Thursday, November 1, 2012

ಕನ್ನಡಿಗರ ಹೆಮ್ಮೆಯ ಗ್ರಂಥ “ಸಿರಿಭೂವಲಯ”ದ ಕರ್ತೃ ಕುಮುದೇಂದುವನ್ನು ಸ್ಮರಿಸೋಣ


(ಎಲೆಮರೆಯ ಸಂಶೋಧಕ ದಾವಣಗೆರೆಯ ಕೆ. ಸಿ. ಪಾತಯ್ಯನವರು )

ಕನ್ನಡಿಗರ ಹೆಮ್ಮೆಯ ಗ್ರಂಥ “ಸಿರಿಭೂವಲಯ”ದ ಕರ್ತೃ ಕುಮುದೇಂದುವನ್ನು ಸ್ಮರಿಸೋಣ

1-11-2012 


ಣುಣುಪಾದ ಬಾಹ್ಮಿಯೆಡಗೈಯ್ಯೊಳಂಕಿತ
ಗುಣನದಸರಮಾಲೆಬಂಧ
ದಣುವಿನೊಳಾದೀಶ ಬರೆದ ಖರೋಷ್ಟಿಯ
ತನಿಯಾದ ವೃಷಭಾಂಕಿತವು

ಇದರೊಳು ಹುದುಗಿಹ ಹದಿನೆಂಟುಭಾಷೆಯ
ಪದಗಳಗುಣಿಸುತ ಬರುವರ್
ಸದನವತೊರೆದು ತಪೋವನವನುಸೇರೆ
ಹೃದಯಕೆ ಶಾಂತಿ ಈವಂಕ

ಸೊಗಸಾದ ಕರ್ಮಾಟದಾದಿ
ಸುಗುಣಸಂಪೂರ್ಣಾಂಗ ಭಾಷೆ
ಬಗೆಯತಿಶಯಕಾವ್ಯ
ಜಗದೊಳಿನ್ನಿಲ್ಲದ ಭಾಷೆ

ಯಶಸ್ವತಿಯಾಡುವ ಪ್ರಾಕೃತಲಿಪಿಯಂಕ
ರಸದ ಸಂಸ್ಕೃತದಂಕ
ಅಸಮಾನ ದ್ರಾವಿಡ ಆಂಧ್ರ ಮಹರಾಷ್ಟ್ರ
ವಶದಲಿ ಮಲಯಾಳದಂಕ

ಮದನನಬಾಣವು ವಕ್ರವಹುದು
ಸದರದಹೂವಿನಗಂಧ
ಮೃದುಲವದೆಂತೋ ಅಂತು ಹೃದಯಹೊಕ್ಕು
ಹದನಾಗಿ ಭೋಗಯೋಗವನು


ನೆನೆಕೊನೆವೋಗಿಸಿ ಭವ್ಯಜೀವರನೆಲ್ಲ
ಜಿನರೂಪಿಗೈದಿಪ ಕಾವ್ಯ
ರಣಕಹಳೆಯ ಕೂಗನಿಲ್ಲವಾಗಿಪ ಕಾವ್ಯ
ದನುಭವಖೇಚರ ಕಾವ್ಯ

ಕುಮುದೇಂದು

No comments: