Friday, October 26, 2012

Views o fDr. Prof. Hampa Nagarajaiah on ಸಿರಿಭೂವಲಯ



Video (Sorry quality of video is very poor)


Views of

Dr. Prof. Hampa Nagarajaiah 

and 

Sudharthi Hassan

 on 
SIRIBHUVALAYA / SIRIBHOOVALAYA

(Published in the interest of readers  to have a healthy debate)


ಓದುಗರು  ತಮ್ಮ ಅಭಿಪ್ರಾಯವನ್ನು ತಿಳಿಸಲಿ. ಸುಧಾರ್ಥಿಯವರ ಅನಿಸಿಕೆಗಳನ್ನು ಪ್ರಕಟಿಸಲಾಗಿದೆ

(ಆರೋಗ್ಯಕರ ಚರ್ಚೆಗೆ ದಾರಿಯಾಗಲಿ ಎಂಬುದು ನಮ್ಮ ಉದ್ದೇಶ)



ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಕಿರುಪರಿಚಯವಾಗಿ ಹಾಸ
ನದ ಸುಧಾರ್ಥಿಯವರು ರೂಪಿಸಿರುವ ‘ಸಿರಿಭೂವಲಯದ ಒಳನೋಟ’  ಎಂಬ ಕೃತಿಯ ಲೋಕಾರ್ಪಣೆಗಾಗಿ ಬೆಂಗಳೂರಿನ ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ (ರಿ) ಅವರು ಪರಮಪೂಜ್ಯ ಶ್ರೀ ಪುಣ್ಯಸಾಗರ ಮಹಾರಾಜ್ ಅವರ ದಿವ್ಯ ಸನ್ನಿಧಿಯಲ್ಲಿ ದಿನಾಂಕ 14-10-2012 ರಂದು ಬೆಂಗಳೂರಿನ ಕರ್ನಾಟಕ ಜೈನ ಭವನದ ಡಾ| ಡಿ. ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾನ್ಯಶ್ರೀ ಪ್ರೊ. ಹಂಪ ನಾಗರಾಜಯ್ಯ ಅವರು ಕೃತಿಯ ಬಿಡುಗಡೆಯನಂತರ ಮಾಡಿದ ಭಾಷಣದ ಕ್ರೋಡೀಕೃತ ವಿವರಗಳು: 

  “ಪರಮಪೂಜ್ಯ ಶ್ರೀ ಪುಣ್ಯಸಾಗರ ಮಹಾರಾಜರಿಗೆ ಭಕ್ತಿಪೂರ್ವಕವಾಗಿ ವಂದಿಸುತ್ತಾ ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ.  ಕಳೆದ 60 ವರ್ಷಗಳಿಂದ ನಾನು ಸಾಹಿತ್ಯಾಸಕ್ತನಾಗಿ ಸಾಹಿತ್ಯೋಪಾಸನೆಯಿಂದ ಬದುಕನ್ನು ರೂಪಿಸಿಕೊಂಡು ಬಂದಿದ್ದೇನೆ. ಇಂದು ಈ ವೇದಿಕೆಯಲ್ಲಿ ನಾಲ್ಕು ಪುಸ್ತಕಗಳು ಬಿಡುಗಡೆಯಾಗಿವೆ. ಬಿಡುಗಡೆ ಅಂದರೆ; ಇದುವರೆವಿಗೂ ಬಂಧನದಲ್ಲಿದ್ದುವು ಎಂದರ್ಥವಲ್ಲ! ಇಂದು ಅವುಗಳು ಲೋಕಾರ್ಪಾಣೆಯಾಗಿವೆ.  ಲೋಕಾರ್ಪಣೆಯೆಂದರೆ; ಅವುಗಳ ವಿಚಾರವಾಗಿ ಓದುಗರಿಗೆ ಹೆಚ್ಚಿನ ವಿವರ ಒದಗಿಸುವುದು.
   ಇಂದು ಬಿಡುಗಡೆಯಾದ ನಾಲ್ಕು ಕೃತಿಗಳ ಪೈಕಿ ಮೂರು ಕೃತಿಗಳ ವಿಚಾರವಾಗಿ ನಾಲ್ಕು ನಾಲ್ಕು ಮಾತುಗಳನ್ನು ಹೇಳಿ, ಸಿರಿಭೂವಲಯದ ಒಳನೋಟದ ವಿಚಾರವಾಗಿ ಹೆಚ್ಚು ಮಾತನಾಡಲು ನಿರ್ಧರಿಸಿದ್ದೇನೆ. 
  ಎಷ್ಟೇ ಒತ್ತಾಯವಿದ್ದರೂ ನಾನು ಸಿರಿಭೂವಲಯದ ವಿಚಾರವಾಗಿ ಬಾಯಿಮುಚ್ಚಿಕೊಂಡಿದ್ದೆ. ಇಂದು ಪ್ರಥಮಬಾರಿಗೆ ಈ ವೇದಿಕೆಯಿಂದ ಮಾತನಾಡುತ್ತಿದ್ದೇನೆ. ಇದಕ್ಕೆ ಕಾರಣ ಶ್ರೀ ಎಂ.ಎ.ಜಯಚಂದ್ರ ಅವರು. ‘ಕಳೆದ ಐವತ್ತು ವರ್ಷಗಳಿಂದಲೂ ನೀವು ಸಿರಿಭೂವಲಯದ ವಿಚಾರವಾಗಿ ಮೌನವಹಿಸಿದ್ದೀರಿ. ಹೀಗೇ ಸುಮ್ಮನಿದ್ದರಾಗುವುದಿಲ್ಲ. ವಾಸ್ತವ ಸಂಗತಿ ತಿಳಿಸಿ ಈಗಲಾದರೂ ಏನಾದರೂ ಹೇಳಿ’ ಎಂದು ಇವರು ಒತ್ತಾಯಿಸಿದ ಕಾರಣದಿಂದ ಮೊದಲಬಾರಿಗೆ  ವೇದಿಕೆಯಿಂದ ಸಿರಿಭೂವಲಯ ಕುರಿತು ಮಾತನಾಡಲಿದ್ದೇನೆ.
  (ಮರುಮುದ್ರಣವಾಗಿ ಅಂದು ಬಿಡುಗಡೆಯಾದ ಮೂರು ಕೃತಿಗಳ ವಿಚಾರವಾಗಿ ಕೆಲವು ಮೆಚ್ಚುಗೆಯ ಮಾತುಗಳನ್ನಾಡಿದನಂತರ)
 ಇನ್ನು ನಾಲ್ಕನೆಯ ಕೃತಿ ಸಿರಿಭೂವಲಯದ ಒಳನೋಟ. ಸಿರಿಭೂವಲಯವನ್ನು ಕುರಿತು ಒಂದು ವಿಶೇಷವಾದ ಉಪನ್ಯಾಸವನ್ನೇ ಏರ್ಪಡಿಸಬೇಕು. ಹೆಚ್ಚು ವಿಸ್ತಾರವಾಗಿಮಾತನಾಡಲು ಇದು ವೇದಿಕೆಯಲ್ಲ.  1950 ರಿಂದ ಸಿರಿಭೂವಲಯದ ವಿಚಾರ ಪ್ರಚಾರದಲ್ಲಿದೆ. ಈವಿಚಾರವಾಗಿ ಹಾಸನದ ಸುಧಾರ್ಥಿಯವರು ವಿಸ್ತಾರವಾಗಿ ಬರೆದಿದ್ದಾರೆ. ಕಲ್ಪನೆಯಿಂದ ಭಾವನಾತ್ಮಕವಾಗಿ ವಿಹರಿಸುವವರಿಗೆ ಇದು ಇಷ್ಟವಾಗುತ್ತದೆ. ಆದರೆ ಸ್ಪಷ್ಟವಾದ ಇತಿಹಾಸದ ವಿವರಗಳು ದೊರೆತಿಲ್ಲ. ಎಲ್ಲವೂ ಕಲ್ಪನೆಯಿಂದ ಕೂಡಿದ್ದು. ಈ ಸಿರಿಭೂವಲಯ ಗ್ರಂಥಕ್ಕೆ ಮುಖ್ಯವಾದ ಚೌಕಟ್ಟು ನೀಡಿದವರು ಎಲ್ಲಪ್ಪಶಾಸ್ತ್ರಿಯವರು. ಈ ವಿಚಾರವಾಗಿ ಸುಧಾರ್ಥಿಯವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ನಾನು ಓದಿದ್ದೇನೆ. 
  ಸುಧಾರ್ಥಿಯವರ ಈ ಚಿಕ್ಕ ಪುಸ್ತಕದಲ್ಲೂ; ದೊಡ್ಡ ಪುಸ್ತಕದಲ್ಲೂ ಎಲ್ಲಪ್ಪಶಾಸ್ತ್ರಿಯವರ ವಿಚಾರ ಸರಿಯಾಗಿಲ್ಲ. ಎಲ್ಲಪ್ಪಶಾಸ್ತ್ರಿಯವರನ್ನು ನಾನು 1950ರ ಹಿಂದಿನಿಂದಲೂತಿಳಿದವನು. ಎಲ್ಲಪ್ಪ ಶಾಸ್ತ್ರ್ತಿಯವರು ಗ್ರಂಥರಚನೆಯಲ್ಲಿ ಮೇಧಾವಿಯಾಗಿದ್ದವರಾದರೂ ಅವರು ಉತ್ತಮ ವಕ್ತಾರರಾಗಿರಲಿಲ್ಲ. ವಿಷಯವನ್ನು ಸ್ಪಷ್ಟವಾಗಿ ಭಾಷಣದಲ್ಲಿ ನಿರೂಪಿಸುವವರಾಗಿರಲಿಲ್ಲ. ಆದರೆ ಅವರು ದ್ರಷ್ಟಾರರಾಗಿದ್ದರು. ಎಲ್ಲಪ್ಪ ಶಾಸ್ತ್ರಿಯವರಿಗೆ ಏನೂತಿಳಿದಿರಲಿಲ್ಲ. ಚಿನ್ನ ತಯಾರಿಕೆಗಾಗಿ ಪುಸ್ತಕತಂದರು ಇತ್ಯಾದಿ ಸ್ವಕಪೋಲಕಲ್ಪಿತ ವಿವರಣೆಗಳು ಸುಧಾರ್ಥಿಯವರ ಪುಸ್ತಕದಲ್ಲಿವೆ. ಮುಂದೆ 1952 ರಲ್ಲಿ ಅವರಿಗೆ ಕರ್ಲಮಂಗಲಂ ಶ್ರೀಕಂಠಯ್ಯ ಎಂಬುವವರೊಂದಿಗೆ ಪರಿಚಯವಾಯಿತು. ಈ ಶ್ರೀಕಂಠಯ್ಯನವರಿಗೆ 14 ಭಾಷೆಗಳಲ್ಲಿ ಪಾಂಡಿತ್ಯವಿತ್ತು ಇತ್ಯಾದಿ ಹೇಳಿದ್ದಾರೆ. ಶ್ರೀಕಂಠಯ್ಯನವರಿಗೆ ಸಿರಿಭೂವಲಯದ ವಿಚಾರವಾಗಿ ತಿಳುವಳಿಕೆ ಕೊಟ್ಟವರು ಎಲ್ಲಪ್ಪ ಶಾಸ್ತ್ರಿಗಳು. ಶ್ರೀಕಂಠಯ್ಯನವರು ಸಿರಿಭೂವಲಯದ ಸಂಶೋಧಕರೆಂದು ಅವರನ್ನು ಹೊಗಳಿ ಶಿಖರಕ್ಕೇರಿಸಿ; ಎಲ್ಲಪ್ಪ ಶಾಸ್ತ್ರಿಗಳನ್ನು ಪಾತಾಳಕ್ಕೆ ಅಧಃಪಾತಾಳಕ್ಕೆ ತುಳಿಯಲಾಗಿದೆ. ಶ್ರೀಕಂಠಯ್ಯನವರು ಅಂಥ ಪ್ರಕಾಂಡ ಪಂಡಿತರಾಗಿರಲಿಲ್ಲ. ಇದರಲ್ಲಿ ಅಪಾಯಕಾರಿಯಾದ ಮಾತುಗಳಿವೆ. ಎಷ್ಟು ಹೇಳಬೇಕೋ ಅಷ್ಟನ್ನು  ಹೇಳಬೇಕು. ಮತ್ತೆ ಅನಂತಸುಬ್ಬರಾಯರು.. .. ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಅವರಿಗೆ ಒಂದು ಕೆಲಸ ವಹಿಸಿದೆ. ಎರಡು ಗಂಟೆÀಗಳಾದರೂ ಅವರಿಂದ ಅರ್ಧಪುಟವನ್ನೂ ಟೈಪ್ ಮಾಡಲು ಸಾಧ್ಯವಾಗÀಲಿಲ್ಲ!
 .. ಸಿರಿಭೂವಲಯದಲ್ಲಿ ಅಂಕಿಗಳಿಗೆ ಅಕ್ಷರಗಳನ್ನು ಅಳವಡಿಸಿ, ಅದರಿಂದ ಸಾಹಿತ್ಯವನ್ನು ರೂಪಿಸಿಕೊಳ್ಳಬೇಕೆಂಬ ವಿಚಾರವಿದೆ. ಇದು 8ನೇ ಶತಮಾನದ ಕೃತಿಯೆಂಬ ವಿಚಾರವಿದೆ. ಸಾಂಗತ್ಯ ಛಂದಸ್ಸನ್ನು ಬಳಸಲಾಗಿದೆಯೆಂಬ ವಿಚಾರವಿದೆ. ಸಾಂಗತ್ಯಛಂದಸ್ಸು ಬಳಕೆಗೆಬಂದದ್ದೇ 15ನೇ ಶತಮಾನದಿಂದ ಈಚೆಗೆ ಎಂಬುದು ಇಲ್ಲಿ ಗಮನಾರ್ಹ. ರತ್ನಾಕರವರ್ಣಿಯು ಸಾಂಗತ್ಯ ಛಂದಸ್ಸಿನ ಸೀಮಾಪುರುಷ.
  ಸಿರಿಭೂವಲಯದಲ್ಲಿ 78 ಭಾಷೆಗಳ ಸಾಹಿತ್ಯವಿದೆ; ಎಲ್ಲ ವಿಚಾರಗಳೂ ಇಲ್ಲಿವೆ ಎಂಬ ಸಂಗತಿ ನಿರೂಪಿತವಾಗಿದೆ. ಇದನ್ನು ಓದಿದವರಿಗೆ ಇದು ಎಂಥ ಅದ್ಬುತವಾದ ಗ್ರಂಥ ಎನಿಸುತ್ತದೆ. ಕುಮುದೇಂದು ಎಂಥ ಮಹಾತ್ಮ ಎನಿಸುತ್ತದೆ. ಆದರೆ ಸಿರಿಭೂವಲಯ ಎಲ್ಲಿದೆ? ಕುಮುದೇಂದು ಯಾರು? ಈ ಹಿಂದೆ ನಾಗರಾಜ ಎಂಬುವವರು ಪ್ರಜಾವಾಣಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಇನ್ನೂ ಕೆಲವರು ಬರೆದಿದ್ದಾರೆ. ಸಿರಿಭೂವಲಯದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಒಪ್ಪವಂತೆ ಸಾಧಿಸಿ ತೋರಿಸಬೇಕು. ಅದಿನ್ನೂ ಆಗಿಲ್ಲ!
  ಇದೆಲ್ಲ ಏನೇ ಇರಲೀ, ಕಳೆದ 25 ವÀರ್ಷಗಳಿಂದ  ಸುಧಾರ್ಥಿಯವರು ವ್ರತವಾಗಿ -ನೋಂಪಿಯಾಗಿ ಆಚರಿಸಿ ಈ ಪರಿಚಯಕೃತಿಗಳನ್ನು ಬರೆದಿದ್ದಾರೆ. ಅದಕ್ಕಾಗಿ  ಸುಧಾರ್ಥಿಯವರನ್ನು ಜೈನ ಸಂಪ್ರದಾಯದವರು ಮಾತ್ರವಲ್ಲ; ಎಲ್ಲರೂ ಅಭಿನಂದಿಸಿ ಬೆನ್ನು ತಟ್ಟಬೇಕು’’ – ಇದು ಅಂದಿನ ಅವರ ಭಾಷಣದ ಸಾರಾಂಶವಾಗಿದೆ. 



ಸಮಾರಂಭದಲ್ಲಿ  ಲೇಖಕನನ್ನು ಸನ್ಮಾನಿಸಲು ವೇದಿಕೆಗೆ ಆಹ್ವಾನಿಸಿದಾಗ, ಲೇಖಕನ ಕೈಕುಲುಕಿದ ಶ್ರೀ ಹಂಪನಾ ಅವರು ‘ಬಹಳ ಒಳ್ಳೆಯ ಕೆಲಸಮಾಡಿದ್ದೀರಿ. ಸಿರಿಭೂವಲಯ ಕುರಿತ ನಿಮ್ಮ ಪರಿಚಯಗ್ರಂಥಗಳ ರಚನೆ ತುಂಬಾ ಶ್ಲಾಘನೀಯ. ಈ ಪ್ರಯತ್ನವನ್ನು ನಿಲ್ಲಿಸಬೇಡಿ, ಮುದುವರೆಸಿ’ ಎಂದು ಸಾಂಪ್ರದಾಯಿಕವಾಗಿ ಅಭಿನಂದಿಸಿದರು. ಆದರೆ ಈ ಅಭಿನಂದನೆಯ ಮಾತುಗಳು ಸಭಿಕರನ್ನು ತಲುಪಲು ಅವಕಾಶವಿರಲಿಲ್ಲ! 
  ಪ್ರತಿಭಾ ಪುರಸ್ಕಾರದ ಅಂಗವಾಗಿ, ಅಂದಿನ ಸಮಾರಂಭದ ವೇದಿಕೆಯಲ್ಲಿ ಸುಮಾರು ನೂರು ಜನ ಪ್ರತಿಭಾವಂತ ಜೈನವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಪುರಸ್ಕøತರ ಪರವಾಗಿ ಮಾತನಾಡಲು ಪುರಸ್ಕøತರನ್ನು ಆಹ್ವಾನಿಸಲಾಯಿತು. 
  ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀಗಳವರು ಎಲ್ಲರಿಗೂ ಶುಭಹಾರೈಸಿದರು. ಸಿರಿಭೂವಲಯ ಕುರಿತು ಅವರು ಏನನ್ನೂ ಹೇಳದಿದ್ದರೂ, ವಿದ್ಯಾರ್ಥಿಗಳಿಗೆ ಹಿತವಚನ ನೀಡುವ ಸನ್ನಿವೇಶದಲ್ಲಿ ಮಾತ್ರ   ‘ಮಾನವನ ಎರಡು ಕಣ್ಣುಗಳಲ್ಲಿ ಒಂದು ಅಂಕಿ ಇನ್ನೊಂದು ಅಕ್ಷರ ಎಂಬುದನ್ನು ತಿಳಿದಿರಿ’ ಎಂದು ಸೂಕ್ಷ್ಮವಾಗಿ ಸೂಚಿಸಿದರು. 
  ವೇದಿಕೆಯಮೇಲೆ  ಕುಳಿತುಕೊಳ್ಳಲು ಲೇಖಕನಿಗೆ ಅವಕಾಶವಿರಲಿಲ್ಲ.  ಅಂದಿನ ವೇದಿಕೆಯಲ್ಲಿ ಸಂಸ್ಥೆಯ ವತಿಯಿಂದ ಲೇಖಕನನ್ನು ಸನ್ಮಾನಿಸಲಾಯಿತಾದರೂ ಸಮ್ಮಾನಕ್ಕೆ ಕೃತಜ್ಞತೆ ಸೂಚಿಸುವುದಕ್ಕೂ ಲೇಖಕನಿಗೆ ಅವಕಾಶವಿರಲಿಲ್ಲ. ಲೇಖಕನೇ ಸ್ವಯಿಚ್ಛೆಯಿಂದ ಸಂಬಂಧಿಸಿದವರ ಮೂಲಕ ಮನವಿ ಸಲ್ಲಿಸಿದರೂ ಅದಕ್ಕೆ ಗಮನಹರಿಸಲಿಲ್ಲ! ಅವಕಾಶ ನೀಡಿದ್ದರೆ, ಶ್ರೀ ಹಂಪನಾ ಅವರ ಆಕ್ಷೇಪಣೆಗಳಿಗೆಲ್ಲ ವೇದಿಕೆಯಮೇಲೇ ಸೂಕ್ತ ಪ್ರತಿಕ್ರಿಯೆ ನೀಡಬಹುದಿತ್ತು. 
   ಶ್ರೀಗಳವÀರ ಅನುಗ್ರಹವಚನ ಮುಗಿದ ಕೂಡಲೇ ಶ್ರೀ ಹಂಪನಾ ಅವರು ತುರ್ತಾಗಿ ವೇದಿಕೆಯಿಂದ ನಿರ್ಗಮಿಸಿರು. ಹೀಗಾಗಿ ಅವರೊಂದಿಗೆ ಮಾತನಾಡಿ, ಅವರ ಅನಿಸಿಕೆಗಳಿಗೆ ನನ್ನ ಅಭಿಪ್ರಾಯ ಸೂಚಿಸಲೂ ಅವಕಾಶವಾಗಲಿಲ್ಲ.  ಒಂದು ರೀತಿಯಲ್ಲಿ ಎದುರಾಳಿಯ ಕೈಕಾಲುಗಳನ್ನು ಕಟ್ಟಿಹಾಕಿ ಎಲ್ಲರೆದುರಿಗೆ ಅವನ ಕೆನ್ನೆಗೆ ಚೆನ್ನಾಗಿ ಬಾರಿಸಿ ಬುದ್ಧ್ಧಿವಾದ ಹೇಳಿದಂಥ ಅನುಭವ ನನಗಾಯಿತು!   ಸಿರಿಭೂವಲಯ, ಕುಮುದೇಂದುಮುನಿ, ಎಲ್ಲಪ್ಪಶಾಸ್ತ್ರಿಯವರು, ಕರ್ಲಮಂಗಲಂ ಶ್ರೀಕಂಠಯ್ಯನವರು,  ಅನಂತಸುಬ್ಬರಾಯರು ಹಾಗೂ ಸುಧಾರ್ಥಿಯು ರಚಿಸಿರುವ ಸಿರಿಭೂವಲಯದ ಪರಿಚಯಕೃತಿಗಳನ್ನು ಕುರಿತಂತೆ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಶ್ರೀ ಹಂಪನಾ ಅವರು ಸರ್ವಸ್ವತಂತ್ರರು. ಅವರನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ. ಆದರೆ ಈ ಪರಿಚಯಕೃತಿಗಳನ್ನು ರೂಪಿಸುವ ದಿಸೆಯಲ್ಲಿ ನಾನು ಯಾವುದೇ ಸ್ವಕಪೋಲಕಲ್ಪಿತ ಸಂಗತಿಗಳನ್ನೂ ನಮೂದಿಸಿಲ್ಲ. ಪ್ರಜ್ಞಾವಂತ ಓದುಗರ ಆಂತರ್ಯದಲ್ಲಿ ಅಂಕುರಿಸುವ ಎಲ್ಲ ರೀತಿಯ ಸಂದೇಹಗಳಿಗೂ ಅಲ್ಲಿ ಸ್ಪÀಷ್ಟವಾದ ಪರಿಹಾರಗಳನ್ನು ವಿವರಿಸಲಾಗಿದೆ.  
  ‘ಸಿರಿಭೂವಲಯದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಒಪ್ಪವಂತೆ ಸಾಧಿಸಿ ತೋರಿಸಬೇಕು’ ಎಂಬ ಇವರ ಉಪದೇಶವು ಬಹಳ ಜಾಣತನದ್ದಾಗಿದೆ. ಜಗತ್ತಿನಲ್ಲಿ ಎಲ್ಲರೂ ಏಕಪ್ರಕಾರವಾಗಿ ಸದಾಕಾಲವೂ ಒಪ್ಪುವ ಯಾವುದಾದರೊಂದು ವಿಚಾರವಿದ್ದರೆ; ಅದನ್ನು ಶ್ರೀ ಹಂಪನಾ ಅವರು ಸೂಚಿಸಲಿ. ಅದರಿಂದಮಹತ್ತರವಾದ ಲೋಕೋಪಕಾರವಾಗುತ್ತದೆ. ಇವರ ಅನಿಸಿಕೆಯಂತೆ ಭ್ರಮಾಲೋಕದಲ್ಲಿ ವಿಹರಿಸುವ ಕಲ್ಪನಾಕಾರರು ವಿವರಿಸುವ ಈ ಅಂಕಕಾವ್ಯದಲ್ಲಿ ಸರ್ವಜ್ಞಸ್ವರೂಪಿಯಾದ ಕುಮುದೇಂದು ಮುನಿಯೇ ‘ಜಗತ್ತಿನಲ್ಲಿರುವುದೆಲ್ಲ ಅರೆಸತ್ಯ ಅರೆಮಿಥ್ಯ’ ಎಂದು ಖಚಿತವಾಗಿ ವಿವರಿಸಿದ್ದಾನೆ. ಯಾವುದೇ ವಿಚಾರವಿರಲೀ ಅದನ್ನು ಕೆಲವರು ಸಮರ್ಥಿಸಿದರೆ; ಕೆಲವರು ವಿರೋಧಿಸುವದು ಸಹಜ. ಆದರೆ, ಯಾರೊಬ್ಬರೂ ಯಾವದನ್ನೇ ಆದರೂ ಸಕಾರಣವಾಗಿಯೇ ಸಮರ್ಥಿಸಿದರೂ; ವಿರೋಧಿಸಿದರೂ ಅದು ಸರ್ವಮಾನ್ಯವಾಗುವುದಿಲ್ಲ. ಅಂದಮೇಲೆ ಎಲ್ಲರನ್ನೂ ಒಪ್ಪಿಸಲು ಹೇಗೆ ಸಾಧ್ಯ?!
  1950ಕ್ಕಿಂತ ಮೊದಲಿನಿಂದಲೂ ಸಿರಿಭೂವಲಯ ಹಾಗೂ ಅದರ ‘ಸಂಶೋಧಕ’ ಎಲ್ಲಪ್ಪ ಶಾಸ್ತ್ರಿಯವರ ವಿಚಾರ ತಿಳಿದಿದ್ದಮೇಲೆ ಹಂಪನಾ ಅವರು ಇದುವರೆವಿಗೂ ಮೌನವ್ರತ ಆಚರಿದ ಕಾರಣವೇನು? ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸತ್ಯಸಂಗತಿಗಳನ್ನೆಲ್ಲ ಈ ವಿದ್ವಾಂಸರು ಈಗಲಾದರೂ ಜನತೆಗೆ ಸೂಕ್ತವಾಗಿ ತಿಳಿಸಿದರೆ ಮಹತ್ತರವಾದ ಲೋಕೋಪಕಾರವಾಗುತ್ತದೆ. 
  ಸಿರಿಭೂವಲಯದಲ್ಲಿ ಇದೆ ಎಂದು ಇದುವರೆವಿಗೂ ನಂಬಿರುವುದೆಲ್ಲವೂ ಕೇವಲ ಭ್ರಮೆಯೆಂಬುದು ನಿಜವಾದರೆ, ಈ ಅಚ್ಚರಿಯ ಗ್ರಂಥಕ್ಕೆ ಸಂಬಂಧಿಸಿದ ಕಾಗದ ಪತ್ರಗಳು ದೆಹಲಿಯ ಪ್ರಾಚ್ಯಪತ್ರಾಗಾರದಲ್ಲಿ ರಕ್ಷಣೆಯಾಗಿರುವುದೇಕೆ? ಅದರ ರಕ್ಷಣೆಗಾಗಿ ವೆಚ್ಚವಾಗುತ್ತಿರುವ ಹಣವು ರಾಷ್ಟ್ರೀಯ ಸಂಪತ್ತಿನ ಅಪವ್ಯಯವಾದಂತಾಗುತ್ತದೆ. ಅದನ್ನು ಅಲ್ಲಿಂದ ಹೊರೆತೆಗೆಸಿ ಈ ಗ್ರಂಥದ ಊಹಾಪೋಹಗಳಿಗೆ ಮಾನ್ಯಶ್ರೀ ಹಂಪನಾ ಅವರು ಮಂಗಳಹಾಡಬೇಕೆಂದು ನನ್ನ ಕೋರಿಕೆ. ಭಾರತದ ಜೈನಸಂಪ್ರದಾಯದ ಧಾರ್ಮಿಕ ಮುಖಂಡರ ವಿದ್ವತ್ ಸಲಹೆಗಾರರೂ, ಹಾಗೂ ಸಮಾಜದ ಗಣ್ಯಮಾನ್ಯ ವಿದ್ವಾಂಸರೂ ಆದ  ಶ್ರೀಯುತರಿಗೆ ಇದು ಅತಿ ಸರಳವಾದ  ಕಾರ್ಯವೆಂಬ ನಂಬಿಕೆ ನನಗಿದೆ. 
  2010 ರಲ್ಲಿ ಪ್ರಕಟವಾಗಿರುವ ‘ಸಿರಿಭೂವಲಯಸಾರ’ದಲ್ಲಿ ಕಳೆದ 60 ವರ್ಷಗಳಿಂದ ಸಿರಿಭೂವಲಯದ ವಿಚಾರವಾಗಿ ನಡೆದಿರುವ, ನಡೆಯಿತೆಂದು ಕಲ್ಪಿಸಲಾಗಿರುವ, ನಡೆಯಬೇಕಾಗಿದ್ದ, ಮುಂದೆ ನಡೆಯಬೇಕಿರುವ ಎಲ್ಲ ಚಟುವಟಿಕೆಗಳನ್ನು ಕುರಿತೂ ನಾನು ಖಚಿತವಾಗಿ, ವಿಸ್ತಾರವಾಗಿ ಚರ್ಚಿಸಿದ್ದೇನೆ. ಈ ದಿಸೆಯಲ್ಲಿ ನಾಡಿನ ಬಹುಪಾಲು ವಿದ್ವಾಂಸರ ಅನಿಸಿಕೆಗಳು ಹೇಳಿಕೆಗಳು ಅಲ್ಲಿ ಚÀರ್ಚೆಯಾಗಿದೆ. ಈ ಪರಿಚಯ ಕೃತಿಯ ಪ್ರತಿಗಳು ಸಂಬಂಧಿಸಿದ ಬಹುಪಾಲು ವಿದ್ವಾಂಸರಿಗೆ ತಲುಪಿವೆ. ಅವರೂ ತಮ್ಮ ಪ್ರತಿಕ್ರಿಯೆ ಸೂಚಿಸಿದ್ದಾರೆÉ. ಅವುಗಳನ್ನೂ ಓದುಗರ ಮುಂದಿರಿಸಿದ್ದಾಗಿದೆ. ಶ್ರೀ ಹಂಪನಾ ಅವರೇ ಸೂಚಿಸಿರುವಂತೆ ಅವರು ಸಿರಿಭೂವಲಯದ ವಿಚಾರವಾಗಿ 60 ವರ್ಷಗಳ ಮೌನವ್ರತ ಆಚಿರಿಸಿದ್ದ ಕಾರಣದಿಂದಾಗಿ ಅವರ ಅನಿಸಿಗೆಯು ಅಲ್ಲಿ ಚರ್ಚೆಯಾಗಿಲ್ಲ. ಈಗ ಅವರು ತಮ್ಮ ಮೌನವ್ರತವನ್ನು ಮುರಿದು ಈವಿಚಾರವಾಗಿ ತಮ್ಮ ಅನಿಸಿಕೆಯನ್ನು ಸಾರ್ವಜನಿಕವಾಗಿ ವ್ಯಕ್ತಗೊಳಿಸಿರುವ ಕಾರಣ ಅದಕ್ಕೆ ಪ್ರತಿಕ್ರಿಯಿಸಬೇಕಾದುದು ನನ್ನ ಕರ್ತವ್ಯವಾಗಿದೆ. 
  ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಸೂಚನೆಯ ಕಾರಣದಿಂದಾಗಿ ಈ ಪರಿಚಯ ಕೃತಿಗಳನ್ನು ಶ್ರೀ ಹಂಪನಾ ಅವರಿಗೂ ತಲುಪಿಸಿದ್ದೇನೆ. ಈ ಪರಿಚಯ ಕೃತಿಗಳ ಸರಣಿಯಲ್ಲಿ ಮೊದಲ ಕೃತಿ ಪ್ರಕಟವಾಗಿ ಎರಡು ವರ್ಷಗಳು ಕಳೆದರೂ ಸಾರ್ವಜನಿಕವಾಗಿ ಯಾರೊಬ್ಬರೂ ತಮ್ಮ ಅನಿಸಿಕೆಯನ್ನು ಸೂಚಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ.   ಖಾಸಗಿಯಾಗಿ ನನಗೆ ಬಂದವುಗಳನ್ನು ಸಾಧ್ಯವಿರುವಷ್ಟು ಪ್ರಾಮಾಣಿಕವಾಗಿ ನನ್ನ ಓದುಗರ ಮುಂದಿರಿಸಿದ್ದೇನೆ. ಎಲ್ಲರ ಎಲ್ಲ ಖಾಸಗೀ ಅನಿಸಿಕೆಗಳನ್ನೂ ಯಥಾವತ್ತಾಗಿ ನನ್ನ ಓದುಗರ ಮುಂದಿರಿಸುವ ಇಚ್ಛೆ ನನಗಿಲ್ಲ. ಕಾರಣ ಅವುಗಳಲ್ಲಿ ಶ್ರೀ ಹಂಪನಾ ಅವರು ‘ಅಪಾಯಕಾರಿ’ ಎಂದು ಸೂಚಿಸಿರುವುದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ಹಲವಾರು ಮಾಹಿತಿಗಳಿವೆ!  ಆದರೂ ಕೆಲವೊಂದು ವಿಚಾರಗಳು ಬೆಳಗಾವಿಯಲ್ಲಿ ನಡೆದ ಶಿಬಿರದಲ್ಲಿ ಸಭಿಕರ ಗಮನಕ್ಕೆ ಬಂದಿರುವುದನ್ನು ನನ್ನ ಮುಂದಿನ ಕೃತಿಯಲ್ಲಿ ವಿವರಿಸಲಾಗುತ್ತದೆ.  
    ವೇದಿಕೆಯಲ್ಲಿ ಸಭಿಕರಮುಂದೆ ಭಾಷಣ ಮಾಡುವಾಗ ‘ಈ ಪರಿಚಯ ಕೃತಿಯು ಭ್ರಮಾಲೋಕದಲ್ಲಿ ವಿಹರಿಸುವವರಿಗೆ ಸಂತೋಷನೀಡುತ್ತದೆ’ ‘ಇಲ್ಲಿನ ಮಾಹಿತಿಗಳಿಗೆ ಚಾರಿತ್ರಿಕ ಮಹತ್ವವಿಲ್ಲ’ ‘ಇದರಲ್ಲಿ ಅಪಾಯಕಾರಿಯಾದ ಹೇಳಿಕೆಗಳಿವೆ’ ಎಂದು ಖಚಿತವಾಗಿ ಸೂಚಿಸಿ ಸಭಿಕರಿಗೆ ಸ್ಪಷ್ಟ ಸಂದೇಶ ನೀಡಿದಮೇಲೆ ಲೇಖಕನ ಮುಖಕ್ಕೆ ಮಂಗಳಾರತಿ ಬೆಳಗಿದಂತಾಯ್ತು. ಅಂದಮೇಲೆ ಇಂಥ ಸಾಧಾರಣದರ್ಜೆಯ ಪರಿಚಯ ಕೃತಿಯನ್ನು ರೂಪಿಸಿದ ಅಪಾಯಕಾರಿ ವಿಚಾರ ಸರಣಿಯ ಲೇಖಕನ ಪ್ರಯತ್ನವನ್ನು ಜೈನ ಸಂಪ್ರದಾಯದವರಾಗಲೀ, ಉಳಿದೆಲ್ಲರೂ ಅಗಲೀ ಮೆಚ್ಚುಗೆ ಸೂಚಿಸಿ ಬೆನ್ನು ತಟ್ಟಲು ಹೇಗೆ ಸಾಧ್ಯವಾದೀತು?! ಒಂದುರೀತಿಯಲ್ಲಿ ಇದು ‘ನೀನುಸತ್ತಂತೆ ಮಾಡು; ನಾನು ಅತ್ತಂತೆ ಮಾಡುತ್ತೇನೆ’ ಎಂದು ಒಪ್ಪಂದ ಮಾಡಿಕೊಂಡು ವರ್ತಿಸಿದಂತಾಯ್ತು! 
  ಸಭೆಯಲ್ಲಿ  ಲೇಖಕನನ್ನು ಮೂರ್ಖನೆಂದು ಸೂಚಿಸಬೇಕಿತ್ತು ಅದನ್ನು ವ್ಯವಸ್ಥಿತವಾಗಿ ಯಶಸ್ವಿಯಾಗಿ ಸಾಧಿಸಿದ್ದಾಯ್ತು. ಇದರ ವಿರುದ್ಧ ಲೇಖಕನು ಸಭೆಯಲ್ಲಿ ಉಸಿರೆತ್ತಿದಂತೆಯೂ ಆಗಲಿಲ್ಲ! ಅಂದಮೇಲೆ ಉದ್ದೇಶ ನೆರವೇರಿತಲ್ಲ. ಇದರಿಂದ ನನಗೇನೂ ಚಿಂತೆಯಿಲ್ಲ. 
  ಎಷ್ಟೇ ಸಾವಿರಸಲ ವಿವರಿಸಿದರೂ ಕನ್ನಡ ವಿದ್ವಾಂಸರು ‘ಸಾಂಗತ್ಯ ಛಂದಸ್ಸು 15 ಶತಮಾನದಿಂದ ಈಚಿಗೆ ಪ್ರಚಾರಕ್ಕೆ ಬಂದುದು, ಆದ್ದರಿಂದ ಸಾಂಗತ್ಯ ಛಂದಸ್ಸಿನ ಸಿರಿಭೂವಲಯ 9ನೇ ಶತಮಾದದ್ದಲ್ಲ’ ಎಂದು ತುತ್ತೂರಿ ಊದುತ್ತಲೇ ಇದ್ದಾರೆ. ಈಗ ಶ್ರೀ ಹಂಪನಾ ಅವರೂ ಇದೇ ಹಳೇ ತುತ್ತೂರಿಯನ್ನೇ ತಮ್ಮ ಪುಂಗಿಯಾಗಿ ಊದುತ್ತಿದ್ದಾರೆ. ನಾಗರಾಜನಿಗೆ ಪುಂಗಿಯನಾದವೆಂದರೆ ಪ್ರಿಯವಂತೆ! ಪುಂಗಿಯ ನಾದಕ್ಕೆ ಮನಸೋತು ನಾಗರಾಜ ಹೆಡೆಬಿಚ್ಚಿ ನರ್ತಿಸುತ್ತದೆ ಎನ್ನುತ್ತಾರೆ. ಹಾವಿಗೆ ಕಿವಿಯೇಇಲ್ಲ ಪುಂಗಿಯನಾದ ಆಲಿಸುವುದೆಂತು ಎನ್ನವವರೂ ಇದ್ದಾರೆ. ಇದಕ್ಕೆ ಯಾರು ಏನು ಹೇಳಲುಸಾಧ್ಯ?  
  ಅಸಂಬದ್ಧವಾಗಿ ‘ಸಾಂಗತ್ಯ ಛಂದಸ್ಸಿನಕಾಲ’ ಎಂಬ ಒಂದೇ ಕಾರಣದಿಂದಾಗಿ ಕಾವ್ಯವನ್ನೂ, ಕವಿಯನ್ನೂ, ಇತಿಹಾಸಕ್ಕೆ ಸಂಬಂಧಿಸಿದ ಖಚಿತ ವಿವರಗಳ ಸತ್ಯತೆಯನ್ನೂ ನಿರಾಕರಿಸಲು ಸಾಧ್ಯವೇ? ಕೃತಿಯನ್ನು ಓದಿಯೂ ಅಲ್ಲಿನ ವಿವರಗಳನ್ನು ಏಕಪಕ್ಷೀಯವಾಗಿ ನಿರಾಕರಿಸುವುದು ಯುಕ್ತವೇ? ಎಂಬುದನ್ನು ನಾನು ಸಮರ್ಥಿಸಿಕೊಳ್ಳುವುದಕ್ಕಿಂತಲೂ ಕೃತಿಯನ್ನು ಓದಿ, ಓದುಗರೇ ಅದನ್ನು ನಿರ್ಧರಿಸಿಕೊಳ್ಳುವುದು ಸೂಕ್ತ ಎಂದು ನನ್ನ ಅನಿಸಿಕೆ. 
  ಕೃತಿರಚನೆಯ ಕಾಲದ ವಿಚಾರವಾಗಿ ಸ್ವತಃ ಕವಿಯೇ; ಅದರಲ್ಲೂ ಸರ್ವಜ್ಞಸ್ವರೂಪಿಯೂ, ಸರ್ವಸಂಗ ತ್ಯಾಗಿಯೂಆದ, ದಿಗಂಬರ ಮುನಿಯು ನೀಡಿರುವ ಖಚಿತಮಾಹಿತಿಗಳಿಗಿಂತಲೂ ಇಂದಿನ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳ ಊಹಾತ್ಮಕವಾದ ಹೇಳಿಕೆಗಳೇ ಹೆಚ್ಚು ಮಹತ್ವದವು ಎಂದು ಇಂದಿನ ಲೋಕವು ನಿರ್ಧರಿಸಿದರೆ ಅzಕ್ಕೇ ಮಾನ್ಯತೆ ದೊರೆಯಲಿ. ಅದರಿಂದ ನನಗಾಗುವ ನಷ್ಟವೆನೂ ಇಲ್ಲ!!
 ಈ ವಿವರಗಳನ್ನು ಓದುಗರ ಮುಂದಿರಿಸುವುದಷ್ಟೇ  ನನ್ನ ಉದ್ದೇಶ. ಯಾರನ್ನಾದರೂ ಹೊಗಳುವುದು ಅಥವಾ ತೆಗಳುವುದು ಖಂಡಿತವಾಗಿಯೂ ನನಗೆ ಅಗತ್ಯವಿಲ್ಲ ಎಂಬುದನ್ನು ಓದುಗರು ಗಮನಿಸಬೇಕಾಗಿ ವಿನಂತಿ. ಕೇವಲ ಜೈನ ಸಂಪ್ರದಾಯದವರುಮಾತ್ರವಲ್ಲ; ಕನ್ನಡಿಗರುಮಾತ್ರವಲ್ಲ; ಭಾರತೀಯರು ಮಾತ್ರವಲ್ಲ; ಇಡೀ ಜಗತ್ತಿನ ಮಾನವಕುಲದ ಜ್ಞಾನದ ಮೂಲವನ್ನು ಕುರಿತು ವಿವರಿಸಿರುವ ಸರ್ವಭಾಷಾಮಯಿಯಾದ; ಸರ್ವಶಾಸ್ತ್ರಮಯಿಯಾದ; ಸರ್ವಜ್ಞಾನಮಯಿಯಾದ ಸಿರಿಭೂವಲಯಕ್ಕೆ ಸಂಬಂಧಿಸಿದ  ಈ ಮಾಹಿತಿಯ ಬಗ್ಗೆ ಆಸಕ್ತಿÀ ಇರುವ ಯಾರು ಬೇಕಾದರೂ ಇದನ್ನು ತಮ್ಮ ಮಾಧ್ಯಮದ ಮೂಲಕ ಪ್ರಕಟಿಸಬಹುದಾಗಿದೆ. 
ಸುಧಾರ್ಥಿ ಹಾಸನ. 94499 46280.

16 comments:

Anonymous said...

OOdi besaravaitu. Obba lekhakanige Eee reeti avamAnisuvudu sariye?

Anonymous said...

???

Anonymous said...

ಸಿರಿಭೂವಲಯ ಎಲ್ಲಿದೆ? ಕುಮುದೇಂದು ಯಾರು? ಈ ಹಿಂದೆ ನಾಗರಾಜ ಎಂಬುವವರು ಪ್ರಜಾವಾಣಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಇನ್ನೂ ಕೆಲವರು ಬರೆದಿದ್ದಾರೆ. ಸಿರಿಭೂವಲಯದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಒಪ್ಪವಂತೆ ಸಾಧಿಸಿ ತೋರಿಸಬೇಕು. ಅದಿನ್ನೂ ಆಗಿಲ್ಲ! ????

Anonymous said...

National Archives nallii Enide>

vedasudhe said...

ಏನಿದೆಲ್ಲಾ? ಪುಸ್ತಕಗಳ ಲೋಕಾರ್ಪಣೆಯಲ್ಲಿ ಲೇಖಕರಿಗೇ ವೇದಿಕೆಯಲ್ಲಿ ಅವಕಾಶವಿಲ್ಲ! ಆಮಂತ್ರಣದಲ್ಲಿ ಲೇಖಕರ ಹೆಸರು ಹುಡುಕಬೇಕಿತ್ತು!! ಸಿರಿಭೂವಲಯ ಎಷ್ಟು ನಿಗೂಢವಾಗಿದೆಯೋ ನದರ ಹಿಂದಿನ ರಾಜಕೀಯ ಇನ್ನೂ ನಿಗೂಢವಾಗಿದೆ.

Anonymous said...

lekhakara sangha sthapanege idu sukta kAranavagaballade??

Anonymous said...

sudharthi mattu HAMPA NA avarige omde vedikeyalli charchisalu avakAsha mAdikodi. Siribhuvalayada Amogha adbhuta 718 bhashegaLu, kAla, mUla pratigaLu, kattenAgarAjara lekhanagalu abhiprAyagalu ellavu charccheyagali.

Hampa nA avarige dhanyavAdagalu. HesarAnta aneka smshodhakaru likhita pratikriye needalu munde barali. sarvajanikarige EEgranthada satyasatyate gottAgali. Hampa Na mattu sudharthiyavarige abhinaMdanegaLu

pustaka bidugade samaraMbhadalli naDeda Ee ghatanege Aayojakaru kAranaveMdu nanna abhipraya. Innu munde ee reeti aagadaNte noodikollali

vedasudhe said...

ಹೌದು, ಸಿರಿಭೂವಲಯದಲ್ಲಿ ಎಲ್ಲವೂ ಇದೆ, ಎಂದು ಹೇಳುತ್ತಿರುವುದಕ್ಕೆ ಬಲವಾದ ಕಾರಣಗಳು ಅಥವಾ ಅದು ಉತ್ಪ್ರೇಕ್ಷೆ ಎಂಬುದಕ್ಕೆ ಕಾರಣ ....ಇದನ್ನು ಎರಡೂ ಕಡೆಯವರು ಪ್ರಕಟಿಸಬೇಕು. ಸಿರಿಭೂವಲಯದ ಬಗ್ಗೆ ಚಿಂತನ-ಮಂಥನ ನಡೆಸುವುದಾದರೆ ಸ್ಥಳಾವಕಾಶ ಮತ್ತು ಕಾರ್ಯಕ್ರಮ ನಡೆಸುವ ವ್ಯವಸ್ಥೆಯನ್ನು ಹಾಸನದಲ್ಲಿ ನಾನು ಮಾಡಲು ಸಿದ್ಧ. ಜನ ಬರಲು ಪ್ರಯತ್ನ ಉಳಿದವರು ಮಾದಬೇಕು. ಏನಂತೀರಾ?

Anonymous said...

This is a wonderful suggestion. Lets move forward. Please officially intimate the tentative date to both Sudharthi ji and Dr Hampa Nagarajaia ji. Let it be published on all electronic and print media. Every minute of the debate should be video recorded and should be allowed to display on all interested blogs. All the views of the scholars and the participants viewers should be displayed for further review. speakers should be allowed to speak whatever time they want. There should not be any restriction. It is preferable that speakers written script if any should also be displayed on the blogs.

Let us put an end to the speculation and move forward for understanding KUMUDENDU AND HIS SIRIBHOOVALAYA/SIRIBHUVALAYA.

Best wishes to HARIHARAPURA SHRIDHAR

Anonymous said...

This is a wonderful suggestion. Lets move forward. Please officially intimate the tentative date to both Sudharthi ji and Dr Hampa Nagarajaia ji. Let it be published on all electronic and print media. Every minute of the debate should be video recorded and should be allowed to display on all interested blogs. All the views of the scholars and the participants viewers should be displayed for further review. speakers should be allowed to speak whatever time they want. There should not be any restriction. It is preferable that speakers written script if any should also be displayed on the blogs.

Let us put an end to the speculation and move forward for understanding KUMUDENDU AND HIS SIRIBHOOVALAYA/SIRIBHUVALAYA.

Best wishes to HARIHARAPURA SHRIDHAR

Anonymous said...

ಕುಮುದೇಂದು ಮುನಿ ರಚಿಸಿದ ಸಿರಿಭೂವಲಯ ಗ್ರಂಥದ ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು(ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ ಭಾಷೆಯೂ ಒಂದು ಎಂದು ಅನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.
"ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ ಬ್ರಾಹ್ಮೀಲಿಪಿ ಎಂದು ಅಂಕ ಲಿಪಿಗೆ ಸೌಂದರಿ ಲಿಪಿ ಎಂದು ಹೆಸರಾಗಿದೆ. ಈ ಖಚಿತವಾದ ಮಾಹಿತಿ ಯನ್ನು ಸಿರಿ ಭೂ ವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆಯೂ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿ ಭಾಷೆಯಾಗಿ ಬೆಳೆಯುತ್ತಿದೆ.

ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂ ದೆನ್ನುವುದನು ಕಲಿಸಿದನು
ಸರ್ವಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ

vedasudhe said...

ಈ ಬ್ಲಾಗ್ ಮುಖ್ಯಸ್ಥರು ಗಮನಿಸಬೇಕು, ಇಲ್ಲಿ ಕಾಮೆಂಟ್ ಮಾಡಿ ಪೋಸ್ಟ್ ಮಾಡುವುದಕ್ಕೆ ಕೆಲ ಅದಚಣೆಗಳಿವೆ. ಅದನ್ನು ತೆಗೆದು ಹಾಕಬೇಕು. ಬರೆದದ್ದು ನೇರವಾಗಿ ಪೋಸ್ಟ್ ಮಾಡುವಂತಿರಬೇಕು. ಸೆಟ್ಟಿಂಗ್ಸ್ ನಲ್ಲಿ ಅದನ್ನು ಸರಿಪಡಿಸಬಹುದು.ಇದು ಸುಧಾರ್ತಿಯವರ ಬ್ಲಾಗ್ ಆಗಿದ್ದರೆ ನನ್ನ ಸಹಾಯ ಪಡೆಯಬಹುದು. ಪ್ರತಿಕ್ರಿಯಿಸುವವರೂ ಕೂಡ ಲಾಗ್ಇನ್ ಆಗಿ ಪ್ರತಿಕ್ರಿಯಿಸಬೇಕು. ಅನಾನಿಮಸ್ ಹೆಸರಲ್ಲಿ ಬರೆದರೆ ಯಾರೂ ಅಂತ ತಿಳಿಯೋಣ. ಕನ್ನಡದಲ್ಲಿ ಬರೆಯಲು ಇಲ್ಲಿ ಸಹಾಯ ಇದೆ ನೋಡಿ. http://www.facebook.com/l.php?u=http%3A%2F%2Fwww.google.com%2Ftransliterate%2FKannada&h=nAQFGSeiV

ಅಥವಾ http://kannadascript.blogspot.in/

Anonymous said...

ಕ್ರಿ ಶ ನಾಲ್ಕನೇ ಶತಮಾನಕ್ಕೆ ಮೊದಲು ಕನ್ನಡ ಅಥವಾ ತೆಲುಗು ಭಾಷೆಯಲ್ಲಿ ಸಾಹಿತ್ಯವಿದ್ದಿತೆಂದು ಹೇಳಲು ಆಧಾರಗಳು ಸಾಲದು
-- ಡಿ ಎಲ್ ನರಸಿಂಹಾಚಾರ್

sastry said...

ಸಿರಿಭೂವಲಯ ತುಂಬಾ ವಿಷಯಗಳನ್ನು ತಿಳಿದುಕೊಳ್ಳಲು ಈ ತಾಣ ಸಹಾಯಕಾರಿಯಾಗಲಿದೆ ಎಂದು ಬಯಸುವೆ,
--ಶಾಸ್ತ್ರಿ ಕೆಂಭಾವಿಮಠ, ಕೊಟ್ಟೂರು

Knowledge Seeker said...

ಸಾವಿರಾರು, ಲಕ್ಷಾಂತರ, ಕೋಟ್ಯಂತರ ವರ್ಷ ಇತಿಹಾಸ ಉಳ್ಳ ಕರ್ಣಾಟ ಭಾಷೆಯಲ್ಲಿ ಸಾಂಗತ್ಯವು ಎಷ್ಟೋ ಹಿಂದೆಯೇ ಬಳಕೆಯಲ್ಲಿತ್ತು ಎಂದು ಕೇಳಿದ್ದೇನೆ. ಸಾಂಗತ್ಯ ಪದ್ಯಶೈಲಿಯ ಆಧಾರಗಳು ಸಿಕ್ಕಿಲ್ಲ ಎಂದಾಕ್ಷಣ ಅದು ಆಧುನಿಕವೆಂದಲ್ಲ. ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಸಿರಿಭೂವಲಯದ ಪ್ರಚಾರವನ್ನೇ ಮುಚ್ಚು ಹಾಕಿ, ಕನ್ನಡವನ್ನು ಒಂದು ಆಧುನಿಕ ಭಾಷೆ ಎಂದು ತಿರುಚಿ ಭಾಷಾದ್ರೋಹ ಎಸೆಗುತ್ತಿದ್ದಾರೆ. ಪ್ರಸಕ್ತದಲಿ ಸಿರಿಗನ್ನಡಂ ಗೆಲ್ಗೆಯಾಗಲು ಸಿರಿಭೂವಲಯಂ ಗೆಲ್ಗೆ ಆಗಲೇಬೇಕು.

ಜಲನಯನ said...

ಪದಾರ್ಥ ಚಿಂತಾಮಣಿ - ಫೇಸ್ಬುಕ್ ಸಮೂಹದಲ್ಲಿ ಸಿರಿಭೂವಲಯದ ಬಗ್ಗೆ ಕೆಲ ಚಿಂತಕರು ಅಭಿಪ್ರಾಯ ಮತ್ತು ಪದ ಅರ್ಥ ಇತ್ಯಾದಿ ಕೇಳಿದ್ದಾರೆ, ಕನ್ನಡದ ಪ್ರಾಚೀನತೆಯ ಪ್ರಮುಖ ಆಧಾರ ಮತ್ತು ಮೈಲಿಗಲ್ಲಿನಂತಹ ಕೃತಿಯಾದ "ಸಿರಿಭುವಲಯ" ದ ಬಗ್ಗೆ ನನಗೂ ಆಸಕ್ತಿ ಹೆಚ್ಚಿತು..ಆಗ ಕಂಡುದೇ ನಿಮ್ಮ ಈ ಬ್ಲಾಗ್.... ಆಧಾರಗಳನ್ನು ಹುಡುಕಿ ಕನ್ನಡವನ್ನು ಮತ್ತು ಅದರ ನಿಜ ಸ್ಥಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಶುಭವಾಗಲಿ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.