭೂರಿಸಿ’ ಎಂದು ಪ್ರಖ್ಯಾತನಾಗಿದ್ದ ಕುಮುದಚಂದ್ರನ ಅಂಕಕಾವ್ಯ ‘ಸಿರಿಭೂವಲಯ’. ಕವಿ, ಕವಿಯವಾಸಸ್ಥಳ, ಕಾವ್ಯದಹೆಸರು ಮೂರನ್ನೂ ಒಂದೇ ಶಬ್ದದಲ್ಲಿ ಸೂಚಿಸಿರುವ ಚಮತ್ಕಾರವನ್ನು ಗಮನಿಸಲು ಈ ಪದವನ್ನು ಹಿಂದುಮುಂದಾಗಿ ಓದಿರಿ! (ಯಲವಭೂರಿಸಿ ಎಂದಾಗುತ್ತದೆ) ಸಿರಿಭೂವಲಯದಲ್ಲಿ ಕುಮುದೇಂದುವು ಸೂಚಿಸಿರುವ ಮಾಹಿತಿಯ ಆಧಾರದಲ್ಲಿ ಕಾವ್ಯವು ರಚನೆಯಾದ ಕಾಲ ಕ್ರಿ.ಶ. 800. ವೀರಸೇನ; ಜಿನಸೇನರು ಇವನ ಗುರುಗಳು: ಗಂಗರಸ ಸೈಗೊಟ್ಟ ಸಿವಮಾರ ಹಾಗೂ ಅಮೋಘವರ್ಷ ನೃಪತುಂಗನಿಗೆ ಇವನು ಗುರುವಾಗಿದ್ದವನು.  ಕವಿ ಹಾಗೂ ಅವನ ಕಾಲದ ವಿಚಾರವಾಗಿ ವಿದ್ವಾಂಸರಲ್ಲಿ ಒಮ್ಮತವಿಲ್ಲ!  ಸ್ವತಃ ಕವಿಯೇ  ಸೂಚಿಸಿರುವ ಮಾಹಿತಿಗಳಿಗೂ ವಿದ್ವಾಂಸರು  ಸಮ್ಮತಿಸುವುದಿಲ್ಲ!
  ಸಿರಿಭೂವಲಯದ ಸಾಂಗತ್ಯಪದ್ಯಗಳಲ್ಲಿ ಕಾಣಬರುವ ಕೆಲವೊಂದು ವಿಸ್ಮಯಕಾರಿಯಾದ ಸಂಗತಿಗಳನ್ನು ಈಗ ಗಮನಿಸೋಣ: ‘ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು| ಮುಂತಾಗಿ ಸೂಚಿಸಿರುವಲ್ಲಿ ಆಧುನಿಕ ಅಣುವಿಜ್ಞಾನದ ಮಾಹಿತಿಗಳಿವೆ!

  ‘ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ| ಪನಸಪುಷ್ಪದ ಕಾವ್ಯ ವಿಶ್ವಂಬರಕಾವ್ಯ’ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರ ಸೂಚಿಸಿರುವುದನ್ನು ಕಾಣಬಹುದು! ‘ಅಣುಪರಮಾಣುಗಳ ಅಣಕದಿಂಪುಟ್ಟುವ ವಿಪರೀತ ರೋಗದಾ ಎಣಿಕೆಯನರಿಯಲಶಕ್ಯ’ಎಂಬ ಹೇಳಿಕೆಯು ‘ವ್ಶೆರಸ್ ಇನ್‍ಫೆಕ್ಷನ್’ ನಿಂದ ರೋಗಗಳು ಹರಡುವುವೆಂಬ ಆಧುನಿಕ ವೈದ್ಯಕೀಯ ವಿಜ್ಞಾನದ ಮೂಲವಾಗಿದೆ!
*   *  *
  ಜಗತ್ತಿನಾದ್ಯಂತ ಜನಸಂಖ್ಯಾಸ್ಫೋಟವನ್ನು ತಡೆಗಟ್ಟುವ ದಿಸೆಯಲ್ಲಿ  ಆಧುನಿಕ ವೈದ್ಯಕೀಯ ವಿಜ್ಞಾನವು ‘ವ್ಯಾಸೆಕ್ಟಮಿ’ ಟ್ಯೂಬೆಕ್ಟಮಿ’ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕಪ್ರಸಿದ್ಧಿ ಪಡೆದಿದೆ. ಆದರೆ ನಮ್ಮ ಪೂರ್ವಿಕರಿಗೆ ಪ್ರಾಚೀನಕಾಲದಲ್ಲೇ ಈ ತಂತ್ರಜ್ಞಾನವು ತಿಳಿದಿದ್ದ ಸಂಗತಿಯಾಗಿತ್ತೆಂದರೆ ಅಚ್ಚರಿಯ ವಿಚಾರವಾಗಬಹುದು. ಅದನ್ನು ಯಾರೂ ನಂಬಲಾರರು! ಆದರೆ ಕುಮುದೇಂದುಮುನಿಯು ಕಟ್ಟಿರಿಸಿರುವ ಪ್ರಾಚೀನ ಗ್ರಂಥಮಾಹಿತಿಯಂತೆ ಇದು ಸತ್ಯ ಸಂಗತಿಯಾಗಿದೆ. ಈ ತಂತ್ರಜ್ಞಾನವನ್ನು ‘ಲಿಂಗಛೇಧನವಿಜ್ಞಾನ’ ಎಂದು ಸೂಚಿಸಲಾಗಿದೆ.
*  *  *
  ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮವು ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರವು ‘ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿಅವರೊಳನಂತವ ಸಕಲಾಂಕವ ನವದೊಳ್ ಸವಿಯಾಗಿಸಿ ಪೇಳುವ’ ಎಂಬಲ್ಲಿ ಹಾಗೂ  ಜೋಡಿಯಂಕದಕೂಟದಂಗ| ಕೂಡುವಪುಣ್ಯಾಂಗಭಂಗ|‘ ಎಂಬಲ್ಲಿ ಈ ವಿಚಾರವು ನಿರೂಪಿತವಾಗಿದೆ. ಆಧುನಿಕ ಗಣಕ ಯಂತ್ರಕ್ರಮಕ್ಕೆ ‘ಬೈನರಿ ಸಿಸ್ಟಂ’ ಮೂಲಾಧಾರವೆಂಬುದು ಸರ್ವವಿದಿತ. (16 ಬಿಟ್ಸ್ ಪ್ರೊÀ್ರಸೆಸರನ್ನ್ನು ಒಳಗೊಂಡ ಸೂಪರ್ ಕಂಪ್ಯ್ರೂಟರಿನ ಜೀವಾಳವು ‘ಸರ್ವಭಾಷಾಮಯೀಭಾಷಾ ಕನ್ನಡದ 64 ಮೂಲಾಕ್ಷರಗಳೆಂಬುದನ್ನ್ಮು ಜಗತ್ತು ತಿಳಿಯಬೇಕಿದೆ!)
  *  *  *  
  “ದೂರವಾಣಿ, ಆಕಾಶವಾಣಿ, ದೂರದರ್ಶನ, ಮುಂತಾದ ಸಮೂಹಮಾಧ್ಯಮಗಳು ಆಧುನಿಕ ವಿಜ್ಞಾನದ ಸಾಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ! ಆದರೆ ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೆಂದುವಿನ)À ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರನೂ, ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನೂ ಮೆಚ್ಚುಗೆ ಸೂಚಿಸಿದ್ದ ಸಂಗತಿ, ಈರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ  ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದೆಯುವ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿರುವುದುನ್ನು ಕಾಣಬಹುದು. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೆಂದುಮುನಿಯು ಕಾಲಿನಿಂದ ಒದ್ದು, ಪರಮಾರ್ಥದೆಡೆಗೆ ಸಾಗಿದರೆ; ನಮ್ಮ ಆಧುನಿಕ ಸಾಹಿತ್ಯಲೋಕದ ಕೆಲವು ಮೇಧಾವಿಗಳು ಈ ಸಿರಿಭೂವಲಯವನ್ನೇ ಕಾಲಿನಿಂದ ಒದ್ದು ತಮ್ಮ ಪ್ರತಿಭೆಯನ್ನು ಪ್ರಕಟಿಸುವವರಾಗಿದ್ದಾರೆ!
*  *  *
  ನವರತ್ನಕೆತ್ತಿದಹಸೆಯ| ಸುವಿಶಾಲದರ್ಪಣದಂತೆಹೊಳೆವನೆಲ| ದವನಿಯನಾಲ್ಕನೆಯಂಕ| ಎಂಬ ಸಾಲುಗಳನ್ನು ಗಮನಿಸಿದಾಗ ಚಿತ್ರಕಲೆಯನ್ನೊಳಗೊಂಡ ಕನ್ನಡಿಯ ಬಳಕೆ ಹಾಗೂ ಇಂಥ ಕನ್ನಡಿಯ ನಯಗಾರಿಕೆಯಷ್ಟು ಕುಶಲವಾದ ಗಾರೆÉಯ ನೆಲವನ್ನು ರೂಪಿಸುವ  ಕಟ್ಟಡ ನಿರ್ಮಾಣ ತಂತ್ರಜ್ಞಾನವು ನಮ್ಮ್ಮಲ್ಲಿ ಪ್ರಾಚೀನಕಾಲದಲ್ಲೇ ಪ್ರಚಲಿತವಿದ್ದ ಸಂಗತಿ ತಿಳಿಯುತ್ತದೆ! ಸಾವಿರಾರು ಚದರ ಮೈಲಿಗಳಷ್ಟು ವಿಸ್ತಾರವಾದ ಭವನಗಳ ವಿವರಣೆಯನ್ನು ಗಮನಿಸಿದಾಗ; ಕಟ್ಟಡನಿರ್ಮಾಣ ತಂತ್ರಜ್ಞಾನದಲ್ಲಿ ನಮ್ಮ ಪ್ರಾಚೀನರ ಪ್ರತಿಭೆ ಹಾಗೂ ಸಾಮಥ್ರ್ಯದ ಪರಿಚಯವಾಗುತ್ತದೆ.  
. *  *  *
  ಕುಮುದೇಂದು ಮುನಿಗೆ ಸಕಲ ಜ್ಞಾನ-ವಿಜ್ಞಾನಗಳ ಪರಿಚಯವೂ ಇದ್ದಿತು ಎಂಬ ಮಾತನ್ನು ಇಂದಿನವರು ಸುಲಭವಾಗಿ ಒಪ್ಪಿಕೊಳ್ಮ್ಳವುದಿಲ್ಲ. ಇಂದಿನ ವಿಜ್ಞಾನಯುಗದ ಸಾಧನ ಸಲಕರಣೆಗಳನ್ನು ಬಳಸಿಕೊಳ್ಳಲು ನಾವು ಸಂಪಾದಿಸಿದ ‘ದ್ರವ್ಯ’ರೂಪದ ಶಕ್ತಿಯ ಅಗತ್ಯವಿರುವುದನ್ನು ಯಾರೂ ಅಲ್ಲಗಳೆಯಲಾರರು. ದೂರದರ್ಶನ, ದೂರಸಂಪರ್ಕ, ಕಾರು; ಬಸ್ಸು; ರೈಲು; ಹಡಗು; ವಿಮಾನ ಮುಂತಾದುವುಗಳನ್ನು ಬಳಸಲು ಹಣವನ್ನು ನೀಡಲೇಬೇಕೆಂಬುದು ಸರ್ವವಿದಿತ. ಇವೆಲ್ಲವೂ ಲೌಕಿಕ ಸಾಧನಗಳು. ಇವುಗಳ ಪ್ರಾಪ್ತಿಗೆ ‘ದ್ರವ್ಯಶಕ್ತಿ’ ಅಗತ್ಯ.

  ಆದರೆ ಅಲೌಕಿಕವಾದ ‘ಯೋಗಶಕ್ತಿ’ ಇರುವವರು ಈ ಲೌಕಿಕ ಸಾಧನ-ಸಲಕರಣೆಗಳ ಸಹಾಯವೇ ಇಲ್ಲದೇ ಕೇವಲ ತಮ್ಮ ಯೋಗಶಕ್ತಿಯಿಂದಲೇ ಇವುಗಳ ಉಪಯೋಗವನ್ನು ಪಡೆಯಬಲ್ಲರೆಂಬುದೂ ಸಹಜ ಸಂಗತಿ. ನಮ್ಮ ಪ್ರಾಚೀನ ಋಷಿ ಮುನಿಗಳು ಕ್ಷಣಮಾತ್ರದಲ್ಲಿ ಲೋಕಾಂತರ ಪ್ರವಾಸ ಮಾಡುತ್ತಿದ್ದುದು, ರಾಮಾಯಣದ ವಿಮಾನದÀ ವಿಚಾರ,  ಮಹಾಭಾರತ  ಯುದ್ಧದಲ್ಲಿ ಬಳಸುತ್ತಿದ್ದ ಲೋಕಮಾರಕವಾದ ಅಸ್ತ್ರ ಪ್ರತ್ಯಸ್ತ್ರಗಳು ಮುಂತಾದುವು ಕೇವಲ ಕಲ್ಪನೆ ಎಂದು ನಿರಾಕರಿಸಲಾಗದು.
*  *  *
  ಸಿರಿಭೂವಲಯವು ಪ್ರಾಚೀನ ಕಾಲದಿಂದ ಮಾತ್ರವಲ್ಲ: ಇಂದಿಗೂ ಅಪರಿಚಿತವಾದ ಕೃತಿಯಾಗಿಯೇ ಉಳಿದಿದೆ.  “ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲ” ಎಂಬ ಸಂಗತಿಯನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ಕುಮುದೇಂದುಮುನಿಯ ಸಿರಿಭೂವಲಯವು 1200 ವರ್ಷಗಳ ಹಿಂದಿನ ಪ್ರತ್ಯಕ್ಷ ಸಾಕ್ಷಿಯಾಗಿದೆ.

  ಸಿರಿಭೂವಲಯದ ಪ್ರಥಮಖಂಡದÀ 59 ಅಧ್ಯಾಯದಲ್ಲಿ ‘ಋಗ್‍ವೇದ’ಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್‍ಭೂವಲಯ, ಋಗ್, ಋಗ್‍ಬಂಧ ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿರುವುದನ್ನು ಗಮನಿಸಬೇಕು.  ಕುಮುದೇಂದುಮುನಿಯು ಋಗ್ವೇದದ ಮಹತ್ವವನ್ನು ಸಮರ್ಪಕವಾಗಿ ಅರಿತವನು. ‘ಮಹಾಬಂಧ’ ವು ಸಿರಿಭೂವಲಯದ ಪ್ರಾಚೀನ ಹೆಸರೆಂಬುದು ಸ್ಪಷ್ಟವಿದೆ. ಕುಮುದೇಂದುಮುನಿಯು ಈ ಮಹಾಬಂಧ ಯಾವುದೆಂಬುದನ್ನು ಖಚಿತವಾಗಿ ನಿರೂಪಿಸಿದ್ದಾನೆ.

   ‘ಋಗ್‍ಮಹಾಬಂಧ’ ಎಂಬ ಇಲ್ಲಿನ ವಿವರಣೆಯ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್‍ವೇದವೇ ಪ್ರಧಾನ ಆಕರ ಎಂಬ ಮೂಲ ಸತ್ಯವನ್ನು ಖಚಿತಗೊಳಿಸಿದ್ದಾನೆ. ಇಂಥ ಮಾಹಿತಿಗಳ ಪರಿಚಯದಿಂದಾಗಿಯೇ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಹಾಗೂ ‘ಸತ್ಯ’ ಪತ್ರಿಕೆಯವರು 60 ವರ್ಷಗಳಿಗೆ ಹಿಂದೆಯೇ ಈ ವಿಚಾರವಾಗಿ ತಮ್ಮ ಖಚಿತ ಅಭಿಪ್ರಾಯ ಸೂಚಿಸಲು ಅವಕಾಶವಾಗಿದೆ. ಆದರೆ ಕಳೆದ 60ವರ್ಷಗಳಿಂದಲೂ ಜೈನ ಸಂಪ್ರದಾಯದವರಾಗಲೀ; ವೈದಿಕಸಂಪ್ರದಾಯದವರಾಗಲೀ  ಈವಿಚಾರವಾಗಿ ಚಕಾರವೆತ್ತಿಲ್ಲವೆಂಬುದು ಗಮನಾರ್ಹ.

  ಈ ಎರಡೂ ಸಂಪ್ರದಾಯಗಳವರೂ  ‘ತಾವು ಹಾಗೂ ತಮ್ಮ ತತ್ವಸಿಂದ್ಧಾಂತಗಳೇ ಸರ್ವಶ್ರೇಷ್ಠ’ ಎಂಬ ಮೇಲರಿಮೆಯ ಹುಚ್ಚು ಹೊಳೆಯ ಸೆಳತಕ್ಕೆ ಸಿಲುಕಿ, ಜಗತ್ತಿನ ಈ ಪ್ರಾಚೀನ ಅಮೂಲ್ಯ ಜ್ಞಾನರತ್ನವು ಆಸಕ್ತರ ಅವಗಾಹನೆಗೂ ಸುಲಭಾಗಿ ಸಿಗದಂತಾಗಿದ್ದಿತು. ಈಗ ಪ್ರಥಮ ಖಂಡದ ಪೂರ್ಣಪಾಠವಾದರೂ ಸರಳ ಪರಿಚಯದೊಂದಿಗೆ ಓದುಗರಿಗೆ ದೊರೆತಿರುವು ಸಂತಸದ ಸಂಗತಿ.
*  *  *
ಆದಿತೀರ್ಥಂಕರ ಋಷಭದೇವನಿಂದ ತನ್ನವರೆವಿಗೂ; ತನ್ನ ಹಾಗೂ ತನ್ನ ಗುರುಪರಂಪರೆಯವರು ಮತ್ತು ಕನ್ನಡಿಗರು ಹೊಂದಿದ್ದ ಹಿರಿಮೆ ಗರಿಮೆ ವಿದ್ಯಾಪ್ರೌಢಿಮೆ ವಿನಯ ಸಂಪನ್ನತೆ ಔದಾರ್ಯಾದಿ ಜೀವನಮೌಲ್ಯಗಳ ಪ್ರವಾಹರೂಪದ ವಿವರಣೆಯನ್ನು ಸಿರಿಭೂವಲಯದಲ್ಲಿರುವ ಬೆದಂಡೆ ಛಂದಸ್ಸಿನಲ್ಲಿ  ಕಾಣಬಹುದು. ಇಲ್ಲಿ ಬರುವ ಬೆದಂಡೆಯ ಭಾಗವು ಎಡೆಬಿಡದೆ ಸುರಿಯುವ ಜಡಿಮಳೆಯಂತೆ ಪುಟಗಟ್ಟಲೆ ನಿರಂತರವಾಗಿ ಹರಿದಿರುವುದನ್ನು ನೋಡಿದರೆ; ಕನ್ನಡಭಾಷೆಯ ಅಂದಿನ ಗದ್ಯಶೈಲಿಯ ಸಂಪತ್ತಿನ ಪರಿಚಯವಾಗಿ ಅಚ್ಚರಿಯಿಂದ ನಾವು ಮೂಕರಾಗುತ್ತೇವೆ!

  ಸಿರಿಭೂವಲಯವು ಕೇವಲ ಯೋಗವನ್ನು ಬೋಧಿಸುವ ಧರ್ಮಶಾಸ್ತ್ರ ಗ್ರಂಥವಲ್ಲ; ಅಥವಾ ಕೇವಲ ಶುಷ್ಕವಾದ ತರ್ಕ ಸಿದ್ಧಾಂತಗಳ ಸಂಗ್ರಹವೂ ಅಲ್ಲ. ಇದರಲ್ಲಿ ಯೋಗಜೀವನದೊಂದಿಗೆ  ಭೋಗಜೀವನದ ಬಹಳ ರಸವತ್ತಾದ ವಿವರಣೆಗಳೂ ಸಮನ್ವಯ ಗೊಂಡಿರುವುದನ್ನು ಓದುಗರು ಗಮನಿಸಬಹುದು.  ಸಿರಿಭೂವಲಯವು ಈಗ ಸಂಶೋಧನೆಯಾಗಿ ಮುದ್ರಣವಾಗಿರುವುದು  ಅರುವತ್ತರಲ್ಲಿ ಒಂದುಭಾಗಮಾತ್ರ! ಲಭ್ಯವಿರುವ  ಗ್ರಂಥದ ಪ್ರಥಮ ಖಂಡದಲ್ಲಿ ಉಳಿದಿರುವ 26 ಅಧ್ಯಾಯಗಳು ಪ್ರಕಟವಾಗಬೇಕಿತ್ತು ಈಗ ‘ಸಿರಿಭೂವಲಯಸಾಗರರತ್ನಮಂಜೂಷ’ 1-2ರÀ ಮೂಲಕ ಈ ಕಾರ್ಯವು ಸಾಕಾರಗೊಂಡಿದೆ. ಇನ್ನು ಮುಂದಿನ ಎಂಟುಖಂಡಗಳ ಅಗಾಧ ಸಾಹಿತ್ಯದ ರಾಶಿಯು ಏನಾಗಿದೆ? ಎಂಬುದನ್ನು ತಿಳಿದವರೇ ಹೇಳಬೇಕು.

  ಸಿರಿಭೂವಲಯದ ಅಂತರ್ಸಾಹಿತ್ಯದಲ್ಲಿ ಪುನಃ ನಾಗಬಂಧ ಹಾಗೂ ಅಶ್ವಗತಿಯಲ್ಲಿ ಸಾಗಿದರೆ; ಮೂಲಸಾಹಿತ್ಯ ಹಾಗೂ ಅಶ್ವಗತಿಯ ಅಂತರ್ಸಾಹಿತ್ಯವು ಪುನರುತ್ಪತ್ತಿಯಾಗುತ್ತದೆÉ!  ಇದೊಂದು ಅತಿ ವಿಸ್ಮಯಕಾರಿಯಾದ ಸಂಗತಿಯಾಗಿದೆ!! ಗಣಿತದಲ್ಲಿ ಸಾಹಿತ್ಯರಚನಾ ಚಮತ್ಕಾರವು ಎಷ್ಟು ಉನ್ನತವಾದುದು ಎಂಬ ಅಚ್ಚರಿಯುಂಟಾಗುತ್ತದೆ! ಸಿರಿಭೂವಲಯಕ್ಕೆ ಸಂಬಂಧಿಸಿದಂತೆ, ಖಚಿತವಾದ ಹಾಗೂ ಸಂಕ್ಷಿಪ್ತವಾದ ಪರಿಚಯದ ಭಾವಾನುವಾದವು ಹಿಂದೀ ಹಾಗೂ ಆಂಗ್ಲಾಭಾಷೆಯಲ್ಲಿಯೂ ರೂಪಾಂತರಗೊಂಡು ಕನ್ನಡೇತರರಿಗೂ ಈ ಮಹಾನ್ ಗ್ರಂಥದ ಪರಿಚಯವಾಗಲು ಅವಕಾಶವಾಗಿದೆ.
*  *  *
      ಕನ್ನಡಅಕ್ಷರಲಿಪಿ ಹಾಗೂ ಕನ್ನಡಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತಂತೆ ಆಧುನಿಕ  ವಿದ್ವಾಂಸರು ತಮ್ಮದೇ ಆದ ಹಲವಾರು ದಾಖಲೆಗಳನ್ನು ಸೂಚಿಸಿ, ತಮ್ಮ ಅನುಭವದ ಊಹಾಪೋಹಗಳನ್ನು ಸೇರಿಸಿ, ಕೆಲವಾರು ವಿಚಾರಗಳನ್ನು ನಿರ್ಧರಿಸಿ, ಅವುಗಳನ್ನೇ ಅಧಿಕೃತವಾಗಿ ಇಂದಿಗೂ ಶಾಲಾ ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ದಿವಂಗತ ಡಿ.ಎಲ್. ನರಸಿಂಹಾಚಾರ್ಯರ ನಿರ್ಧಾರದಂತೆ; ಕ್ರಿ.. ಶÀ. 400ಕ್ಕೆ ಮೊದಲು ಕನ್ನಡಭಾಷೆಯಲ್ಲಿ ಸಾಹಿತ್ಯವೇ ಇರಲಿಲ್ಲ. ಇನ್ನು ಕೆಲವರ ನಂಬಿಕೆ, ನಿರ್ಣಯದಂತೆ ಇಮ್ಮಡಿ ಪುಲಕೇಶಿಯ ಚಿಕ್ಕಪ್ಪ ಮಂಗಳೇಶನ ಕಾಲಕ್ಕೆ ಮೊದಲು ಕನ್ನಡವು ಲಿಪಿಬದ್ಧವಾಗಿರಲೇ ಇಲ್ಲ!!

   ಆದರೆ, ಸಿರಿಭೂವಲಯದ ಕುಮುದೇಂದುಮುನಿಯು ಕನ್ನಡ ಅಂಕಿಗಳು ಒಂದು ಸೊನ್ನೆಯಿಂದ ಉಗಮವಾಗಿರುವ ವಿಚಾರವನ್ನು ಖಚಿತವಾಗಿ ಸೂಚಿಸುತ್ತಾನೆ.!! ಕುಮುದೆಂದುವಿನ ಸಿರಿಭೂವಲಯದ ವಿವರಗಳು ಕನ್ನಡದ ಅಸ್ಥಿತ್ವವನ್ನು ಕೋಟ್ಯಾಂತರ ವರ್ಷಗಳ ಹಿಂದಿನದೆಂದು ಚಿತ್ರಿಸುತ್ತದೆ! ಕುಮುದೆಂದುವಿನ ಹೆಸರನ್ನಾಗಲೀ; ಅಥವಾ ಸಿರಿಭೂವಲಯದ ಹೆಸರನ್ನಾಗಲೀ ಯಾವಚರಿತ್ರೆಕಾರರೂ ಸೂಚಿಸಿಲ್ಲವೆಂಬುದು ವಿಶೇಷ ಸಂಗತಿ !!
*  *  *
  ಆದಿತೀರ್ಥಂಕ ಋಷಭದೇವನು ತನ್ನ ಪುತ್ರಿಯರಾದ ಬ್ರಾಹ್ಮೀ ಮತ್ತು ಸುಂದರಿಗೆ ಅವರ ಎಡಗೈಯ್ಯ ಹೆಬ್ಬೆರಳ ಮೂಲದಲ್ಲಿರುವ ರೇಖೆಗಳ ಸಮ ವಿಷಮಸ್ಥಾನಗಳ ವಿವರದೊಂದಿಗೆ 1 ರಿಂದ 10ರ ವರೆಗಿನ ಕನ್ನಡ ಅಂಕಿಗಳನ್ನೂ; ‘ಅ’ಕಾರದಿಂದ ‘ಹ’ ಕಾರದವರೆಗಿನ 60 ಮೂಲಾಕ್ಷರಗಳು ಹಾಗೂ 4 ಯೋಗವಾಹಗಳು ಸೇರಿದ ಸರ್ವಭಾಷಾಮಯೀ ಕನ್ನಡ ವರ್ಣಮಾಲೆ ಹಾಗೂ ಕನ್ನಡ ಅಂಕಿಗಳು ಹಾಗೂ ಅಕ್ಷರಗಳು ಪರಸ್ಪರ ಸಮವೆಂದು ತಿಳಿಸಿದ ವಿಚಾರವನ್ನು ಕುರಿತು ಕುಮದೇಂದುಮುನಿಯು ವಿವರಿಸಿರುವುದಿದೆ. ಉಪಲಬ್ದವಿರುವ ಸಾಹಿತ್ಯಿಕ ಮಾಹಿತಿಗಳ ಆಧಾರದಲ್ಲಿ ಲೆಕ್ಕಹಾಕಿದಾಗ ಋಷಭದೇವನ ಕಾಲವು ಸುಮಾರು 750 ಕೋಟಿ ವರ್ಷಗಳ ಹಿಂದಿನದಾಗುತ್ತದೆ!! ಕನ್ನಡಭಾಷೆಯ ಶಬ್ದಗಳು ನೂರು ಇಂದ್ರರಕಾಲದಿಂದಲೂ ಬಳಕೆಯಲ್ಲಿದ್ದು ಸವೆದುಹೋಗಿವೆ ಎಂದು ಕುಮುದೇಂದುಮುನಿಯು ಸೂಚಿಸಿರುವುದಿದೆ!!!
  ಇದನ್ನೆಲ್ಲ ಇಂದಿನವರು ಒಪ್ಪದಿರಬಹುದು. ಕೇವಲ 4000 ವರ್ಷಗಳ ಹಿಂದಿನ ಮಾಹಿತಿಯನ್ನಾದರೂ ಎಲ್ಲರೂ ಒಪ್ಪಲೇಬೇಕು! ‘ಕರುನಾಡ ತಣ್ಪಿನ ನೆಲದೊಳು ಹುಟ್ಟಿದ ಕುರುಹರಿಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚಿಜ್ಯೋತಿ ಇದರಿಯಾ’ ಎಂದು ಶ್ರೀ ಕೃಷ್ಣನು ಪಾರ್ಥನಿಗೆ ಗೀತೋಪದೇಶದ ಸನ್ನಿವೇಶದಲ್ಲಿ ತಿಳಿಸಿರುವ ಮಾಹಿತಿಯು ಸಿರಿಭೂವಲಯದಲ್ಲಿ ಸ್ಪಷ್ಟವಾಗಿರುವುದನ್ನು ಕಾಣಬಹುದು! ಇದೇ ಗೀತೋಪದೇಶದ ಸನ್ನಿವೇಶದಲ್ಲಿ ‘ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು, ಅರಿಯೆಂದು ತಿಳಿದು ಇರಿ’ ಎಂಬ ಉಪದೇಶವೂ ಇದೆ.
*  *  *
  ಕುಮುದೇಂದುಮುನಿಯು ಕನ್ನಡಲಿಪಿಯು ದುಂಡಾಗಿದೆ; ಮುದ್ದಾಗಿದೆ ಎಂದು ಅದರ ಸೌಂದರ್ಯವನ್ನು ವರ್ಣಿಸಿದ್ದಾನೆ. ಶಾಸನಗಳಲ್ಲಿ ಬಳಸಿರುವ ಲಿಪಿಕ್ರಮವು ಈ ರೀತಿಯದಲ್ಲ ಎಂಬುದು ಸರ್ವವಿದಿತ. ಆದ್ದರಿಂದ ಕುಮುದೇಂದುವಿನ ಕಾಲವಾದ ಕ್ರಿ.ಶ. 800ರ ಸುಮಾರಿಗೆ ಹಿಂದಿನಿಂದಲೂ  ತಾಳೆಯೋಲೆಗಳ ಬರಹದಲ್ಲಿ ಸುಂದರವಾದ ಕನ್ನಡಲಿಪಿಯ ಬಳಕೆಯಾಗುತ್ತಿತ್ತು ಎಂಬುದು ಸಂಶಯಾತೀತವಾದ ಸಂಗತಿಯಾಗಿದೆ. ಇದನ್ನು ಆಧುನಿಕ ವಿದ್ವಾಂಸರು; ಭಾಷಾಶಾಸ್ತ್ರ್ರಜ್ಞರು ಉಪೇಕ್ಷಿಸಲು ಸಾಧ್ಯವೇ ಇಲ್ಲ!
*  *  *
  ಹಿಂದಿನ ಕಾಲದಲ್ಲಿ ಹೊಸದಾಗಿ ಪ್ರಚಾರಕ್ಕೆಬಂದ ಸಂಸ್ಕøತ ಭಾಷೆಯು ಅಂದಿನ ವಿದ್ಯಾವಂತರ ಆಕರ್ಷಣೆಯ ಬಿಂದುವಾಗಿ, ಕನ್ನಡಭಾಷೆಯು ಕಡೆಗಣಿಸಲ್ಪಟ್ಟಿದ್ದು ಚಾರಿತ್ರಿಕ ಸಂಗತಿ. ಅನಾದಿಕಾಲದಿಂದ ಪ್ರಚಲಿತವಿದ್ದ ಕನ್ನಡಭಾಷೆಯನ್ನು ಉಳಿಸಿ; ಬೆಳೆಸಿದ ಕೀರ್ತಿಯು  ಜೈನಸಂಪ್ರದಾಯದ ಸಾಧನೆಯಾಗಿದೆ.   ಈಚೆಗೆ ಪ್ರಚಾರಕ್ಕೆ ಬಂದ ಆಂಗ್ಲಾಭಾಷೆಯ ಪ್ರಭಾವವು ಪುನಃ ಹೊಸನೀರಿನ ಪ್ರವಾಹದಂತೆ ಕನ್ನಡದಮೇಲೆ ಧಾಳಿಯಿಟ್ಟಿತು. ಕನ್ನಡಭಾಷೆಯು ಇಂದಿನ ಆರುಕೋಟಿಗೂ ಮೀರಿದ ಕನ್ನಡಿಗರ ಸಂಪತ್ತು. ಆದರೆ ಇಂದಿನ ಕನ್ನಡಿಗರಿಗೆ ಕನ್ನಡವು ತಮ್ಮ ಜೀವನ ನಿರ್ವಹಣೆಗೆ ಅನಿವಾರ್ಯವೇನಲ್ಲ ಎಂಬ ಪರಿಸರ ಉಂಟಾಗಿದೆ!

   ಗ್ರಾಮೀಣ ಜನತೆಯೂ ಇದರ ಪ್ರಭಾವದಿಂದ ಪಾರಾಗಿಲ್ಲ. ಇಂಥ ಪರಿಸರದಲ್ಲಿ ‘ಸಿರಿಭೂವಲಯ’ದಂಥ ಜಗತ್ತಿನ ಜ್ಞಾನಸಂಪತ್ತನ್ನು ಕೇಳುವವರಾರು? ಕನ್ನಡಾಭಿಮಾನ ಹೊಂದಿರುವ ಶ್ರದ್ಧಾಳುಗಳು ಜಗತ್ತಿನ ಏಕೈಕ ಜ್ಞಾನದನಿಧಿಯಾಗಿರುವ ಈ ಅಚ್ಚರಿಯ ಕೃತಿ ‘ಸಿರಿಭೂವಲಯ’ ದ ಮುಂದಿನ ಸರಳ ಸಂಶೋಧನೆ, ಪರಿಚಯ, ಪ್ರಕಟಣೆ, ಪ್ರಚಾರ ಹಾಗೂ ಪ್ರಸಾರದತ್ತ ಗಮನ ಹರಿಸಬೇಕಾಗಿದೆ.

  ಬಹಳ ಕಿರಿಯವಯಸ್ಸಿನ ಮಕ್ಕಳು ತಮ್ಮ ಪೂರ್ವಜನ್ಮದ ಸಂಸ್ಕಾರ ಬಲದ ಅಸಾಧಾರಣವಾದ  ಪ್ರತಿಭೆ; ಹಾಗೂ  ಸಾಮಥ್ರ್ಯಗಳಿಂದ ಸಂಗೀತ ಅಥವಾ ನೃತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ದಿಗ್ಗಜಗಳೇ ಅಚ್ಚರಿಯಿಂದ ಮೂಕರಾಗಿ, ಅಸೂಯಾಗ್ರಸ್ತರಾಗುವಂತೆ ಮಾಡಿರುವುದೂ ಉಂಟು! ಆದರೆ ಇಂಥ ಪ್ರದರ್ಶನಕ್ಕೆ ಕೇವಲ ಸಂಗೀತ ಹಾಗೂ ನೃತ್ಯ ಪ್ರಾಕಾರಗಳುಮಾತ್ರ ಸೀಮಿತವಾಗುವುದು ಖೇದದ ಸಂಗತಿ.

  ಎಳೆವಯಸ್ಸಿನ ಪ್ರತಿಭಾವಂತ ಮಕ್ಕಳನ್ನು ಸಿರಿಭೂವಲಯದಂಥ ಜಗÀದ್ವಿಖ್ಯಾತ ಸಾಹಿತ್ಯ ಕೃತಿಯ ಪ್ರಭಾವಲಯಕ್ಕೆ ಕರೆತಂದರೆ, ಅವರು ಹೆಚ್ಚಿನ ಶ್ರದ್ಧೆಯಿಂದ ಅಧ್ಯಯನಮಾಡಿ, ಹಲವಾರು ಭಾಷೆಗಳ ಅಪರೂಪದ ಸಾಹಿತ್ಯವನ್ನು ಗುರುತಿಸಿ, ಇದುವರೆವಿಗೂ ಈ ಜಗತ್ತಿನಲ್ಲಿ ಯಾರೊಬ್ಬರೂ ಸಾಧಿಸದಿರುವಂಥ ಮಹತ್ತರವಾದ ಸಾಧನೆಯಲ್ಲಿ ಸಿದ್ಧಿಪಡೆಯಲು ಅವಕಾಶವಾಗುತ್ತದೆ. ಇಂಥ ಪ್ರತಿಭಾಶಾಲಿ ಮಕ್ಕಳನ್ನು ಅವರ ತಂದೆ-ತಾಯಿ ಸೂಕ್ತವಾಗಿ ಪ್ರಚೋದಿಸಿ, ಪ್ರೋತ್ಸಾಹಿಸಿದರೆ ಜಗತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯದ್ಭುತವಾದ ಸಾಧನೆ ಮಾಡಲು ಅವಕಾಶವಾದೀತೆಂದು ನಾನು ಭಾವಿಸಿದ್ದೇನೆ.
*  *  *
  ಸಿರಿಭೂವಲಯದ ಸಂಶೋಧನೆಯು ಒಬ್ಬಿಬ್ಬರಿಂದ ಮುನ್ನಡೆಯುವ ಕಾರ್ಯವಲ್ಲ. ಈ ಗ್ರಂಥದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹಲವಾರು ಭಾಷೆಗಳನ್ನು ತಿಳಿದವರಿರಬೇಕು. ಅಪಾರ ತಾಳ್ಮೆ ಇರಬೇಕು. ಸಕಲ ಜ್ಞಾನ-ವಿಜ್ಞಾನ- ಶಾಸ್ತ್ರ ಸಾಹಿತ್ಯವನ್ನು ಬಲ್ಲವರಿರಬೇಕು. ಅಂಥವರೆಲ್ಲರೂ ಒಂದೆಡೆ ಕಲೆತು ಪರಸ್ಪರ ಸಹಕಾರದಿಂದ ಶ್ರಮಿಸಿ ಕಾರ್ಯ ನಿರ್ವಹಿಸಬೇಕು. ಆಗಮಾತ್ರವೇ ಕುಮುದೇಂದುವಿನ ಜ್ಞಾನನಿಧಿಯಾದ ಈ ಗ್ರಂಥದ ವಿಶ್ವರೂಪ* ದರ್ಶನವು ಜಗತಿಗೆ ದೊರೆಯಲು ಸಾಧ್ಯವಾಗುತ್ತದೆ! (*ದೆಮ್‍ಬತ್ನಾಲ್ಕುಲಕ್ಷಗಳಪಾಹುಡಗಳಸಎ| ಜನ್ಮಜ್ಞಾನಮಾರ್ಗಣೆಯಾವಿವಶವೆಲ್ಲ|ಸದರದಿÀನರಿವುದೆನನ್ನಯ|ವಿಶ್ವರೂಪವಿದುನರ ಇದು ಕುಮುದೇಂದುವು ಸ್ರಚಿಸಿರುವ ವಿಶ್ವರೂಪ)

   ಈಗ ನಮಗೆ ರೂಢಿಯಾಗಿರುವ ಒತ್ತಕ್ಷರ ಹಾಗೂ ಪೂರ್ಣಾಕ್ಷರ ಕ್ರಮವು ಸಿರಿಭೂವÀಲಯದಲ್ಲಿ ಇರುವುದಿಲ್ಲ!Éಂಬುದನ್ನು ಈಗಾಗಲೇ ಸೂಚಿಸಿದ್ದಾಗಿದೆ. ಅಲ್ಲಿ ಸ್ವರ ಹಾಗೂ ಮೂಲ ವ್ಯಂಜನಗಳÀನ್ನು ಜೋಡಿಸಿಕೊಂಡು ಓದುವ ಕ್ರಮವಿದೆ! 718 ಭಾಷೆಗಳನ್ನು ಒಂದೆಡೆ ಕಟ್ಟಿರಿಸಬೇಕಾದಲ್ಲಿ ಈರೀತಿಯ ತೊಡಕಿನ ಕ್ರಮವು ಅತ್ಯಗತ್ಯ ಹಾಗೂ ಅನಿವಾರ್ಯವಾದುದು. ಈ ಕಾರಣದಿಂದಾಗಿ ಕಳೆದ ಅರುವತ್ತ್ತು ವರ್ಷಗಳಿಂದ ಈ ಅಚ್ಚರಿಯ ಕಾವ್ಯವು ಸಾಮಾನ್ಯ ಜನರ ಗಮನಕ್ಕೆ ಬಾರದೇ ಅಜ್ಞಾತವಾಗಿಯೇ ಉಳಿದಿತ್ತು!
    ಸಿರಿಭೂವಲಯದ ಬರವಣಿಗೆಯ ಕ್ರಮವನ್ನು ಇನ್ರ್ನೆವ್ಮ್ಮೆ ನೆನಪುಮಾಡಿಕೊಳ್ಳಿ. ಈ ಗ್ರಂಥದಲ್ಲಿರುವ ಲಿಪಿಕ್ರ್ರಮದ ಸ್ವರೂಪವು ಹೇಗಿರುವುದೆಂಬುದನ್ನು ಸ್ವಲ್ಪ ಗಮನಿಸೋಣ.  ಇಲ್ಲಿ ‘ಸ್ ಇ ರ್ ಇ ಭ್ ಊ ವ್ ಅ ಲ್ ಅ ಯ್ ಅ’ ಎಂಬುದಾಗಿ ಬರೆದು; ಸಿರಿಭೂವಲಯ ಎಂದು ಓದಿಕೊಳ್ಳಬೇಕು! ಎಲ್ಲಭಾಷೆಯ ಎಲ್ಲಸಾಹಿತ್ಯವೂ ಇದೇ ಕ್ರಮದಲ್ಲಿರುತ್ತದೆ. ಜನ ಸಾಮಾನ್ಯರಿಗೆ ಮೇಲುನೋಟಕ್ಕೆ ಇದು ಸುಲಭ ಓದಿಗೆ ತೊಡಕಾಗಿ ಕಾಣಿಸಿದರೂ ಸ್ವಲ್ಪ ಅಭ್ಯಾಸವಾದರೆ, ಅದೇ ಸರಳವಾದಕ್ರಮ ಎನಿಸುತ್ತದೆ! ಪ್ರಾರಂಭದಲ್ಲಿ ಮಾತ್ರ ಕೆಲಮಟ್ಟಿಗೆ ಶ್ರಮವೆನಿಸುವುದು ಸಹಜ. ಶ್ರಮವಿರದಕಾರ್ಯ ಯಾವುದಿದೆ?
*  *  *
  ನಮ್ಮ ಸಾಮಾಜಿಕ ಹಾಗೂ ಸಾಂಸ್ಕøತಿಕ ಜೀವನದ ಪರಿಸರವು ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಸಾಕಷ್ಟು ಬದಲಾಗಿದೆ. ಹಿಂದೆಲ್ಲ ಲಿಖಿತ ದಾಖಲೆಗಳ ಓದಿನ ಮೂಲಕವೇ ಜ್ಞಾನಾರ್ಜನೆ ನಡೆಯಬೇಕಿತ್ತು. ಈಗ ದೂರದರ್ಶನ ಹಾಗೂ ಕಂಪ್ಯೂಟರ್‍ಗಳು ಜ್ಞಾನಪ್ರಸಾರದ ಪ್ರಮುಖ ಸಾಧನಗಳಾಗಿವೆ. ಓದುವ ಹವ್ಯಾಸವೇ ಕಣ್ಮರೆಯಾಗುತ್ತಿದೆ.   ಓದಿದರೂ ಸುಲಭಗ್ರಾಹ್ಯವಾದ ಗದ್ಯಶೈಲಿಯ ಪಠ್ಯಪುಸ್ತಕಗಳನ್ನು ಮಾತ್ರ  ಓದುವುದಾಗಿದೆ! ಹಳಗನ್ನಡದ ಗದ್ಯಶೈಲಿಯೇ ಹೆಚ್ಚು ಜನಗಳಿಗೆ ಅರ್ಥವಾಗುವುದಿಲ್ಲ!

  ಹಾಗಿರುವಲ್ಲಿ ಕ್ಲ್ಲಿಷ್ಟವಾದ ಪದ್ಯಕಾವ್ಯವನ್ನು ಓದಿತಿಳಿಯುವವರು ಅಪರೂಪ.   ಇಂಥ ಪರಿಸರದಲ್ಲಿ ಅಕ್ಷರಗಳೇ ಇರದೇ ಅಂಕಿಗಳಿಂದ ರಚಿತವಾಗಿರುವ ಕಾವ್ಯವನ್ನು ಯಾರು ಓದಿತಿಳಿಯಲು ಸಾಧ್ಯ !?   ಅಂಕಿಗಳನ್ನು ಅಕ್ಷರ ರೂಪಕ್ಕೆ ಪರಿವರ್ತಿಸಿದರೂ ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಒತ್ತಕ್ಷರವಿಲ್ಲದ ಮೂಲಾಕ್ಷರ ಕ್ರಮದ ಪದ್ಯ ಸಾಹಿತ್ಯವನ್ನು ಓದಲು ಯಾರು ಮುಂದಾಗುತ್ತಾರೆ! ?     ಮುದ್ರಿತ ಕಾವ್ಯದ ಒಂದೆರಡು ಸಾಲುಗಳನ್ನು ಓದುವುದರೊಳಗೇ ಓದುಗರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ! ಅಲ್ಲಿಗೆ ಈ ಸಿರಿಭೂವಲಯದ ಅಧ್ಯಯನ ಮುಕ್ತಾಯವಾದಂತೆಯೇ ಸರಿ!!

   ಈ ಒಂದು ಪ್ರಬಲ ಕಾರಣದಿಂದಾಗಿ ಕಳೆದ ಅರುವತ್ತು ವರ್ಷಗಳಿಂದಲೂ ಸಿರಿಭೂವಲಯವು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ‘ಕಬ್ಬಿಣದ ಕಡಲೆ’ ಯಾಗಿ ಉಳಿದು ಬಂದಿತ್ತು.   ಈಗ ಪರಿಸರ ಬದಲಾಗಿದೆ. ಕನ್ನಡದ ಓದುಬರಹ ಬಲ್ಲ ಯಾರಿಗಾದರೂ ಅರ್ಥವಾಗುವಂತೆ ಸಿರಿಭೂವಲಯದ ಹಲವಾರು ಪ್ರಮುಖ ಮಾಹಿತಿಗಳು ಪ್ರಕಟವಾಗಿವೆ.  ಇವುಗಳ ಓದಿನಿಂದ ಆಸಕ್ತ ಓದುಗರು ಜಗತ್ತಿನ ಈ ಅಚ್ಚರಿಯ ಅಂಕ ಕಾವ್ಯವನ್ನು ಮೂಲರೂಪದಲ್ಲಿ ತಾವೂ ಓದಿ ತಿಳಿದುಕೊಳ್ಳುವ ಪ್ರಯತ್ನ ನಡೆಸಲು ಅವಕಾಶವಾಗಿದೆ.

      ಕುಮುದೇಂದುಮುನಿಯ ಸಿರಿಭೂವಲಯವನ್ನು ಕುರಿತಂತೆ ಕನ್ನಡಸಾಹಿತ್ಯ ಪರಿಸರದಲ್ಲಿ ಪ್ರಾರಂಭದಿಂದಲೂ ತಪ್ಪು ಕಲ್ಪನೆಯ ಪ್ರಚಾರವೇ ಪ್ರಮುಖಪಾತ್ರವಹಿಸಿರುವುದು ಸ್ಪಷ್ಟವಿದೆ! ಈ ಪ್ರಾಚೀನ ಕನ್ನಡ ಅಂಕಕಾವ್ಯದ ಹಾಗೂ ಕರ್ತೃವಿನ ಹೆಸರನ್ನು ಯಾವ ಪ್ರಸಿದ್ಧ ಇತಿಹಾಸಕಾರರೂ ನಮೂದಿಸರಿರುವುದು ಪ್ರಾರಂಭದಿಂದಲೂ ಬೆಳೆದುಬಂದ ವ್ಯಾಧಿಯಾಗಿದೆ. 1953ರ ನಂತರ ಈ ಅಚ್ಚರಿಯ ಕೃತಿಯು ಆಧುನಿಕ ಮುದ್ರಣಕ್ರಮದಲ್ಲಿ ಮುದ್ರಿತವಾದನಂತರ ಅದರ ಸಂಶೋಧನೆಗೆ ಸಂಬಂಧಿಸಿದ ವಿವಾದವು ಹುಟ್ಟಿಕೊಂಡು, ಇಲ್ಲದ ಇತಿಹಾಸ ನಿರೂಪಣೆಯ ಪ್ರಯತ್ನವು ಯಶಸ್ವಿಯಾಗಿ ನಡೆಯಿತು! ಈ ಗ್ರಂಥನಿರೂಪಣೆಯಲ್ಲಿ ಬಳಸಿರುವ ಕನ್ನಡ ಲಿಪಿಯ ಅಪರಿಚಿತ ಸ್ವರೂಪದಿಂದಾಗಿ, ಒಬ್ಬಿಬ್ಬರನ್ನು ಬಿಟ್ಟರೆ, ಉಳಿದ ಆಧುನಿಕ ವಿದ್ವಾಂಸರು ಯಾರೂ ಈ ಗ್ರಂಥವನ್ನು ಓದುವ ಸಾಹಸಕ್ಕೆ ಕೈಹಾಕಲಿಲ್ಲ!

    ಸಿರಿಭೂವಲಯ ಮೂಲಗ್ರಂಥದ ಕೆಲವೊಂದುಭಾಗ ಹಾಗೂ ಅದರ ಸಂಶೋಧನೆಯ ಫಲವನ್ನು ಭಾರತ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯು ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸದೇ ಹೋಗಿದ್ದಲ್ಲಿ; ಇಂದಿನ ವಿಜ್ಞಾನಯುಗದ ವಿದ್ಯಾವಂತ ವಿದ್ವಾಂಸರು “ಇಂಥದೊಂದು ಅಚ್ಚರಿಯ ಕಾವ್ಯ ಇರುವುದೇ ಸುಳ್ಳು; ಇದೊಂದು ಕಟ್ಟುಕಥೆ” ಎಂದೇ ನಿರ್ಧರಿಸುತ್ತಿದ್ದುದು ನಿಶ್ಚಯ. ಈರೀತಿ ನಿರ್ಧರಿಸಿ ಪ್ರಚಾರಮಾಡಿರುವುದೂ ಉಂಟು! ನಿಜ; ಭಾರತದಲ್ಲಿ ಸಾಹಿತ್ಯಕ್ಷೇತ್ರಕ್ಕೆ ಮಹತ್ತರವೆನಿಸಿದ ಜ್ಞಾನಪೀಠ ಪ್ರಶಸ್ತಿಯನ್ನು ಹೆಚ್ಚುಸಲ ಪಡೆದು ದಾಖಲೆ ಸ್ಥಾಪಿಸಿರುವ ಭಾಷೆಕನ್ನಡ.  ಆದರೆ; ಈ ಜ್ಞಾನಪೀಠ ಪ್ರಶಸ್ತಿಯ ಸ್ಥಾಪನೆಗೆ ಮೂಲಕಾರಣ ಈ ಸಿರಿಭೂವಲಯದ ಸಂಶೋಧನೆ ಎಂಬ ಮಾಹಿತಿ ಬಹಳಷ್ಟುಜನಗಳಿಗೆ ತಿಳಿದಿಲ್ಲ!!
   ಸಿರಿಭೂವಲಯದ ವಿವರಗಳು ಎಷ್ಟೇ ಅಚ್ಚರಿಯಿಂದ ಕೂಡಿದ್ದರೂ ಅವುಗಳು ನಂಬಲೇಬೇಕಾದ ಸತ್ಯ ಸಂಗತಿಗಳಾಗಿವೆ. ಕನ್ನಡದ ಪ್ರಾಚೀನತೆಯನ್ನು ಆಧಾರಸಹಿತವಾಗಿ ಪ್ರತಿಪಾದಿಸುವ ದಿಸೆಯಲ್ಲಿ ಕುಮುದೇಂದು ಮುನಿಯ ‘ಸಿರಿಭೂವಲಯವು’ ಒಂದು ಜೀವಂತ ಸಾಕ್ಷಿಯಾಗಿದೆ. ಇದರ ಮೂಲಸಾಹಿತ್ಯವು ಕನ್ನಡ; ಪ್ರಾಕೃತ; ಸಂಸ್ಕøತಭಾಷಾ ಪ್ರಧಾನವಾಗಿದೆ. ಇದರಲ್ಲಿ ಅಡಕವಾಗಿರುವ 718 ಭಾಷೆಯ ಸಾಹಿತ್ಯದ ಪೈಕಿ ಕನ್ನಡ; ಪ್ರಾಕೃತ; ಸಂಸ್ಕøತಭಾಷೆಗಳೊಂದಿಗೆ ತಮಿಳು; ತೆಲುಗು; ಮಾಗಧಿ;  ಅರ್ಧಮಾಗಧಿ; ಶೌರಸೇನಿ; ಅಪಭ್ರಂಶ; ಪಾಲಿ ಮುಂತಾದ ಭಾಷೆಗಳ ಸಾಹಿತ್ಯದ ತುಣುಕುಗಳನ್ನು ಶ್ರೀಕಂಠಯ್ಯನವರು ಗುರುತಿಸಿ ತೋರಿಸಿದ್ದಾರೆ. ಈಚೆಗೆ ಬೆಳಗಾವಿಯಲ್ಲಿ ನಡೆದ ಶಿಬಿರದಲ್ಲಿ ಪ್ರಾಧ್ಯಾಪಕರೊಬ್ಬರು ಪರ್ಷಿಯನ್ ಭಾಷೆಯ ಸಾಹಿತ್ಯದ ತುಣುಕನ್ನು ಗುರುತಿಸಿ ತೋರಿಸಿದ್ದಾರೆ.

   ಸಿರಿಭೂವಲಯವನ್ನು ಕುರಿತು ಮಾತನಾಡುವಾಗ; ‘ಸಿರಿಭೂವಲಯದಲ್ಲಿ ಏನಿದೆ ಮಣ್ಣು?’ ಎಂದು ಒಬ್ಬರು ವಿದ್ವಾಂಸರು ಸೂಚಿಸಿರುವುದಿದೆ! ಸಿರಿಭೂವಲಯ ಎಲ್ಲಿದೆ? ಕುಮುದೇಂದು ಯಾರು? ಎಂಬುದಾಗಿಯೂ ಹಿರಿಯ ವಿದ್ವಾಂಸರೊಬ್ಬರು ಸೂಚಿಸಿರುವುದುಂಟು! ಆದರೆ ಅದೇ ವಿದ್ವಾಂಸರು ಇನ್ನೊಂದು ಸನ್ನಿವೇಶದಲ್ಲಿ  ‘ಸಿರಿಭೂವಲಯದಲ್ಲಿ ಏನೇನು ಮಾಹಿತಿಗಳು ಅಡಗಿವೆ ಎಂಬುದನ್ನು ಕುರಿತು  ಕನ್ನಡ, ಸಂಸ್ಕøತ ಪ್ರಾಕೃತಭಾಷೆಗಳನ್ನು ಬಲ್ಲವರು ಈ ಗ್ರಂಥದ  ಸಮರ್ಪಕ ಸಂಶೋಧನೆಮಾಡಿ, ಸೂಕ್ತವಾಗಿ ಪರಿಚಯಿಸಬೇಕಾದ ಅಗತ್ಯವಿದೆ, ಮೈಸೂರು ನಗರದ ನಿವಾಸಿ ಶ್ರೀಮತಿ ಪದ್ಮಾವತಿ ಎಂಬುವವರು ಈ ಸಿರಿಭೂವಲಯದ ವಿಚಾರವಾಗಿ ಸಂಶೋಧನೆಮಾಡಿದ್ದಾರೆ; ಇಂದೂರಿನ ಕುಂದ ಕುಂದ ಜ್ಞಾನಪೀಠದವರೂ ಹಲವಾರು ವರ್ಷಗಳಿಂದ ಸಿರಿಭೂವಲಯದ ಸಂಶೋಧನೆ ಮಾಡುತ್ತಿದ್ದಾರೆ;’ ಎಂದು ಸೂಚಿಸಿದ್ದಾರೆ!

   ಸುಧಾರ್ಥಿಯು ಮೈಸೂರು ನಗರ ನಿವಾಸಿ; ಗಣಿÂತಶಾಸ್ತ್ರವಿಶಾರದೆ ಶ್ರೀಮತಿ ಪದ್ಮಾವತಿಯವರನ್ನು ಭೇಟಿಮಾಡಿದ್ದಾಗಿದೆ. ಸಿರಿಭೂವಲಯದ ವಿಚಾರ ತಿಳಿದಿರುವ ಶ್ರೀ ತರುಣಸಾಗರ ಮುನೀಜಿಯವರು ಮಹತ್ವಪ್ರರ್ಣವಾದ ಈ ಗ್ರ್ರಂಥದ ವಿಚಾರವಾಗಿ ಬರೆಯಲು ಶ್ರೀಮತಿ ಪದ್ಮಾವತಿಯವರಿಗೆ ಸೂಚಿಸಿದ್ದರಂತೆ.  ಅದು ಸಾಧ್ಯವಾಗದ ಕಾರ್ಯವೆಂದು ತಿಳಿದು ಅವರು ಸುಮ್ಮ್ಮನಿದ್ದವರು. ಸುಧಾರ್ಥಿಯ ‘ಸಿರಿಭೂವಲಯಸಾರ’ವನ್ನು ನೋಡಿ, ಶ್ರೀಮತಿ ಪದ್ಮಾವತಿಯವರು ಮೆಚ್ಚುಗೆ ಸೂಚಿಸಿ ‘ನನಗೆ ಈ ಸಿರಿಭೂವಲಯದ ಪರಿಚಯವಿಲ್ಲ’ ಎಂದು ತಿಳಿಸಿದ್ದೂ ಆಗಿದೆ. ಇಂದೂರಿನವರ ಸಂಶೋಧನೆಯನ್ನು ಕುರಿತೂ ವಿವರಿಸಿದ್ದಾಗಿದೆ. ಸಿರಿಭೂವಲಯದ ಸರಳ ಪರಿಚಯ ಕುರಿತಂತೆ ಹಿಂದಿ ಹಾಗೂ ಆಂಗ್ಲಾಭಾಷೆಯ ಭಾವಾನುವಾದದ ಪ್ರತಿಗಳನ್ನು ತರಿಸಿಕೊಂಡು ಅವರೂ ವಿಸ್ಮಯಗೊಂಡಿದ್ದಾಗಿದೆ! ಇವೆಲ್ಲ ಮಾಹಿತಿಗಳೂ ಕಣ್ಣೆದುರಿಗೇ ಇದ್ದರೂ ಈ ವಿಚಾರವಾಗಿ ಇಲ್ಲದ ಭ್ರಮೆ ಸೃಷ್ಟಿಸುವ ಹೇಳಿಕೆಗಳ ಹಿನ್ನೆಲೆ ಏನೆಂಬುದನ್ನು ಸಿರಿಭೂವಲಯದ ಅಭಿಮಾನಿಗಳು ಚೆನ್ನಾಗಿ ಬಲ್ಲರು.

  ಸಿರಿಭೂವಲಯದಲ್ಲಿ ಅಡಕವಾಗಿರುವ  ಮಾಹಿತಿಗಳಿಂದಾಗಿ ಪ್ರಾಚೀನ ಪರಂಪರೆಗೆ ಸೇರಿದ ಪ್ರಚಲಿತ ಧಾರ್ಮಿಕ; ಸಾಹಿತ್ಯ ಹಾಗೂ ರಾಜಕೀಯ ಇತಿಹಾಸದ ವಿಚಾರಗಳಲ್ಲಿ ಹಲವಾರು ಸಂಗತಿಗಳು ಬುಡಮೇಲಾಗಿ ಉರುಳಿಬಿದ್ದಿವೆ!  ಅವುಗಳ ಪೈಕಿ ಕನ್ನಡನಾಡಿನಲ್ಲಿ ಜೈನ ಸಂಪ್ರದಾಯದ ಪ್ರವೇಶ; ಕನ್ನಡ ಅಂಕಿಗಳು ಹಾಗೂ ಅಕ್ಷರಗಳ ಉಗಮ ಮತ್ತು ವಿಕಾಸಕ್ಕೆ ಸಂಬಂಧಿಸಿದ ಸಂಗತಿಗಳು; ಕನ್ನಡದ ಪ್ರಾಚೀನ ಪರಂಪರೆ; ಇಂದು ಪ್ರಚಲಿತವಿರುವ ‘ಭಗವದ್ಗೀತೆÉ’ಯ ಮೂಲ; ಜಗತ್ತಿನ ಸಕಲ ಜ್ಞಾನಕ್ಕೂ ಋಗ್ವೇದವೇ ಮೂಲ ಮುಂತಾದುವು ಪ್ರಮುಖವಾದುವು.

1) ಜಗತ್ತಿನಲ್ಲಿ ಯಾವುದೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ; ಎಲ್ಲವೂ ಗಣಿತಾತ್ಮಕವಾಗಿ ನಡೆಯುತ್ತದೆ. 2) ಜಗತ್ತಿನಲ್ಲಿರುವುದೆಲ್ಲವೂ ಅರೆಸತ್ಯ; ಅರೆಮಿಥ್ಯ. 3) ಮಾನವರೆಲ್ಲರಿಗೂ ಒಂದೇ ಧರ್ಮ. ಅದು ಮಾನವಧರ್ಮ ಎಂಬ ಮೂರು ಮುಖ್ಯ ವಿಚಾರಗಳನ್ನು ಸಿರಿಭೂವಲಯವು ಪ್ರತಿಪಾದಿಸುತ್ತದೆ. ವಿಶ್ವಮಾನವ ಸಂದೇಶದ ಮೂಲವು ಸಿರಿಭೂವಲಯವಾಗಿದೆ! ಆದರೆ, ಸಿರಿಭೂವಲಯವು ವಿಶ್ವವಿದ್ಯಾಲಯದಿಂದ ದೂರವಾಗಿದೆ!!

  ಇಂದಿನ ವಿದ್ವಾಂಸರು ಇತ್ತ ಗಮನ ಹರಿಸಿದರೆ, ಕುಮುದೆಂದು ಮುನಿಯ ಅಭಿಮಾನಿಗಳೆಲ್ಲರೂ ಹೆಚ್ಚು ಸಂಭ್ರಮ ಪಡಬಹುದಾದ ಹಲವಾರು ಪ್ರಾಚೀನ ಮಹತ್ವಗಳು ಬೆಳಕು ಕಾಣಲು ಅವಕಾಶವಾದೀತೆಂದು ನಾನು ಕನಸು ಕಾಣುತ್ತಿದ್ದೇನೆ!
  ಸುಮಾರು 60 ವರ್ಷಗಳ ಹಿಂದೆ ಸಿರಿಭೂವಲಯದ ಸಂಶೋಧನೆಮಾಡಿದ ಕರ್ಲಮಂಗಲಂ ಶ್ರೀಕಂಠಯ್ಯನವರು ವಿಶ್ವವಿದ್ಯಾಲಯದ ಶಿಕ್ಷಣ ಪಡೆದವÀರಲ್ಲ! ಈಗ ಸಿರಿಭೂವಲಯದ ಸರಳ ಪರಿಚಯ ಕೃತಿಗಳನ್ನು ರೂಪಿಸಿರುವ ಸುಧಾರ್ಥಿಯೂ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದವನಲ್ಲ! ಆದರೆ ಈ ಪರಿಚಯ ಕೃತಿಗೆ ಕಳಶವಿಟ್ಟಂತೆ ಮುನ್ನುಡಿಯನ್ನು ಬರೆದಿರುವ ನಿಘಂಟುಬ್ರಹ್ಮ; ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಿರಿಭೂವಲಯಕ್ಕೆ ವಿಶ್ವವಿದ್ಯಾಲಯದ ಮಾನ್ಯತೆಯನ್ನೂ ಮೀರಿದ ಜಾಗತಿಕ ಮನ್ನಣೆಯನ್ನು ಓದಗಿಸಲು ಕಾರಣರಾಗಿದ್ದಾರೆ. ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ.

  ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ ಅಂತಸುಬ್ಬರಾಯರು ಇವರುಗಳ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಸಿರಿಭೂವಲಯ ಗ್ರಂಥದ ಸರಳ ಪರಿಚಯಕಾರ್ಯಕ್ಕೆ ಕೈಹಾಕಿ, ಸಾಧ್ಯವಿರುವಷ್ಟು ಯಶಸ್ಸುಪಡೆದಿದ್ದೇನೆ. ಅದರ  ಫಲವೇ ಇದುವರೆವಿಗೆ ನಿಮ್ಮ ಮುಂದಿರಿಸಿದ ಖಚಿತ ಮಾಹಿತಿಗಳು. ಈ ಮಾಹಿತಿಗಳನ್ನು ಇದುವರೆವಿಗೂ ತಾಳ್ಮೆಯಿಂದ ಕೇಳಿದ ನಿಮಗೆಲ್ಲರಿಗೂ ಸಿರಿಭೂವಲಯದ ಸುಧಾರ್ಥಿಯ ಕೃತಜ್ಞತಾಪೂರ್ವಕ ನಮನಗಳು.
*  *  *
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
ಸಿರಿಭೂವಲಯದ ಸ್ಮಧಾರ್ಥಿ(ಕೆ. ಆರ್. ಶಂಕರನಾರಾಯಣ) ಹಾಲುವಾಗಿಲು ತಟ್ಟೇಕೆರೆ ಅಂಚೆ. ಹಾಸನ ಕಸಬ, ಹಾಸನ. 573 201. ದೂರವಾಣಿ 98172 257186. ಸಂಚಾರಿ: 9449946280.
ಮಿಂಚಂಚೆ: suಜhಚಿಡಿಣhಥಿhಚಿssಚಿಟಿ@gmಚಿiಟ.ಛಿom

Saturday, November 10, 2012

ತೀರ್ಥಂಕರರು ತಪಸ್ಸು ಮಾಡಿದ ರಸವೃಕ್ಷಗಳು



ತೀರ್ಥಂಕರರು ತಪಸ್ಸು ಮಾಡಿದ ರಸವೃಕ್ಷಗಳು
 
ಕ್ರ. ಸಂ
ತೀರ್ಥಂಕರರು
ರಸವೃಕ್ಷಗಳು
1
ವೃಷಭ
ವಟ (ಆಲ)
2
ಅಜಿತ
ಸಪ್ತವರ್ಣ (ಏಳೆಲೆ ಬಾಳೆ)
3
ಶಂಭವ
ಶಾಲ್ಮಲಿ
4
ಅಭಿನಂದನ
ಸರಲ
5
ಸುಮತಿ
ಪ್ರಿಯಂಗು
6
ಪದ್ಮಪ್ರಭ
ಕುಟಕಿ
7
ಸುಪಾರ್ಶ್ವ
ಶಿರೀಷ
8
ಚಂದ್ರಪ್ರಭ
ನಾಗ
9
ಪುಷ್ಪದಂತ
ನಾಗಫಣಿ (ಅಕ್ಷ)
10
ಶೀತಲ
ಬೆಲ್ಲವತ್ತ (ಧೂಲಿ)
11
ಶ್ರೇಯಾಂಸ
ಮುತ್ತುಗ  (ತುಂಬುರ
12
ವಾಸುಪೂಜ್ಯ
ಪಾಟಲಿ
13
ವಿಮಲ
ನೇರಿಳೆ
14
ಅನಂತ
ಅಶ್ವತ್ಥ (ಅರಳಿ)
15
ಧರ್ಮ
ದಧಿಪರ್ಣ
16
ಶಾಂತಿ
ನಂದಿ
17
ಕುಂಥು
ತಿಲಕ
18
ಆರ
ಬಿಳಿಮಾವು
19
ಮಲ್ಲಿ
ಕಂಕೇಲಿ
20
ಸುರ್ವತ
ಚಂಪಕ
21
ನಮಿ
ವಕುಳ
22
ನೇಮಿ
ಮೇಷಶೃಂಗ
23
ಪಾರ್ಶ್ವ
ದಾರು
24
ಮಹವೀರ
ಶಾಲಿ




Monday, November 5, 2012

Views of Dr. S. Srikanta Sastry on Siribhuvalaya (ಸಿರಿಭೂವಲಯ)




1.    For the history of Kannada language and literature, it is one of the earliest works, however much it may upset our present notions of the development of Kannada language, unless it can be proved to be modern.

2.   For the history of Sanskrit, Prakrit, Tamil & Telegu literatures of the 9th century, it is an eye opener.

3.   For the study of Jainism in particular and all other schools of Indian philosophy and religions, it provides new material which may revolutionise our present concepts of the development of Indian thought.

4.   For political history of India and Karnataka, it provides fresh material as it mentions Amoghavarsha and Ganga rulers of Mysore.

5.   For the history of Indian mathematics, it is an important document.  The recent studies in Viresena’s Dhavala Tika show that Indians even in 9th century, if not centuries earlier, were conversant with the theory of place-values, laws of indices, the theory of logarithms, special methods to deal with fractions, theories of transformations, geometrical and mensuration formulae, infinite processes and theories of infinity anticipating canter and other western mathematicians, correct value of (pi), permutation and combination etc.  Kumudendu’s work seems to be far more advanced than even Virasena’s and therefore not easy of comprehension.

6.   For the study of Indian Positive Sciences, it is important showing how as early as the 9th Century, if not earlier, Physics, Chemistry, Biology, Ayurveda, Zoology, Veterinary Science, astronomy, etc. had developed in India.

7.   For the history of fine arts like architecture, sculpture, iconography, painting etc. the Bhuvalaya forms an inexhaustible source.

8.   Special attention should be drawn to the version of Bhagavad Gita and Mahabharata, which have been embedded in the general text in such a way that it is impossible to assert that they are interpolations by some moderns, who should have had extraordinary genius indeed to produce work involving mathematical combination of letters to fit in the general scheme of numerous other Kava’s.  There are not less than eight or ten versions of Gita according to Kumudendu in five languages.  Regarding Mahabharata in which the Bhandarkar Institute of Poona is working for the past 25 years and more to bring out a critical edition, the Bhuvalaya professes to give the original nucleus of the Mahabharata called Jayakhya Samhita.   Further it gives three versions of Rig Veda differing entirely from the accepted versions.  The Bhagavad Gita, Mahabharata and Rig Veda as well as the Ramayana (which also is included in this Kavya by Kumudendu) are acknowledgly fundamental texts for the study of Indian culture.

9.   Besides these works of general interest, the Bhuvalaya professes to give the texts of important Jaina texts like Tattvarthadigama sutras of Uma Swati, Gandhahasti Mahabhasya, Devagamastotra etc, of Samanta Bhadra, Chudamani, Samayasara, Pravachana Sara etc of Kundakundacharya, the work of Pujyapada like Sarvartha Siddhi, Akalamka, Virasena, Jinasena etc of Digambara Scnhool, the Angas, and many works considered lost by Digambaras but claimed to have been preserved by the Swethambaras.  Technical works like Suryaprajnapti, Chandraprajnapti, Jambudwipa prajnapti, Trilokaprajnapti etc.

10.                The works is also important from the archeological point of view as it gives a list of 27 alphabets, including
Brahmi, Kharoshti, Yavanani (Greek), Saindhava (Indus Script), Gandhara, Bolidi etc. and languages like Tebati (Tibetan), Parasa (Persion) etc.